‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಸ್ಪರ್ಧಿ ತಾಂಡವ್ ರಾಮ್ ಅನಿರೀಕ್ಷಿತವಾಗಿ ದೊಡ್ಮನೆಗೆ ಪುನಃ ಆಗಮಿಸುವ ಮೂಲಕ ವೀಕ್ಷಕರಲ್ಲಿ ಹಾಗೂ ಮನೆಮಂದಿಯಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ‘ಎಮರ್ಜೆನ್ಸಿ ರೂಮ್’ ಮೂಲಕ ಮನೆಯಿಂದ ಹೊರನಡೆದಿದ್ದ ರಾಮ್, ಇದೀಗ ಹೊಸ ಅವತಾರ ಹಾಗೂ ಹೊಸ ಆಟದ ತಂತ್ರದೊಂದಿಗೆ ಬಿಗ್ ಬಾಸ್ ಅಖಾಡಕ್ಕೆ ಪ್ರವೇಶಿಸಿದ್ದಾರೆ.
ಕ್ಯಾಪ್ಟನ್ಸಿ ರೂಮ್ ಬಾಗಿಲು ತೆರೆದು ನೇರವಾಗಿ ಹೊಸ ಕ್ಯಾಪ್ಟನ್ ಆಗಿ ಎಂಟ್ರಿ ನೀಡಿದ ತಾಂಡವ್ ರಾಮ್ ಕಂಡು ಮನೆಯವರೆಲ್ಲರೂ ಒಮ್ಮೆಗೆ ಆಶ್ಚರ್ಯಚಕಿತರಾದರು. ರಾಮ್ ಮನೆಮಂದಿ ಕೂಗಿ ಚೀರ್ ಮಾಡುತ್ತಾ ಅತ್ಯಂತ ಸಡಗರದಿಂದ ಸ್ವಾಗತಿಸಿದರು. ಒಳಗೆ ಬರುತ್ತಿದ್ದಂತೆ ತಮ್ಮ ಆತ್ಮೀಯ ಗೆಳೆಯ ಗಗನ್ ತಬ್ಬಿಕೊಂಡು ರಾಮ್ ತಮ್ಮ ಸಂತಸ ಹಂಚಿಕೊಂಡರು.
ಆದ್ರೆ ಈ ರೀ-ಎಂಟ್ರಿ ಕೇವಲ ಸಾಮಾನ್ಯ ಆಗಮನವಾಗಿರದೆ, ಆಟದ ಸ್ವರೂಪವನ್ನೇ ಬದಲಿಸುವ ಸೂಚನೆ ನೀಡಿದೆ. ಈ ಹಿಂದೆ ಮನೆಯಲ್ಲಿದ್ದಾಗ ಶಾಂತ ಹಾಗೂ ಒಳ್ಳೆಯ ಗುಣದಿಂದ ಗಮನಸೆಳೆದಿದ್ದ ರಾಮ್, ಈ ಬಾರಿ ತಮ್ಮ ತಂತ್ರಗಾರಿಕೆಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುವ ಸುಳಿವು ನೀಡಿದ್ದಾರೆ. “ಇಷ್ಟು ದಿನ ತುಂಬಾ ಒಳ್ಳೆಯವನಾಗಿ ಇದ್ದಿದ್ದು ಸಾಕು. ಇನ್ಮುಂದೆ ಆ ಹಳೆಯ ರಾಮ್ನನ್ನು ನೀವ್ಯಾರೂ ನಿರೀಕ್ಷಿಸುವಂತಿಲ್ಲ” ಎಂದು ನೇರವಾಗಿ ಹೇಳುವ ಮೂಲಕ ಸ್ಪರ್ಧಿಗಳಿಗೆ ಶಾಕ್ ನೀಡಿದ್ದಾರೆ.
ತಾಂಡವ್ ರಾಮ್ ಈ ದಿಢೀರ್ ಬದಲಾವಣೆ ಮತ್ತು ಹೊಸ ಕ್ಯಾಪ್ಟನ್ಗಿರಿ ದೊಡ್ಮನೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಮುಂಬರುವ ದಿನಗಳಲ್ಲಿ ಆಟದ ವೈಖರಿ ಹೇಗಿರಲಿದೆ ಮತ್ತು ಈ ರೀ-ಎಂಟ್ರಿ ಬಿಗ್ ಬಾಸ್ ಮನೆಯಲ್ಲಿ ಯಾವ ರೀತಿಯ ಹೊಸ ತಿರುವುಗಳಿಗೆ ಕಾರಣವಾಗಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.






















