SK Home Ad
Home ಸಿನಿ ಮಿಲ್ಸ್ ʼಕರಾವಳಿʼ ಗತವೈಭವದ ಮುಂದುವರಿದ ಅಧ್ಯಾಯದ Trailer ಬಿಡುಗಡೆ

ʼಕರಾವಳಿʼ ಗತವೈಭವದ ಮುಂದುವರಿದ ಅಧ್ಯಾಯದ Trailer ಬಿಡುಗಡೆ

0
52

‘ಕರಾವಳಿ’ ಟ್ರೈಲರ್ ಅದ್ದೂರಿ ಬಿಡುಗಡೆ; ಕಂಬಳದ ವೈಭವ, ಪ್ರಜ್ವಲ್-ರಾಜ್ ಬಿ ಶೆಟ್ಟಿ ಪಾತ್ರಗಳ ಸಸ್ಪೆನ್ಸ್ ಸಿನಿಪ್ರಿಯರಲ್ಲಿ ಕುತೂಹಲ

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಕರಾವಳಿ’ ಚಿತ್ರದ ಟ್ರೈಲರ್ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಗುರುದತ್ ಗಾಣಿಗ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಜುಲೈ 24ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು. ಟ್ರೈಲರ್ ಬಿಡುಗಡೆಯ ಮುನ್ನ ಪ್ರಜ್ವಲ್ ದೇವರಾಜ್ ಅವರ ಡಬ್ಬಿಂಗ್ ಕುರಿತು ಸಾಕಷ್ಟು ಚರ್ಚೆ ಮತ್ತು ಗೊಂದಲಗಳು ಉಂಟಾಗಿದ್ದರೂ, ಅವೆಲ್ಲವನ್ನೂ ಮೀರಿ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಸಿನಿಮಾ ಎಲ್ಲಕ್ಕಿಂತ ದೊಡ್ಡದು’: ‘ಕರಾವಳಿ’ ವಿವಾದದ ಬಗ್ಗೆ ರಾಜ್ ಬಿ. ಶೆಟ್ಟಿ ಬೇಸರ

ಕರಾವಳಿಯ ಸಂಸ್ಕೃತಿಗೆ ಜೀವ ತುಂಬಿದ ಟ್ರೈಲರ್: ಬಿಡುಗಡೆಯಾದ ಟ್ರೈಲರ್‌ನಲ್ಲಿ ಕರಾವಳಿ ಭಾಗದ ಪ್ರಕೃತಿ ಸೌಂದರ್ಯ, ಸಂಸ್ಕೃತಿ, ಸಂಪ್ರದಾಯ ಹಾಗೂ ಜನಜೀವನವನ್ನು ಅದ್ಭುತವಾಗಿ ತೆರೆ ಮೇಲೆ ಕಟ್ಟಿಕೊಡಲಾಗಿದೆ. ವಿಶೇಷವಾಗಿ ಕರಾವಳಿಯ ಹೆಮ್ಮೆಯ ಕ್ರೀಡೆಯಾದ ಕಂಬಳವನ್ನು ಅತ್ಯಂತ ವೈಭವದಿಂದ ಚಿತ್ರಿಸಿರುವುದು ಟ್ರೈಲರ್‌ನ ಪ್ರಮುಖ ಆಕರ್ಷಣೆಯಾಗಿದೆ.

ಆಕ್ಷನ್, ಭಾವನಾತ್ಮಕ ದೃಶ್ಯಗಳು ಹಾಗೂ ಸಸ್ಪೆನ್ಸ್‌ಗಳ ಮಿಶ್ರಣದಿಂದ ಕೂಡಿರುವ ಟ್ರೈಲರ್ ಚಿತ್ರವು ಕೇವಲ ಕಂಬಳದ ಕಥೆಯಲ್ಲ, ಕರಾವಳಿ ಜೀವನದ ಹಲವು ಮುಖಗಳನ್ನು ಅನಾವರಣಗೊಳಿಸಲಿದೆ ಎಂಬ ಸುಳಿವು ನೀಡಿದೆ.

ಇದನ್ನೂ ಓದಿ: ಕಾಕ್ರೋಚ್ ಪಕ್ಷದ ‘X’ ಖಾತೆ ತಡೆ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಪ್ರಜ್ವಲ್-ರಾಜ್ ಬಿ ಶೆಟ್ಟಿ ಸಂಬಂಧವೇನು?: ಟ್ರೈಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ ಶೆಟ್ಟಿ ಪಾತ್ರಗಳ ನಡುವಿನ ಸಂಬಂಧವನ್ನು ಚಿತ್ರತಂಡ ರಹಸ್ಯವಾಗಿಯೇ ಉಳಿಸಿದೆ. ಇಬ್ಬರ ಪಾತ್ರಗಳು ಕಥೆಯ ಕೇಂದ್ರಬಿಂದುವಾಗಿರುವ ಸುಳಿವು ಸಿಕ್ಕಿದ್ದು, ಇವರ ನಡುವಿನ ಸಂಘರ್ಷ ಅಥವಾ ಬಾಂಧವ್ಯದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಇದರ ಜೊತೆಗೆ ನಟ ರಮೇಶ್ ಇಂದಿರ, ಮಿತ್ರ, ಹಿರಿಯ ನಟ ಶ್ರೀಧರ್ ಅವರ ಪಾತ್ರಗಳೂ ಟ್ರೈಲರ್‌ನಲ್ಲಿ ಗಮನ ಸೆಳೆದಿವೆ.

ಡಬ್ಬಿಂಗ್ ವಿವಾದಕ್ಕೆ ನಿರ್ದೇಶಕರ ಸ್ಪಷ್ಟನೆ : ಟ್ರೈಲರ್ ಬಿಡುಗಡೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, ಪ್ರಜ್ವಲ್ ದೇವರಾಜ್ ಅವರ ಡಬ್ಬಿಂಗ್ ಕುರಿತು ಎದ್ದಿದ್ದ ವಿವಾದಕ್ಕೆ ಸ್ಪಷ್ಟನೆ ನೀಡಿದರು. ಇದರ ಜೊತೆಗೆ ಪ್ರಜ್ವಲ್ ಅವರ ಸಂಭಾವನೆ ಕುರಿತು ಹರಿದಾಡುತ್ತಿದ್ದ ಊಹಾಪೋಹಗಳಿಗೂ ಉತ್ತರಿಸಿದ ಅವರು, ಚಿತ್ರದ ನಿರ್ಮಾಣದ ಹಲವು ಆಸಕ್ತಿದಾಯಕ ಅನುಭವಗಳನ್ನು ಹಂಚಿಕೊಂಡರು.

ಇದನ್ನೂ ಓದಿ: ‘PDO ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ’– ಡೆತ್‌ನೋಟ್‌ನಲ್ಲಿ ಆರೋಪ

380ಕ್ಕೂ ಹೆಚ್ಚು ಕೋಣಗಳೊಂದಿಗೆ ಚಿತ್ರೀಕರಣ : ಚಿತ್ರದ ಚಿತ್ರೀಕರಣದ ವೇಳೆ ಸುಮಾರು 380ಕ್ಕೂ ಹೆಚ್ಚು ಕೋಣಗಳನ್ನು ಬಳಸಿಕೊಂಡು ಕಂಬಳದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ ಎಂದು ಗುರುದತ್ ಗಾಣಿಗ ತಿಳಿಸಿದರು. ನೈಜತೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕರಾವಳಿ ಭಾಗದ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.

‘ಇದು ಅಪ್ಪಟ ಕನ್ನಡದ ಸಿನಿಮಾ’ ಎಂದ ರಾಜ್ ಬಿ ಶೆಟ್ಟಿ : ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಾಜ್ ಬಿ ಶೆಟ್ಟಿ, ‘ಕರಾವಳಿ’ ಅಪ್ಪಟ ಕನ್ನಡದ ನೆಲದ ಕಥೆಯಾಗಿದ್ದು, ಇದು ಪ್ಯಾನ್ ಇಂಡಿಯಾ ಟ್ಯಾಗ್‌ಗಾಗಿ ನಿರ್ಮಿಸಿರುವ ಚಿತ್ರವಲ್ಲ ಎಂದು ಹೇಳಿದರು. “ನಮ್ಮ ನೆಲದ ಕಥೆ ಜಗತ್ತಿನಾದ್ಯಂತ ತಲುಪಬೇಕು. ಒಳ್ಳೆಯ ಸಿನಿಮಾ ಭಾಷೆಯ ಗಡಿ ದಾಟುತ್ತದೆ. ಅದಕ್ಕಾಗಿ ಈ ಸಿನಿಮಾ ಎಲ್ಲೆಡೆ ಪ್ರೇಕ್ಷಕರನ್ನು ತಲುಪಲಿ ಎಂಬುದು ನಮ್ಮ ಆಶಯ” ಎಂದು ಅವರು ಹೇಳಿದರು.

ಇದನ್ನೂ ಓದಿ: ಬರಗಾಲ, ರೈತರ ಸಂಕಷ್ಟದತ್ತ ಸರ್ಕಾರದ ಗಮನ: CM ಡಿ.ಕೆ. ಶಿ ಭರವಸೆ

ಚಿತ್ರತಂಡದ ಸಂಭ್ರಮ : ಕಾರ್ಯಕ್ರಮದಲ್ಲಿ ನಾಯಕಿಯರಾದ ಸಂಪದಾ ಮತ್ತು ಸುಷ್ಮಿತಾ ತಮ್ಮ ಪಾತ್ರಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಹಿರಿಯ ನಟ ಶ್ರೀಧರ್, ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್, ಛಾಯಾಗ್ರಾಹಕ ಅಭಿಮನ್ಯು ಸದಾನಂದನ್, ನಟ ಮಿತ್ರ ಹಾಗೂ ವಿತರಕ ಸುಪ್ರೀತ್ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿತು.

ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ : ‘ಕರಾವಳಿ’ ಚಿತ್ರವನ್ನು ಗುರುದತ್ ಗಾಣಿಗ ತಮ್ಮ ಗಾಣಿಗ ಫಿಲ್ಮ್ಸ್ ಮತ್ತು ವಿಕೆ ಫಿಲ್ಮ್ ಅಸೋಸಿಯೇಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಕನ್ನಡದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಚಿತ್ರವನ್ನು ಪ್ರಸ್ತುತಪಡಿಸುವ ಜೊತೆಗೆ ರಾಜ್ಯಾದ್ಯಂತ ವಿತರಣೆ ಮಾಡುತ್ತಿದೆ.

ಇದನ್ನೂ ಓದಿ: ಸೈಬರ್ ಕ್ರೈಮ್ ಕಥೆಗೆ ಹಾಸ್ಯದ ಟಚ್: ‘ಪ್ರೀತಮ್ – ಪೆಡ್ರೊ’ ವಿಮರ್ಶೆ

ಜುಲೈ 24ರಂದು ಬಿಡುಗಡೆಯಾಗಲಿರುವ ‘ಕರಾವಳಿ’ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ ಹೆಚ್ಚಿಸಿದೆ.