ಹೆಸರುಕಾಯಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಧಾರವಾಡ: ಹೆಸರುಕಾಯಿ ಆರಿಸಲು ಹೊಲಕ್ಕೆ ತೆರಳಿದ್ದ ಮಹಿಳೆಯೊಬ್ಬರು ಹೆಸರುಕಾಯಿ ಬಿಡಿಸುವ ಯಂತ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತ ಮಹಿಳೆಯನ್ನು ಯಲ್ಲವ್ವ ಈರಪ್ಪ ಸುಣಗಾರ ಎಂದು ಗುರುತಿಸಲಾಗಿದೆ. ಕಣ್ಣಿಲ್ಲದ ಪತಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದ ಯಲ್ಲವ್ವ ದಿನಗೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ಎಂದಿನಂತೆ ಹೊಟ್ಟೆಪಾಡಿಗಾಗಿ ಹೊಲಕ್ಕೆ ತೆರಳಿ ಹೆಸರುಕಾಯಿ ಆರಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯಂತ್ರದಿಂದ ಹೆಸರುಕಾಯಿ ಬಿಡಿಸುವ ಸಂದರ್ಭದಲ್ಲಿ ಯಲ್ಲವ್ವ ಅವರು ಯಂತ್ರಕ್ಕೆ ಸಿಲುಕಿದ್ದು, … Continue reading ಹೆಸರುಕಾಯಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು