Home Advertisement
Home ನಮ್ಮ ಜಿಲ್ಲೆ ಕಲಬುರಗಿ ನಾನು CM ಆಗುವ ತೀರ್ಮಾನ ಸೋನಿಯಾಗಾಂಧಿಗೆ ಬಿಟ್ಟಿದ್ದು…

ನಾನು CM ಆಗುವ ತೀರ್ಮಾನ ಸೋನಿಯಾಗಾಂಧಿಗೆ ಬಿಟ್ಟಿದ್ದು…

0
77

ಸಂ.ಕ.ಸಮಾಚಾರ ​ಕಲಬುರಗಿ: ನಾಯಕತ್ವ ಗೊಂದಲ ಹಾಗೂ ಸಿಎಂ ಬದಲಾವಣೆ ವಿಚಾರ ​ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವದ ಗೊಂದಲದ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.

ಕಲಬುರಗಿಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಬೇಕು ಎಂಬುದು ನಿಮ್ಮ ಅಥವಾ ಬೆಂಬಲಿಗರ ಆಸೆಯಾಗಿರಬಹುದು. ಆದರೆ ಪಕ್ಷದಲ್ಲಿ ವೈಯಕ್ತಿಕ ಹಣೆಬರಹಕ್ಕಿಂತ ಹೆಚ್ಚಾಗಿ ಐಡಿಯಾಲಜಿ (ಸಿದ್ಧಾಂತ) ಮತ್ತು ಪಕ್ಷಕ್ಕೆ ನಾವು ನೀಡಿದ ದಶಕಗಳ ಸೇವೆಯು ಮುಖ್ಯವಾಗುತ್ತದೆ. ನಮ್ಮ ಬಗ್ಗೆ ಅಂತಿಮ ನಿರ್ಧಾರಗಳನ್ನು ಸೋನಿಯಾ ಗಾಂಧಿಯವರು ತೆಗೆದುಕೊಳ್ಳುತ್ತಾರೆ ಎಂದರು.

ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿಗಳಿದ್ದಾರೆ, ಹಾಗಾಗಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದು ವೇಳೆ ಸಿಎಂ ಬದಲಾವಣೆಯ ಸಂದರ್ಭ ಬಂದರೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಾವೆಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ. ಅದಕ್ಕೆ ಇನ್ನೂ ಸಮಯವಿದೆ, ಎಂದು ಸ್ಪಷ್ಟಪಡಿಸಿದರು.

​ತಮಿಳುನಾಡು ಮತ್ತು ಕೇರಳದಲ್ಲಿ ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

​ಅಸ್ಸಾಂನಲ್ಲಿ ಎಕ್ಸಿಟ್ ಪೋಲ್ ಭವಿಷ್ಯಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದಬ್ಬಾಳಿಕೆಯ ನಡುವೆಯೂ ತೃಣಮೂಲ ಕಾಂಗ್ರೆಸ್ (TMC) ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ನಾವು ಅಲ್ಲಿ ಮೊದಲ ಬಾರಿಗೆ ಒಂಟಿಯಾಗಿ ಸ್ಪರ್ಧಿಸಿದ್ದೇವೆ ಎಂದರು.

​ಬಂಗಾಳದಲ್ಲಿ ಟಿಎಂಸಿಗೆ ಬೆಂಬಲ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನೂ ಎರಡು ದಿನಗಳಲ್ಲಿ ಸಂಪೂರ್ಣ ಚಿತ್ರಣ ಸಿಗಲಿದೆ. ಪೂರ್ಣ ಫಲಿತಾಂಶ ಬಂದ ನಂತರವಷ್ಟೇ ಟಿಎಂಸಿಗೆ ಬೆಂಬಲ ನೀಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.