SK Home Ad
Home ನಮ್ಮ ಜಿಲ್ಲೆ ವಿಜಯಪುರ ಪಿಡಿಓ ಭ್ರಷ್ಟಾಚಾರಕ್ಕೆ ಸಚಿವರು ರಾಜಿನಾಮೆ ನೀಡಬೇಕೆ?

ಪಿಡಿಓ ಭ್ರಷ್ಟಾಚಾರಕ್ಕೆ ಸಚಿವರು ರಾಜಿನಾಮೆ ನೀಡಬೇಕೆ?

0
20

ವಿಜಯಪುರ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರಪಯೋಗ ಮಾಡಿದವರ ಮೇಲೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ, ಗ್ರಾಮ ಪಂಚಾಯತನಲ್ಲಿ ಪಿಡಿಓ ಭ್ರಷ್ಟಾಚಾರ ಮಾಡಿದರೆ ಗ್ರಾಮೀಣಾಭಿವೃದ್ಧಿ ಸಚಿವರು ರಾಜಿನಾಮೆ ನೀಡಬೇಕೇ? ಎಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಧರ್ಮಸೇನಾ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದಲ್ಲಿ ಹಣ ದುರಪಯೋಗ ನಡೆದಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ, ಈ ರೀತಿ ಹಣ ವರ್ಗಾವಣೆ ಮಾಡಿದವರ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ, ಈ ಹಗರಣದಲ್ಲಿ ಸಚಿವ ನಾಗೇಂದ್ರ ಅವರ ಪಾತ್ರ ಎಳ್ಳಷ್ಟೂ ಇಲ್ಲ, ಹಣ ವರ್ಗಾವಣೆ ಮೊದಲಾದ ಹಣಕಾಸಿನ ವ್ಯವಹಾರ ಅಧಿಕಾರಿಗಳ ಜವಾಬ್ದಾರಿ, ಅಲ್ಲಿ ಸಚಿವರ ಪಾತ್ರವೇನೂ ಇರುವುದಿಲ್ಲ, ಈ ಬಗ್ಗೆ ಚರ್ಚೆ ನಡೆಸಲು ಪ್ರತಿಪಕ್ಷಗಳು ನೋಟಿಸು ಸಹ ನೀಡಿಲ್ಲ, ಕೇವಲ ಪ್ರತಿಭಟನೆಗೆ ಸದನವನ್ನು ಬಿಜೆಪಿ ಸೀಮಿತಗೊಳಿಸಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ವೇದಿಕೆಯ ಶುದ್ಧೀಕರಣ ಅತ್ಯಂತ ನೋವು ತರಿಸಿದೆ, ಒಬ್ಬ ರಾಷ್ಟ್ರನಾಯಕನಿಗೆ ಈ ರೀತಿ ಅವಮಾನ ಮಾಡಿರುವುದು ನೋವು ತಂದಿದೆ ಎಂದರು. ನೂರಾರು ಪತ್ರಿಕಾಗೋಷ್ಠಿ ಮಾಡಿದ ಮನಮೋಹನ್ ಸಿಂಗ್ ಅವರನ್ನು ಬಿಜೆಪಿಗರು ಮೌನಿ ಬಾಬಾ ಎಂದು ಕರೆದರು, ಆದರೆ ಈಗ ಪ್ರಧಾನಿ ಮೋದಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ಮಾಡಿಲ್ಲ ಎಂದರು.

ನೂರು ದಿನಗಳ ಕಾಲ ಪ್ರತಿಯೊಬ್ಬರಿಗೂ ಉದ್ಯೋಗ ಸಿಗಬೇಕು ಎಂಬ ಮಹಾತ್ವಾಕಾಂಕ್ಷೆಯೊಂದಿಗೆ ಕಾಂಗ್ರೆಸ್ ರೂಪಿಸಿದ ನರೇಗಾ ಅಂತಹ ಶ್ರೇಷ್ಠ ಕಾರ್ಯಕ್ರಮವನ್ನು ಬಿಜೆಪಿ ನಾಯಕರು ಈಗ ತಮ್ಮ ಕಾರ್ಯಕ್ರಮ ಎಂದು ಬಿಂಬಿಸುವ ಕಾರ್ಯ ಮಾಡುತ್ತಿದ್ದಾರೆ, ಸ್ವತಃ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಎರಡನೇಯ ಹಸಿರು ಕ್ರಾಂತಿಯ ಸಂಕಲ್ಪ ವ್ಯಕ್ತಪಡಿಸಿದರು, ಹೀಗಾಗಿ ಪ್ರಥಮ ಹಸಿರು ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದರು.