SK Home Ad
Home ಸಿನಿ ಮಿಲ್ಸ್ ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ: ಆರಂಭದಿಂದ 18 ವರ್ಷಗಳ ಪಯಣ; ನಗುವಿನ ಮೂಲಕ ಸಮಾಜದ...

ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ: ಆರಂಭದಿಂದ 18 ವರ್ಷಗಳ ಪಯಣ; ನಗುವಿನ ಮೂಲಕ ಸಮಾಜದ ಕನ್ನಡಿ ಹಿಡಿದ ಸೂಪರ್‌ ಹಿಟ್‌ ಸೀರಿಯಲ್‌

0
55

ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ: ಭಾರತೀಯ ಕಿರುತೆರೆಯ ಇತಿಹಾಸದಲ್ಲಿ ದೀರ್ಘಕಾಲದಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಧಾರಾವಾಹಿಗಳ ಪಟ್ಟಿಯಲ್ಲಿ “ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ” (Taarak Mehta Ka Ooltah Chashmah) ಪ್ರಮುಖ ಸ್ಥಾನದಲ್ಲಿದೆ. 28 ಜುಲೈ 2008ರಲ್ಲಿ ಆರಂಭವಾದ ಈ ಧಾರಾವಾಹಿ 2026ರಲ್ಲಿ 18 ವರ್ಷಗಳನ್ನು ಪೂರೈಸಿದೆ. ಈ ಧಾರಾವಾಹಿಯ ಸೃಷ್ಟಿಕರ್ತ ಮತ್ತು ನಿರ್ಮಾಪಕರಾಗಿ ಅಸಿತ್ ಕುಮಾರ್ ಮೋದಿ ಇವರು ಗುರುತಿಸಿಕೊಂಡಿದ್ದಾರೆ. Neela Tele Films ನಿರ್ಮಾಣ ಸಂಸ್ಥೆಯ ಮೂಲಕ ಧಾರಾವಾಹಿ ನಿರ್ಮಾಣಗೊಂಡು 2008ರಂದು ಪ್ರಸಾರ ಆರಂಭಿಸಿತು. ನಂತರ ಇದು Sony SAB ವಾಹಿನಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಯಿತು.

ಸಾಮಾನ್ಯ ಕುಟುಂಬಗಳ ದಿನನಿತ್ಯದ ಬದುಕು, ನೆರೆಹೊರೆಯವರ ನಡುವಿನ ಸಂಬಂಧ, ಸ್ನೇಹ, ಕುಟುಂಬದ ಸಮಸ್ಯೆಗಳು, ಸಾಮಾಜಿಕ ವಿಚಾರಗಳು ಮತ್ತು ಹಾಸ್ಯವನ್ನು ಒಂದೇ ಕಥೆಯಲ್ಲಿ ಬೆರೆಸಿ ಪ್ರೇಕ್ಷಕರ ಮುಂದೆ ಇಡುವುದು ಈ ಧಾರಾವಾಹಿಯ ವಿಶೇಷತೆ. ಗೋಕುಲಧಾಮ್ ಸೊಸೈಟಿ” ಎಂಬ ಕಾಲ್ಪನಿಕ ಸಮಾಜ ಪ್ರೇಕ್ಷಕರ ನೆನಪಿನಲ್ಲಿ ಇನ್ನೂ ಜೀವಂತವಾಗಿದೆ.

ಧಾರಾವಾಹಿ ಬಂದಿದ್ದು ಹೇಗೆ ಗೊತ್ತಾ?: “ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ” ಎಂಬುದು ಸಂಪೂರ್ಣವಾಗಿ ಹೊಸದಾಗಿ ಸೃಷ್ಟಿಸಿದ ಕಥೆಯಲ್ಲ. ಇದು ಖ್ಯಾತ ಗುಜರಾತಿ ಹಾಸ್ಯಲೇಖಕ ತಾರಕ್ ಮೆಹ್ತಾ ಅವರ ಬರಹಗಳಿಂದ ಪ್ರೇರಣೆ ಪಡೆದಿದೆ. ತಾರಕ್ ಮೆಹ್ತಾ ಅವರು Chitralekha ಪತ್ರಿಕೆಯಲ್ಲಿ “Duniya Ne Undha Chashma” ಎಂಬ ಹಾಸ್ಯ ಅಂಕಣವನ್ನು ಬರೆಯುತ್ತಿದ್ದರು. ಸಮಾಜದ ಸಾಮಾನ್ಯ ಘಟನೆಗಳನ್ನು ಹಾಸ್ಯಮಯವಾಗಿ ನೋಡುವ ಅವರ ಬರಹಗಳು ಸಾಕಷ್ಟು ಜನಪ್ರಿಯವಾಗಿದ್ದವು.

ಕಾರ್ಯಕ್ರಮದ ಮೇನ್ ಕ್ಯಾರೆಕ್ಟರ್ ಜೇಠಾಲಾಲ್ ಪಾತ್ರದ ಮೂಲಕ ನಟ ದಿಲೀಪ್ ಜೋಶಿ ಮನೆಮಾತಾಗಿದ್ದಾರೆ. ಅವರು ಈ ಧಾರವಾಹಿಯಲ್ಲಿ ಗುಜರಾತದ ಕುಟುಂಬಸ್ಥರಾಗಿ ಕಾಣಿಸಿದ್ದಾರೆ. ಅವರ ವಿಶಿಷ್ಟ ಹಾಸ್ಯಪ್ರಜ್ಞೆ, ಮಾತಿನ ಶೈಲಿ, ಮುಗ್ಧತೆ ಮತ್ತು ಸಮಯಪ್ರಜ್ಞೆಯ ಅಭಿನಯ ಪ್ರೇಕ್ಷಕರನ್ನು ಸದಾ ನಗಿಸುತ್ತದೆ. ಕಷ್ಟದ ಸಂದರ್ಭಗಳಲ್ಲಿ ಗಾಬರಿಯಾಗುವ ಜೇಠಾಲಾಲ್, ಕುಟುಂಬದ ಮೇಲಿನ ಪ್ರೀತಿ ಮತ್ತು ಸ್ನೇಹಿತರೊಂದಿಗಿನ ಆತ್ಮೀಯತೆಯಿಂದ ಇನ್ನಷ್ಟು ಜನಪ್ರಿಯರಾಗಿದ್ದಾರೆ. ಇಂದಿಗೂ ಅವರು “ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ” ಧಾರಾವಾಹಿಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಇನ್ನು ಉಳದಂತೆ ಮಹಾರಾಷ್ಟ್ರ, ತಮಿಳು ಮತ್ತು ಬೆಂಗಾಲಿ, ಫಾರ್ಸಿ ,ಸೋಡಿ, ಮುಸ್ಲಿಂ ಟಪ್ಪು ಸೇನೆ ಸೇರಿದಂತೆ ಅನೇಕ ಪಾತ್ರಗಳು ಗೋಕುಲಧಾಮ್ ಸೊಸೈಟಿಗೆ ವಿಭಿನ್ನ ಬಣ್ಣ ನೀಡಿದವು. ಕಾರ್ಯಕ್ರಮದ ಅಧಿಕೃತ ವಿವರಣೆಯಲ್ಲಿಯೂ ಜೇಠಾಲಾಲ್, ದಯಾಬೆನ್, ತಾರಕ್ ಮೆಹ್ತಾ ಮತ್ತು ಗೋಕುಲಧಾಮ್ ಸೊಸೈಟಿಯ ಇತರ ನಿವಾಸಿಗಳ ನಡುವಿನ ಸಂಬಂಧವನ್ನು ಕಾರ್ಯಕ್ರಮದ ಕೇಂದ್ರವಾಗಿ ವಿವರಿಸಲಾಗಿದೆ. ಇಲ್ಲಿಯವರೆಗೆ ಧಾರಾವಾಹಿಯಲ್ಲಿ 4795 ಸಂಚಿಕೆಗಳು ಪ್ರಸಾರವಾಗಿದ್ದು, ಪ್ರಸ್ತುತವಾಗಿ 4796 ನೇ ಎಪಿಸೋಡ್ ನಡಿತಾ ಇದೆ. ಭಾರತ ಅಲ್ಲದೆ ವಿದೇಶದಲ್ಲಿ ಕೂಡಾ ಇತಿಹಾಸ್ ಬರೆದು ಒಂದು ಧಾರವಾಹಿ ಎನ್ನಬಹುದು.

ಟಪ್ಪು ಪಾತ್ರವನ್ನು ಭವ್ಯ ಗಾಂಧಿ ನಿರ್ವಹಿಸಿದ ನಂತರ ರಾಜ್ ಅನಾಡ್ಕಟ್ ಮತ್ತು ಬಳಿಕ ಇತರ ಕಲಾವಿದರು ಪಾತ್ರವನ್ನು ನಿರ್ವಹಿಸಿದರು. ಸೋನು ಪಾತ್ರದಲ್ಲಿಯೂ ಹಲವು ಬದಲಾವಣೆಗಳಾಗಿವೆ. ಗೋಲಿ ಪಾತ್ರದಲ್ಲಿದ್ದ ಕುಶ್ ಶಾ ನಿರ್ಗಮಿಸಿದ ನಂತರ ಧರ್ಮಿತ್ ಶಾ ಪಾತ್ರಕ್ಕೆ ಬಂದರು. ಹೀಗೆ ಹಲವು ಪಾತ್ರಗಳಿಗೆ ಹೊಸ ಮುಖಗಳು ಬಂದಿವೆ. ಹಳೆಯ ಕಲಾವಿದರೊಂದಿಗೆ ಪ್ರೇಕ್ಷಕರಿಗೆ ಇದ್ದ ಭಾವನಾತ್ಮಕ ಸಂಬಂಧದಿಂದಾಗಿ ಹೊಸ ಕಲಾವಿದರನ್ನು ಸ್ವೀಕರಿಸಲು ಕೆಲವರಿಗೆ ಸಮಯ ಬೇಕಾಯಿತು.

18 ವರ್ಷಗಳ ನಂತರವೂ ಏಕೆ ಚರ್ಚೆಯಲ್ಲಿದೆ?: ಒಂದು ಧಾರಾವಾಹಿ 18 ವರ್ಷಗಳ ಕಾಲ ಪ್ರೇಕ್ಷಕರ ಗಮನದಲ್ಲಿರುವುದು ಸಾಮಾನ್ಯ ಸಂಗತಿಯಲ್ಲ. ಹೊಸ ಧಾರಾವಾಹಿಗಳು, OTT ಪ್ಲಾಟ್ಫಾರ್ಮ್ಗಳು ಮತ್ತು ಸಾಮಾಜಿಕ ಮಾಧ್ಯಮಗಳ ನಡುವೆ TMKOC ತನ್ನದೇ ಆದ ಪ್ರೇಕ್ಷಕರನ್ನು ಉಳಿಸಿಕೊಂಡಿದೆ. 2026ರ ಜುಲೈ 28ರಂದು ಕಾರ್ಯಕ್ರಮವು 18 ವರ್ಷಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮದ ತಂಡವು ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಇಂಡಿಯಾ ಡೇ ಆಚರಣೆಗಳಲ್ಲಿಯೂ ಭಾಗವಹಿಸಿತ್ತು. ಇದು ಕಾರ್ಯಕ್ರಮದ ಜನಪ್ರಿಯತೆ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.

“ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ” ಕೇವಲ ಒಂದು ಕಾಮಿಡಿ ಶೋ ಅಲ್ಲ. ಇದು ಭಾರತೀಯ ಮಧ್ಯಮವರ್ಗದ ಕುಟುಂಬ ಜೀವನ, ನೆರೆಹೊರೆಯ ಸಂಬಂಧಗಳು, ಸ್ನೇಹ, ಭಿನ್ನ ಸಂಸ್ಕೃತಿಗಳ ಸಹಬಾಳ್ವೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಹಾಸ್ಯದ ಮೂಲಕ ತೋರಿಸಿದ ಒಂದು ದೀರ್ಘ ಕಿರುತೆರೆ ಪಯಣ. ಆದ್ರೂ 2008ರಲ್ಲಿ ಆರಂಭವಾದ ಗೋಕುಲಧಾಮ್ ಸೊಸೈಟಿಯ ಈ ಪಯಣ 2026ರಲ್ಲಿ 18 ವರ್ಷಗಳ ನಂತರವೂ ಮುಂದುವರಿದಿದೆ. ಹಳೆಯ ಅಭಿಮಾನಿಗಳಿಗೆ ಇದು ನೆನಪುಗಳ ಭಾಗವಾಗಿದ್ದರೆ, ಹೊಸ ತಲೆಮಾರಿಗೆ ಇದು ಭಾರತೀಯ ಕಿರುತೆರೆಯ ದೀರ್ಘಕಾಲದ ಕಾಮಿಡಿ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಸಾರಿಕಾ ಈ ಪೂಜಾರಿ