ಹೊಸಪೇಟೆ: ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಪತಿ ಪ್ರೊಬೆಷನರಿ ಪಿಎಸ್‌ಐ ಪೊಲೀಸರ ಅತಿಥಿಯಾದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ದೊರೆನಾಯ್ಕ್ ಬಂಧಿತ ಪಿಎಸ್‌ಐ. ಕೂಡ್ಲಿಗಿ ತಾಲೂಕಿನ ಪೂಜಾರಹಳ್ಳಿ ತಾಂಡಾದ ದೊರೆನಾಯ್ಕ್ ಹಗರಿಬೊಮ್ಮನಹಳ್ಳಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ತನ್ನೂರು ಪೂಜಾರಹಳ್ಳಿ ತಾಂಡಾದ ಯುವತಿಯನ್ನು ಮೊದಲ ಮದುವೆಯಾಗಿದ್ದ ದೊರೆನಾಯ್ಕ್, ಆ ಬಳಿಕ ದಾವಣಗೆರೆ ಸಮೀಪದ ಹುಲಿಕಟ್ಟಿ ತಾಂಡಾದ ಯುವತಿಯನ್ನು 2ನೇ ಮದುವೆಯಾಗಿದ್ದ.
2ನೇ ಪತ್ನಿ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಈಕೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಕಿರುಕುಳ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡ ಹಗರಿಬೊಮ್ಮನ ಹಳ್ಳಿ ಪೊಲೀಸರು ಪ್ರೊಬೆಷನರಿ ಪಿಎಸ್‌ಐ ದೊರೆನಾಯ್ಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.






















