SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಹಣ ಸಂಗ್ರಹಿಸಿ ವಂಚನೆ: ಅಧ್ಯಕ್ಷೆ, ಕಾರ್ಯದರ್ಶಿ ಬಂಧನ

ಹಣ ಸಂಗ್ರಹಿಸಿ ವಂಚನೆ: ಅಧ್ಯಕ್ಷೆ, ಕಾರ್ಯದರ್ಶಿ ಬಂಧನ

0
6

ಬಾಗಲಕೋಟೆ: ಮಹಿಳೆಯರಿಂದ ಹಣ ಸಂಗ್ರಹಿಸಿ ವಾಪಸ್ ನೀಡದೆ ವಂಚಿಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬೀಳಗಿಯ ಶ್ರೀದುರ್ಗಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಹಾಗೂ ಕಾರ್ಯದರ್ಶಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಸ್ಥೆ ಅಧ್ಯಕ್ಷೆ ವಿದ್ಯಾ ‌ಹಳ್ಳೂರು, ಕಾರ್ಯದರ್ಶಿ ರಚನಾ ಬಂಟನೂರು ಬಂಧಿತ ಆರೋಪಿಗಳು. ಮಹಿಳೆಯರಿಂದ ಸಂಗ್ರಹಿಸಿದ್ದ 43.40 ಲಕ್ಷ ರೂ.ಗಳು ವಂಚನೆ ನಡೆದಿರುವುದು ಪೊಲೀಸ್ ತನಿಖೆಯಲ್ಲಿ ಕಂಡು ಬಂದಿದೆ.

ಸಂಸ್ಥೆ ಹಣ ಪಡೆದು ವಂಚಿಸುತ್ತಿದೆ ಎಂದು ದೂರಿ ಜು. 13ರ ಸೋಮವಾರ ಮಹಿಳೆಯರು ಸಂಸ್ಥೆಗೆ ಮುತ್ತಿಗೆ ಹಾಕಿದ್ದರು.‌ ನಂತರ‌ ಪ್ರಕರಣ ದಾಖಲಿಸಿದ್ದರು. ದೂರು ಆಧರಿಸಿ ಮಂಗಳವಾರ ದಾಳಿ ಕೈಗೊಂಡಿರುವ ಪೊಲೀಸರು 200ಕ್ಕೂ ಅಧಿಕ ರಿಜಿಸ್ಟರ್, ರಶೀದಿ ಪುಸ್ತಕ, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡು ಪರಿಶೀಲಿಸಿದ್ದಾರೆ.

ಒಟ್ಟು 9 ಜನರ ಮೇಲೆ ದೂರು ದಾಖಲಿಸಿದ್ದು, ಇಬ್ಬರನ್ನು ‌ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.