Home Advertisement
Home ನಮ್ಮ ಜಿಲ್ಲೆ ಧಾರವಾಡ ಎಸ್ಎಸ್ಎಸ್ ಹುಬ್ಬಳ್ಳಿ–ಮಿರಜ್ ಎಕ್ಸಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ

ಎಸ್ಎಸ್ಎಸ್ ಹುಬ್ಬಳ್ಳಿ–ಮಿರಜ್ ಎಕ್ಸಪ್ರೆಸ್ ರೈಲಿನ ವೇಳಾಪಟ್ಟಿ ಪರಿಷ್ಕರಣೆ

0
34

ಹುಬ್ಬಳ್ಳಿ : ರೈಲು ಸಂಖ್ಯೆ 17332 ಎಸ್ಎಸ್ಎಸ್ ಹುಬ್ಬಳ್ಳಿ–ಮಿರಜ್ ಕಾಯ್ದಿರಿಸದ ಎಕ್ಸಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಈ ಹೊಸ ಸಮಯವು 2026ರ ಮೇ 1ರಿಂದ ಜಾರಿಗೆ ಬರಲಿದೆ.

ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಿಗ್ಗೆ 10:45ರ ಬದಲಿಗೆ 11:45 ಕ್ಕೆ ಹೊರಡಲಿದೆ.

ಮಾರ್ಗ ಮಧ್ಯದ ನಿಲ್ದಾಣಗಳಲ್ಲೂ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಅದರ ವಿವರ ಹೀಗಿದೆ: ಧಾರವಾಡ – 11:13/11:15ರ ಬದಲಿಗೆ 12:08/12:10 ಗಂಟೆಗೆ, ಲೋಂಡಾ – 12:33/12:35ರ ಬದಲಿಗೆ 13:38/13:40 ಗಂಟೆಗೆ, ಬೆಳಗಾವಿ – 13:45/13:50ರ ಬದಲಿಗೆ 15:05/15:10 ಗಂಟೆಗೆ, ಘಟಪ್ರಭಾ – 15:01/15:02ರ ಬದಲಿಗೆ 16:24/16:25 ಗಂಟೆಗೆ, ಚಿಕ್ಕೋಡಿ ರೋಡ್ – 15:19/15:20ರ ಬದಲಿಗೆ 16:39/16:40 ಗಂಟೆಗೆ, ರಾಯಬಾಗ್ 15:34/15:35ರ ಬದಲಿಗೆ 16:54/16:55 ಗಂಟೆಗೆ, ಶೇಡಬಾಳ – 16:19/16:20ರ ಬದಲಿಗೆ 17:45/17:46 ಗಂಟೆಗೆ ಮತ್ತು ವಿಜಯನಗರ – 16:30/16:31ರ ಬದಲಿಗೆ 17:59/18:00 ಗಂಟೆಗೆ ಆಗಮಿಸಿ, ನಿರ್ಗಮಿಸಲಿದೆ. ಈ ರೈಲು ಅಸ್ತಿತ್ವದಲ್ಲಿರುವ ವೇಳಾಪಟ್ಟಿಯ ಪ್ರಕಾರ 18:30 ಗಂಟೆಗೆ ಮೀರಜ್ ಜಂಕ್ಷನ್ ತಲುಪಲಿದೆ ಎಂದು ತಿಳಿಸಿದೆ.