SK Home Ad
Home ಸಿನಿ ಮಿಲ್ಸ್ BBK 13: ಲಕ್ಷ್ಮಿ ಆರೋಪಕ್ಕೆ ಮಾಜಿ ಸ್ಪರ್ಧಿ ಕುಮಾರಿ ತಿರುಗೇಟು: ಬಟ್ಟೆ ಹಾಗೂ ಸ್ನಾನದ ವಿಚಾರಕ್ಕೆ...

BBK 13: ಲಕ್ಷ್ಮಿ ಆರೋಪಕ್ಕೆ ಮಾಜಿ ಸ್ಪರ್ಧಿ ಕುಮಾರಿ ತಿರುಗೇಟು: ಬಟ್ಟೆ ಹಾಗೂ ಸ್ನಾನದ ವಿಚಾರಕ್ಕೆ ಕೊನೆಗೂ ಸಿಕ್ಕಿತು ಸ್ಪಷ್ಟನೆ!

0
12

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆರಂಭಕ್ಕೂ ಮುನ್ನ ಸಾಮಾನ್ಯ ಜನರಾಗಿ ಅಗ್ನಿಪರೀಕ್ಷೆ ಎದುರಿಸಿ ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದ ಕುಮಾರಿ ಹಾಗೂ ಲಕ್ಷ್ಮಿ ನಡುವಿನ ಮನಸ್ತಾಪಗಳು ಈಗ ಹೊರಬಂದ ಬಳಿಕವೂ ಮುಂದುವರಿದಿವೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಲಕ್ಷ್ಮಿ, “ಕುಮಾರಿ ನನ್ನಷ್ಟು ಆಟ ಆಡಿಲ್ಲ, ಬರೀ ಸಿಂಪತಿ ಕಾರ್ಡ್ ಆಡುತ್ತಾಳೆ. ಅವಳು ಸ್ನಾನ ಮಾಡುವುದಿಲ್ಲ, ಚೆಕ್ ಎಂದರೇನು ಎಂದು ಕೇಳುವ ಮೂಲಕ ಮುಗ್ಧೆ ಎನ್ನುವಂತೆ ನಾಟಕ ಆಡುತ್ತಾಳೆ” ಎಂದು ಗಂಭೀರ ಆರೋಪ ಮಾಡಿದ್ದರು.

ಲಕ್ಷ್ಮಿ ಅವರ ಈ ಹೇಳಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಟ್ರೋಲ್ಸ್‌ಗಳಿಂದ ತೀವ್ರ ಮನನೊಂದಿದ್ದ ಕುಮಾರಿ, ವೀಕೆಂಡ್ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಈ ವೇಳೆ ಪ್ರತಿಕ್ರಿಯಿಸಿದ್ದ ಸುದೀಪ್, ಸೀತೆಗೇ ಅಪವಾದ ತಪ್ಪಲಿಲ್ಲ, ಇನ್ನು ನೀನು ಯಾವ ಲೆಕ್ಕ ಎಂದು ಹೇಳುವ ಮೂಲಕ ಟ್ರೋಲ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದರು.

ಇದೀಗ ಈ ಎಲ್ಲಾ ವಿವಾದಗಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ನೇರ ಸ್ಪಷ್ಟನೆ ನೀಡಿರುವ ಕುಮಾರಿ, ಲಕ್ಷ್ಮಿ ಹಾಗೂ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ. “ನನಗೆ ಅದೇ ಬಟ್ಟೆಯಲ್ಲಿ ಬರುವ ಯಾವುದೇ ಆಸೆ ಇರಲಿಲ್ಲ, ಅಮ್ಮನ ಸೀರೆ ಧರಿಸಿ ಬರಬೇಕೆಂದುಕೊಂಡಿದ್ದೆ. ಆದರೆ ಬಿಗ್ ಬಾಸ್ ತಂಡದವರೇ ಅದೇ ಬಟ್ಟೆಯನ್ನು ಧರಿಸುವಂತೆ ಸೂಚಿಸಿದ್ದರು” ಎಂದರು. ಇನ್ನು ಸ್ನಾನದ ವಿಚಾರವಾಗಿ ಮಾತನಾಡುತ್ತಾ, “ನನಗೆ ಆರೋಗ್ಯದ ಗಂಭೀರ ಸಮಸ್ಯೆ ಇದ್ದ ಕಾರಣ ದೀಪಾವಳಿ ಹಬ್ಬದವರೆಗೆ ನನ್ನ ತಾಯಿಯೇ ನನಗೆ ಸ್ನಾನ ಮಾಡಿಸುತ್ತಿದ್ದರು” ಎಂದು ಭಾವುಕರಾದರು. ಹಾಗೆಯೇ ಚೆಕ್ ಅಂದ್ರೆನು ಅಂತ ಕೇಳಿಲ್ಲ ಎಂದು ಕೇಳಿಲ್ಲ, ಬದಲಿಗೆ ಅದನ್ನು ಹೇಗೆ ಬಳಸಬೇಕು ಎಂದು ಮಾತ್ರ ತಿಳಿಯಲು ಯತ್ನಿಸಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.