ಕೊಪ್ಪಳ: ತನ್ನದಲ್ಲದ ತಪ್ಪಿಗೆ ಈಗಾಗಲೇ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡಿದ್ದಾರೆ. ಆದರೆ ರಾಜ್ಯದ ಕೆಪಿಎಸ್‌ಸಿ ಹಗರಣಕ್ಕೆ ಯಾರ ತಲೆದಂಡ ಎಂದು ಮಾಜಿ ಸಚಿವ ಸಿ.ಟಿ ರವಿ ಪ್ರಶ್ನಿಸಿದರು.
ಕನಕಗಿರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಪಿಎಸ್‌ಸಿ ಪರೀಕ್ಷೆ- ನೇಮಕಾತಿ ಪಾರದರ್ಶಕ, ಪ್ರಾಮಾಣಿಕವಾಗಿ ನಡೆದಿಲ್ಲವೆಂದು ಸಾಕ್ಷಿಗಳು ಲಭ್ಯವಾಗಿವೆ. ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಇತ್ತೀಚೆಗೆ ಕೆಪಿಎಸ್‌ಸಿ ಭರ್ತಿ ಮಾಡಿದೆ. ಈ ಎಲ್ಲಾ ಹುದ್ದೆಗಳಲ್ಲಿಯೂ ವ್ಯವಹಾರ ನಡೆದಿದೆ ಎಂಬ ಅನುಮಾನವಿದೆ ಎಂದರು.
ಉತ್ತರ ಪತ್ರಿಕೆಗಳನ್ನೇ ತಿದ್ದುವ ಕೆಲಸ ನಡೆದಿದೆ. ನೀಟ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಣೆಯಾಗಬೇಕು, ಅಧಿಕಾರಿಗಳ ತಲೆದಂಡ ಸಾಕಾಗಲ್ಲ ಎಂದು ನೀವೇ ಹೇಳಿದ್ದೀರಿ. ಈಗ ಯಾರ ತಲೆದಂಡ ಕೊಡುವಿರಿ? ಎರಡು ನಾಲಿಗೆಯವರಾಗಬೇಡಿ ಎಂದು ವಾಗ್ದಾಳಿ ನಡೆಸಿದರು.






















