SK Home Ad
Home ನಮ್ಮ ಜಿಲ್ಲೆ ಧಾರವಾಡ ಕೊಕೇನ್ ಸಾಗಾಟದ ಜಾಲ ಪತ್ತೆ: ಉದ್ಯಮಿ ಹಾಗೂ ವೈದ್ಯ ಅರೆಸ್ಟ್

ಕೊಕೇನ್ ಸಾಗಾಟದ ಜಾಲ ಪತ್ತೆ: ಉದ್ಯಮಿ ಹಾಗೂ ವೈದ್ಯ ಅರೆಸ್ಟ್

0
19

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ `ಕೊಕೇನ್’ ಸಾಗಾಟದ ಜಾಲವೊಂದು ಪತ್ತೆಯಾಗಿದ್ದು, ಇಬ್ಬರು ಉದ್ಯಮಿಗಳು ಹಾಗೂ ವೈದ್ಯನೊಬ್ಬ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ 9ರ ರಾತ್ರಿ ಗೋವಾದಿಂದ ಹುಬ್ಬಳ್ಳಿಗೆ ಕೊಕೇನ್ ತರಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಧಾರವಾಡ ಸಿಸಿಬಿ ಹಾಗೂ ಉಪನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ಕೆಲಗೇರಿ ರಸ್ತೆಯ ವಿನಾಯಕ ನಗರ ಬಳಿ ಹೋಂಡಾ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಸುಮಾರು 40 ಲಕ್ಷ ಮೌಲ್ಯದ 18 ಗ್ರಾಂ ಕೊಕೇನ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರಿನಲ್ಲಿದ್ದ ಉದ್ಯಮಿ ರೀಶಿ ಪಾಂಡೆ, ಉದ್ಯಮಿ ದೀಪಕ್ ಮುದ್ಗಲ್ ಹಾಗೂ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಸರ್ವೇಶ್ ಪಾಟೀಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳಿಂದ ಕಾರು, ಮೊಬೈಲ್ ಹಾಗೂ ಕೊಕೇನ್ ಸೇರಿದಂತೆ ಸುಮಾರು 50 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.