SK Home Ad
Home ನಮ್ಮ ಜಿಲ್ಲೆ ಕಲಬುರಗಿ ‘ಪಾರದರ್ಶಕ ಚುನಾವಣೆ ನಡೆದರೆ BJP ಗೆಲ್ಲಲ್ಲ’: ಖರ್ಗೆ ತೀವ್ರ ಟೀಕೆ

‘ಪಾರದರ್ಶಕ ಚುನಾವಣೆ ನಡೆದರೆ BJP ಗೆಲ್ಲಲ್ಲ’: ಖರ್ಗೆ ತೀವ್ರ ಟೀಕೆ

0
228

‘ಗವರ್ನರ್‌ಗಳು ಬಿಜೆಪಿ ಕೈಗೊಂಬೆ’: ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಆರೋಪ

ಸಂ.ಕ.‌ಸಮಾಚಾರ ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ಹೆಸರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಅದು ಬಿಜೆಪಿ ಪಕ್ಷದ ಕಾರ್ಯಕ್ರಮ. ಅದರ ಬಗ್ಗೆ ನಾವೇನು ಹೇಳಬೇಕು? ಪ್ರಚಾರಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ,” ಎಂದು ಟೀಕಿಸಿದರು.

‘ಯಡಿಯೂರಪ್ಪ ವಿರುದ್ಧ ಆರೋಪಗಳಿವೆ’ : ಯಡಿಯೂರಪ್ಪ ಕಾರ್ಯಕ್ರಮದ ಕುರಿತು ಬಿಜೆಪಿ ಒಳಗೇ ಅಪಸ್ವರ ಕೇಳಿಬರುತ್ತಿದೆ ಎಂದು ಹೇಳಿದ ಖರ್ಗೆ, “ಯಡಿಯೂರಪ್ಪ ಅವರ ಮೇಲೆ ಹಲವು ಆರೋಪಗಳಿವೆ. ಇಂತಹ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುವುದರ ಉದ್ದೇಶವೇನು?” ಎಂದು ಪ್ರಶ್ನಿಸಿದರು.

‘ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಇಲ್ಲ’ : ಬಿಜೆಪಿ ಪಕ್ಷದಲ್ಲಿ ಸಮರ್ಥ ನಾಯಕತ್ವದ ಕೊರತೆ ಇದೆ ಎಂದು ಆರೋಪಿಸಿದ ಅವರು, “ಈ ವಿಚಾರವನ್ನು ಬಿಜೆಪಿಯ ಶಾಸಕರೇ ಪ್ರಶ್ನಿಸುತ್ತಿದ್ದಾರೆ. ಅದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು,” ಎಂದು ಹೇಳಿದರು.

ತಮಿಳುನಾಡು ರಾಜಕೀಯದ ಉಲ್ಲೇಖ : ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಖರ್ಗೆ, “ತಮಿಳುನಾಡಿನಲ್ಲಿ ಬಿಜೆಪಿ ಗೆದ್ದಿರುವುದು ಒಂದೇ ಒಂದು ಸ್ಥಾನ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಮತ್ತು ನಾರಾಯಣಸ್ವಾಮಿ ಉತ್ತರಿಸಲಿ,” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ: ತಮಿಳು‌ನಾಡಲ್ಲಿ ಕಾಂಗ್ರೆಸ್ ಡಿಎಂಕೆ ಗೆ ಬೆನ್ನಿಗೆ ಚೂರಿ‌ಹಾಕಿದ್ದಾರೆ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು ಸ್ಥಳೀಯ ನಾಯಕರ ಅಭಿಪ್ರಾಯ ಹಾಗೂ ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಟಿವಿಕೆಗೆ ಬೆಂಬಲ ನೀಡಲಾಗಿದೆ ಎಂದು ಅವರು ಕಾಂಗ್ರೆಸ್ ನಿರ್ಧಾರವನ್ನು ಸಮರ್ಥಿಸಿಕೊಂಡರು.

‘ಪಾರದರ್ಶಕ ಚುನಾವಣೆ ನಡೆದರೆ ಬಿಜೆಪಿ ಗೆಲ್ಲಲ್ಲ’ : ಚುನಾವಣೆ ಪಾರದರ್ಶಕತೆ ಕುರಿತು ಕಿಡಿಕಾರಿದ ಖರ್ಗೆ, ಬಿಜೆಪಿಯವರು ಸಂವಿಧಾನವನ್ನು ಕಗ್ಗೊಲೆ ಮಾಡಿದ್ದಾರೆ. ಪಾರದರ್ಶಕ ಚುನಾವಣೆ ನಡೆದರೆ ಬಿಜೆಪಿ ಯಾವ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಅಷ್ಟೇಕೆ ವಿರೋಧ ಪಕ್ಷದ ನಾಯಕ‌ಆರ್ ಅಶೋಕ್ ಕೂಡಾ ಗೆಲ್ಲುವುದಿಲ್ಲ ಎಂದು ಹರಿಹಾಯ್ದ ಸಚಿವರು ಮುಖ್ಯ ಚುನಾವಣೆ ನೇಮಕ ಮೋದಿ ಹೇಳಿದಂತೆ ಆಗುತ್ತದೆ. ಚುನಾವಣೆ ಆಯೋಗ, ಇಡಿ, ಸಿಬಿಐ ಮುಂತಾದವರನ್ನು ದೂರವಿಟ್ಟು‌ಬಿಜೆಪಿ ಚುನಾವಣೆ ಎದುರಿಸಲಿ ಎಂದು ಸವಾಲ್ ಹಾಕಿದರು.

‘ಗವರ್ನರ್‌ಗಳು ಬಿಜೆಪಿ ಕೈಗೊಂಬೆ’: ರಾಜ್ಯಪಾಲರ ಪಾತ್ರದ ಬಗ್ಗೆ ಪ್ರಶ್ನೆ ಎತ್ತಿದ ಖರ್ಗೆ, ರಾಜ್ಯದಲ್ಲಿ ಕೆಳಮನೆ ಹಾಗೂ ಮೇಲ್ಮನೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯಪಾಲವರು ವಾಪಸ್ ಕಳಿಸುತ್ತಾರೆ. ತಮಿಳುನಾಡಲ್ಲಿ ಬಹುಮತ ಸಾಬೀತಿಗೆ ಫ್ಲೋರ್ ಟೆಸ್ಸ್ ಮಾಡಲಿ ಅದು ಗವರ್ನರ್ ಮುಂದೆ ಅಲ್ಲ ಎಂದು ಪ್ರತಿಕ್ರಿಯಿಸಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತು ಪ್ರತಿಕ್ರಿಯೆ : ಗ್ರಾಮ ಪಂಚಾಯತ್‌ಗಳಿಗೆ ಕುಡಿಯುವ ನೀರು ಒದಗಿಸಲು ಹಣವಿಲ್ಲ ಎಂಬ ಶಾಸಕ ಬಿ. ಆರ್‌. ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಕುಡಿಯುವ ನೀರು‌ಒದಗಿಸಲು ಗ್ರಾಮ ಪಂಚಾಯತ ಬಳಿ‌ಹಣವಿಲ್ಲ ಎಂದು ಶಾಸಕ ಬಿ.ಆರ್.ಪಾಟೀಲ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ ಜಿಲ್ಲೆಯಲ್ಲಿ 25 ಹಳ್ಳಿಗಳಲ್ಲಿ‌ಸಮಸ್ಯೆ 21 ಬೋರ್ ವೆಲ್ ಬಾಡಿಗೆ ತೆಗೆದಿಕೊಂಡು ನೀರು ಒದಗಿಸಲಾಗುತ್ತಿದೆ ಹಾಗು ಮಿಕ್ಕ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತಿದೆ ಎಂದು ಶಾಸಕ ಬಿ. ಆರ್. ಪಾಟೀಲ್ ಅವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.

ಸಚಿವ ಸಂಪುಟ ವಿಸ್ತರಣೆ : ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಬಗ್ಗೆ ಪಕ್ಷದ ಹೈಕಮಾಂಡ್, ಮಲ್ಲಿಕಾರ್ಜುನ್‌ ಖರ್ಗೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ,” ಎಂದರು.

‘ಸಿಯುಕೆ ಸಂಘಪರಿವಾರದ ಶಾಖೆ’ : “ಸಿಯುಕೆ ಸಂಘಪರಿವಾರದ ಶಾಖೆಯಂತಾಗಿದೆ. ಅಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ,” ಎಂದು ಹೇಳಿದರು.

ನರೇಗಾ ಯೋಜನೆ ಕುರಿತು ಮಾತನಾಡಿದ ಸಚಿವರು, ನರೇಗಾ ಬಗ್ಗೆ ಮೊನ್ನೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಯಾಕೆಂದರ, ವಿಬಿ-ಜಿ- ರಾಮ್ ಜಿ ಬಗ್ಗೆ ಕೇಂದ್ರಕ್ಕೆ ಸ್ಪಷ್ಟವಾದ ಪ್ರಕ್ರಿಯೆಗಳಿಲ್ಲ ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಎಂ ಎಲ್ ಎ ಅಲ್ಲಮಪ್ರಭು ಪಾಟೀಲ್, ಎಂ ಎಲ್ ಸಿಗಳಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ ಸೇರಿದಂತೆ ಹಲವರಿದ್ದರು.