SK Home Ad
Home ಸಿನಿ ಮಿಲ್ಸ್ ಬದುಕಿನ ಅನಿರೀಕ್ಷಿತ ತಿರುವುಗಳ ‘ಹವಾಮಾನ ವರದಿ’ ಚಿತ್ರದ ಟೀಸರ್ ಬಿಡುಗಡೆ!

ಬದುಕಿನ ಅನಿರೀಕ್ಷಿತ ತಿರುವುಗಳ ‘ಹವಾಮಾನ ವರದಿ’ ಚಿತ್ರದ ಟೀಸರ್ ಬಿಡುಗಡೆ!

0
38
ಹವಾಮಾನದಂತೆ ಬದಲಾಗುವ ಮನುಷ್ಯನ ಬದುಕು: ಬಿಡುಗಡೆಯಾಯಿತು ವಿಭಿನ್ನ ಕಥಾಹಂದರದ ‘ಹವಾಮಾನ ವರದಿ’ ಟೀಸರ್!

ಎರಡು ವೈರುಧ್ಯಗಳ ನಡುವೆ ಅರಳಿದ ಪ್ರೀತಿ, ಸವಾಲುಗಳ ‘ಹವಾಮಾನ ವರದಿ’ ಚಿತ್ರದ ಟೀಸರ್ ಬಿಡುಗಡೆ!

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದ ಸಿನಿಮಾಗಳು ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಈ ಸಾಲಿಗೆ ಸೇರುವ ನಿರೀಕ್ಷೆ ಮೂಡಿಸಿರುವ ಚಿತ್ರ ‘ಹವಾಮಾನ ವರದಿ’. ಎರಡು ವಿಭಿನ್ನ ಸ್ವಭಾವದ ವ್ಯಕ್ತಿಗಳು ಪರಸ್ಪರ ಒಲವಿನಿಂದ ಒಂದಾಗಿ ಹೊಸ ಬದುಕಿನ ಕನಸು ಕಾಣುತ್ತಾರೆ. ಆದರೆ ಅವರ ಜೀವನದಲ್ಲಿ ವಿಧಿ ಬೇರೆಯದೇ ಯೋಜನೆ ರೂಪಿಸಿರುತ್ತದೆ. ಪ್ರೀತಿ, ಬದುಕಿನ ಸವಾಲುಗಳು ಮತ್ತು ಅನಿರೀಕ್ಷಿತ ತಿರುವುಗಳ ಸುತ್ತ ಸಾಗುವ ಕಥೆಯ ಸುಳಿವನ್ನು ಚಿತ್ರದ ಪರಿಚಯಾತ್ಮಕ ಸಾಲುಗಳೊಂದಿಗೆ ಚಿತ್ರದ ಟೀಸರ್ ಬಿಡುಗಡೆ.

ಶರತ್ ಚಕ್ರವರ್ತಿ ಅವರ ನಿರ್ದೇಶನದಲ್ಲಿ ಮತ್ತು ಶಿವರಾಜ್ ಕೆ.ಆರ್. ಪೇಟೆ ಹಾಗೂ ನಿರೀಕ್ಷಾ ರಾವ್ ಮುಖ್ಯ ಭೂಮಿಕೆಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.ಶ್ರೀಮತಿ ಲಲಿತಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಹರಿಪ್ರಸಾದ್ ಟಿ.ಎನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಹಳ್ಳಿಯ ಸುಂದರ ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು ರೂಪುಗೊಂಡಿರುವ ಈ ಚಿತ್ರದಲ್ಲಿ ಗ್ರಾಮೀಣ ಬದುಕಿನ ಸಹಜ ಸೊಗಡು ಹಾಗೂ ಮಾನವ ಸಂಬಂಧಗಳ ಸೂಕ್ಷ್ಮ ಭಾವನೆಗಳಿಗೆ ಮಹತ್ವ ನೀಡಿರುವಂತೆ ಕಾಣುತ್ತದೆ.

ವಿಭಿನ್ನ ಮನೋಭಾವದ ಇಬ್ಬರು ವ್ಯಕ್ತಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಯಿಂದ ಒಂದಾಗುವುದು ಕಥೆಯ ಪ್ರಮುಖ ಎಳೆಯಾಗಿದೆ. ಆದರೆ ಅವರ ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಘಟನೆಗಳು ಅವರನ್ನು ಜೀವನ್ಮರಣದ ಹೋರಾಟಕ್ಕೆ ತಳ್ಳುತ್ತವೆ ಎಂಬ ಕುತೂಹಲಕಾರಿ ಅಂಶವನ್ನು ಚಿತ್ರದ ಕಥಾಸೂಚನೆ ಮುಂದಿಡುತ್ತದೆ. ಚಿತ್ರದಲ್ಲಿ ಹಾಸ್ಯ ನಟ ಶಿವರಾಜ್ ಕೆ.ಆರ್. ಪೇಟೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ನಿರೀಕ್ಷಾ ರಾವ್, ಜಹಾಂಗೀರ್ ಎಂ.ಎಸ್, ಮತ್ತು ಬಾಲ ರಾಜವಾಡಿ ಸೇರಿದಂತೆ ದೊಡ್ಡ ತಾರಾಗಣವಿದೆ.

‘ಹವಾಮಾನ ವರದಿ’ ಎಂಬ ಶೀರ್ಷಿಕೆಯೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ. ಹವಾಮಾನದ ಬದಲಾವಣೆಯಂತೆ ಮನುಷ್ಯನ ಬದುಕಿನಲ್ಲಿಯೂ ಅನಿರೀಕ್ಷಿತ ಬದಲಾವಣೆಗಳು ಸಂಭವಿಸಬಹುದು ಎಂಬ ಭಾವನೆಯನ್ನು ಈ ಶೀರ್ಷಿಕೆ ಪ್ರತಿಬಿಂಬಿಸುವಂತಿದೆ. ಪ್ರೀತಿ ಮತ್ತು ಬದುಕಿನ ಸಂಘರ್ಷವನ್ನು ಹಳ್ಳಿಯ ಪರಿಸರದಲ್ಲಿ ಕಟ್ಟಿಕೊಡುವ ಪ್ರಯತ್ನ ಚಿತ್ರದಲ್ಲಿದೆ ಎಂಬ ಸುಳಿವು ದೊರೆಯುತ್ತದೆ. ಈ ಚಿತ್ರಕ್ಕೆ ಅಪರಾಜಿತ್ ಶ್ರೀಸ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡುತ್ತಿದ್ದು, ಹಾಡುಗಳ ಹಕ್ಕುಗಳನ್ನು ಆನಂದ ಆಡಿಯೋ (Aananda Audio Video) ಪಡೆದುಕೊಂಡಿದೆ.