ಗದಗ: ಇಸ್ರೇಲ್, ಅಮೆರಿಕಾ, ಇರಾನ್ ಯುದ್ಧ ಮುಗಿಯದ ಕಾರಣ ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಮಿತವ್ಯಯದ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರಿಗೆ ತ್ಯಾಗ, ದೇಶ ಭಕ್ತಿ ಅನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್‌ನವರಿಗೆ ಜನ ಮಾನಸದಲ್ಲಿ ದೇಶ ಭಕ್ತಿ ಆಳವಾಗಿ ಊರಿದೆ ಎಂಬುದು ಗೊತ್ತಿಲ್ಲ ವಿರೋಧ ಮಾಡುವುದರ ಸಲುವಾಗಿ ವಿರೋಧ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದುಗಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರಾನ್ ಇಸ್ರೇಲ್, ಅಮೆರಿಕಾ ಯುದ್ಧ ನಡೆಯುತ್ತಿದೆ. ಗಲ್ಫ್ ರಾಷ್ಟ್ರದ ಯುದ್ಧ ಮುಗಿಯುವಂತೆ ಕಾಣುತ್ತಿಲ್ಲ. ಉಕ್ರೇನ್ ರಷ್ಯಾ ಯುದ್ಧ ಆದಾಗ ಬಹಳಷ್ಟು ಸಮಸ್ಯೆ ಆಗಿತ್ತು. ರಸಗೊಬ್ಬರ ಕಚ್ಚಾವಸ್ತುಗಳ ಸಮಸ್ಯೆ ಆಗಿತ್ತು. ಈಗ ಪೆಟ್ರೋಲ್, ಡಿಸೇಲ್, ಆಯಿಲ್ ಸಮಸ್ಯೆ ಆಗುತ್ತಿದೆ. ಇರಾನ್ ದೇಶದ ಮೇಲೆ ಅವಲಂಬಿತವಾಗಿದ್ದೇವೆ. ಇಷ್ಟು ದಿನ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ಉಪಯೋಗಿಸಿ ಕಳೆದ ಎರಡು ತಿಂಗಳು ಪೆಟ್ರೋಲ್ ಡಿಸೇಲ್, ಗ್ಯಾಸ್ ಸಮಸ್ಯೆ ಆಗದಂತೆ ನೋಡಿದ್ದರು. ಆಯಿಲ್ ಕಂಪನಿಗಳು ನಷ್ಟದಲ್ಲಿ ವಿತರಣೆ ಮಾಡಿದ್ದಾರೆ ಯುದ್ಧ ಮುಗಿಯುತ್ತೇ ಎಂಬ ನಂಬಿಕೆ ಇತ್ತು. ಆದರೆ, ಯುದ್ಧ ಮುಗಿದಿಲ್ಲ. ಬರುವ ದಿನಗಳಲ್ಲಿ ಪೆಟ್ರೋಲ್ ಡಿಸೇಲ್ ಗ್ಯಾಸ್ ಸಂಕಷ್ಟ ಬರಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದರಗಳು ಹತ್ತು ಪಟ್ಟು ಹೆಚ್ಚಿಗೆ ಆಗಿವೆ. ಅಮೆರಿಕಾ, ಶ್ರೀಲಂಕಾ, ಮಲೇಷಿಯಾ,, ಪಾಕಿಸ್ತಾನ ಸೇರಿದಂತೆ ಹಲವು ರಾಷ್ಟ್ರದಲ್ಲಿ ದರ ಏರಿಕೆ ಆಗಿದೆ. ಭಾರತ ದರ ಹೆಚ್ಚಿಗೆ ಆಗದೆ ಇರುವ ದೇಶವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಂದೇಶ ಕೊಟ್ಟಿದ್ದಾರೆ ಎಂದರು.
ಜನರು ನಮ್ಮ ಮಿತವ್ಯಯದಲ್ಲಿ ಬಳಕೆ ಮಾಡಬೇಕು. ನಮ್ಮ ಮೇಲೆ ಬರುವ ದೊಡ್ಡ ಬಾರ, ಹಣದುಬ್ಬರವನ್ನ ನಿಲ್ಲಿಸಬಹುದಾಗಿದೆ. ಸುಲಭವಾಗಿ ಮಾಡಬಹುದಾಗಿದೆ. ಬಂಗಾರ ಖರೀದಿ ಮಾಡುವದ್ರಿಂದ ವಿದೇಶಿ ತೆರಿಗೆ ಹೊಡೆತ ಬೀಳುತ್ತಿದೆ. ಹೀಗಾಗಿ ಒಂದು ವರ್ಷ ಬಂಗಾರ ಖರೀದಿ ನಿಲ್ಲಿಸದಿದ್ದರೆ ಏನೂ ಆಗುವುದಿಲ್ಲ. ಇನ್ನು ಪೆಟ್ರೋಲ್ ಡಿಸೇಲ್ ಮಿತವ್ಯಯವಾಗಿ ಬಳಕೆ ಮಾಡಬೇಕು. ರಸಗೊಬ್ಬರ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ಬಳಕೆ ಮಾಡಿ ಎಂದಿದ್ದಾರೆ. ಇನ್ನು ವಿದೇಶ ಪ್ರಯಾಣ ಸಹ ಕಡಿಮೆ ಮಾಡಬೇಕು ಎಂದಿದ್ದಾರೆ ದೇಶಕ್ಕಾಗಿ ಇಷ್ಟಾದರೂ ನಾವು ಮಾಡಬೇಕಿದೆ ಎಂದು ಹೇಳಿದರು.
ನೈತಿಕ ಬಲ: ಈ ಹಿಂದೆ ಭಾರತ ಪಾಕಿಸ್ತಾನ ಯುದ್ಧ ಆದಾಗ ಆಹಾರ ಕೊರತೆ ಆಗಿತ್ತು. ಆಗಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಒಂದು ದಿನ ಉಪವಾಸ ಮಾಡಿ ಎಂದಿದ್ದರು. ಒಬ್ಬ ನಾಯಕನ ನೈತಿಕ ಬಲವಿದ್ದಾಗ ಮಾತ್ರ ಹೇಳಲು ಆಗುತ್ತದೆ. ಇದು ಕಾಂಗ್ರೆಸ್‌ನವರಿಗೆ ಅರ್ಥ ಆಗುದಿಲ್ಲ. ಹಿಂದೆ ಇರಾಕ್ ವಾರ್ ಆಗಿತ್ತು. ಆಗ ಮೂರೇ ದಿನದಲ್ಲಿ ಪೆಟ್ರೋಲ್ ಡಿಸೇಲ್ ಖಾಲಿ ಆಗಿತ್ತು. ಗದಗದಿಂದ ದಿಲ್ಲಿವರೆಗೂ ಪೆಟ್ರೋಲ್ ಬಂಕ್ ಮುಂದೆ ಕಿಲೋಮೀಟರ್ ಗಟ್ಟಲೇ ವಾಹನಗಳು ನಿಂತಿದ್ದವು ಎಂದು ಹೇಳಿದರು.























