SK Home Ad
Home ಸಿನಿ ಮಿಲ್ಸ್ BBK13: ಕಿಚ್ಚನ ಮಾತು ಮೀರಿದ್ರಾ ಸಂಗೀತಾ; ಕೋ-ಪೈಲೆಟ್ ಗೆ ಆಸಿಯಾ ಆಯ್ಕೆ!

BBK13: ಕಿಚ್ಚನ ಮಾತು ಮೀರಿದ್ರಾ ಸಂಗೀತಾ; ಕೋ-ಪೈಲೆಟ್ ಗೆ ಆಸಿಯಾ ಆಯ್ಕೆ!

0
22

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಸ್ಪರ್ಧಿಗಳ ನಡುವೆ ವಾದ-ವಿವಾದಗಳು ಜೋರಾಗಿವೆ. ಈ ನಡುವೆ ನಡೆದ ವಿಶೇಷ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ನಟಿ ಸಂಗೀತಾ ಭಟ್ ಈ ಸೀಸನ್‌ನ ಮೊದಲ ‘ಪೈಲಟ್’ ಆಗಿ ಆಯ್ಕೆಯಾಗಿದ್ದಾರೆ. ಆದ್ರೆ ಈ ಗೆಲುವಿನ ಸುತ್ತ ಈಗ ದೊಡ್ಡ ಮಟ್ಟದ ಚರ್ಚೆ ಹಾಗೂ ವಿವಾದಗಳು ಎದ್ದಿವೆ.

ಪೈಲಟ್ ಪಟ್ಟಕ್ಕಾಗಿ ನಡೆದ ಅಂತಿಮ ಹಂತದ ಟಾಸ್ಕ್‌ನಲ್ಲಿ ಸಂಗೀತಾ ಭಟ್ ಮತ್ತು ಕಿರಣ್ ಶಾಸ್ತ್ರಿ ನಡುವೆ ತೀವ್ರ ಪೈಪೋಟಿ ಇತ್ತು. ಆಟದಲ್ಲಿ ಕಿರಣ್ ಶಾಸ್ತ್ರಿ ಗೆಲ್ಲುವ ಹಂತದಲ್ಲಿದ್ದರೂ, ಅವರು ವಸ್ತುಗಳನ್ನು ಕೊಂಡೊಯ್ಯಲು ತಮ್ಮ ಪಂಚೆಯನ್ನು ಬಳಸಿದ್ದರಿಂದ ನಿಯಮ ಉಲ್ಲಂಘನೆಯಾಗಿ ಹಿನ್ನಡೆ ಅನುಭವಿಸಿದರು. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬೇರೆಯದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಟಾಸ್ಕ್ ವೇಳೆ ಸಂಗೀತಾ ಬಳಿಯಿದ್ದ ವಸ್ತುಗಳನ್ನು ಕಸಿದುಕೊಳ್ಳಲು ಕಿರಣ್ ಮುಂದಾದಾಗ, ಸಂಗೀತಾ “ನನ್ನನ್ನು ಮುಟ್ಟಬೇಡಿ” ಎಂದು ಹೇಳಿ ‘ವುಮೆನ್ ಕಾರ್ಡ್’ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ಕಿರಣ್ ಶಾಸ್ತ್ರಿ ಹಿಂಜರಿದು, ಅವರಿಗೆ ಅನ್ಯಾಯವಾಯಿತು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಏನೇ ಆದ್ರೂ ಅಂತಿಮವಾಗಿ ಸಂಗೀತಾ ಈ ಸವಾಲಿನಲ್ಲಿ ಗೆದ್ದು ಪೈಲಟ್ ಪಟ್ಟಕ್ಕೇರಿದ್ದಾರೆ.

ಹಾಗೇ ಮೊದಲ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್‌ ಈ ಸೀಸನ್‌ನಲ್ಲಿ ವುಮೇನ್‌ ಕಾರ್ಡ್‌ ನಡಿಯೋಲ್ಲ ಎಂದ್ರು. ಆದ್ರೆ ಈಗ ಸಂಗೀತಾ ಮತ್ತೇ ಅದನ್ನೇ ಮಾಡಿ ಸುದೀಪ್‌ ಕೈಯಲ್ಲಿ ಈ ವಾರ ಕಿವಿಮಾತು ತೆಗೆದುಕೊಳ್ಳುತ್ತಾರಾ? ಕಾದುನೋಡಬೇಕು.

ಪೈಲಟ್ ಆದ ಸಂಗೀತಾ ಭಟ್‌ಗೆ ಬಿಗ್ ಬಾಸ್ ವಿಶೇಷ ಅಧಿಕಾರಗಳನ್ನು ನೀಡಿದ್ದಾರೆ. ಈ ಅಧಿಕಾರ ಬಳಸಿ ಸಂಗೀತಾ ನೇರವಾಗಿ ವೈಷ್ಣವಿಯನ್ನು ಮುಂಬರುವ ವಾರದ ಎಲಿಮಿನೇಷನ್‌ಗೆ ನಾಮಿನೇಟ್ ಮಾಡಿದ್ದಾರೆ. ಜೊತೆಗೆ ತಮ್ಮ ಬೆಂಬಲಕ್ಕೆ ನಿಲ್ಲಲು ಆಸಿಯಾಳನ್ನು ‘ಕೋ-ಪೈಲಟ್’ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ.