Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಶಬರಿಮಲೆ ಯಾತ್ರೆ ದುರ್ಘಟನೆ: ರೈಲಿನಿಂದ ಬಿದ್ದು ಬೆಳ್ತಂಗಡಿ ವ್ಯಕ್ತಿ ಸಾವು

ಶಬರಿಮಲೆ ಯಾತ್ರೆ ದುರ್ಘಟನೆ: ರೈಲಿನಿಂದ ಬಿದ್ದು ಬೆಳ್ತಂಗಡಿ ವ್ಯಕ್ತಿ ಸಾವು

0
87

ಬೆಳ್ತಂಗಡಿ: ಶಬರಿಮಲೆ ಯಾತ್ರೆಗೆ ತೆರಳಿದ್ದ ವ್ಯಕ್ತಿಯೋರ್ವರು ರೈಲಿನಿಂದ ಬಿದ್ದು ಮೃತಪಟ್ಟ ದುರ್ಘಟನೆ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಬಜ ನಿವಾಸಿ, ಕೃಷಿಕರಾಗಿದ್ದ ವಸಂತ ಪೂಜಾರಿ (60) ಅವರು ಮೃತಪಟ್ಟವರಾಗಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ, ವಸಂತ ಪೂಜಾರಿ ಅವರು ಶಬರಿಮಲೆ ದೇವಸ್ಥಾನಕ್ಕೆ ಯಾತ್ರೆಗೆ ತೆರಳಲು ಮಂಗಳೂರಿನಿಂದ ರೈಲಿನಲ್ಲಿ ಪ್ರಯಾಣ ಆರಂಭಿಸಿದ್ದರು. ಏಪ್ರಿಲ್ 17ರ ರಾತ್ರಿ ರೈಲು ಪ್ರಯಾಣದ ವೇಳೆ ಅವರು ಅನಾಹುತವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ.

ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ನಂತರ ಕೇರಳದ ತ್ರಿಶೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಏಪ್ರಿಲ್ 18ರಂದು ಅವರು ಮೃತಪಟ್ಟಿದ್ದಾರೆ. ಇಂದು (ಏ.19) ಮೃತದೇಹವನ್ನು ಸ್ವಗ್ರಾಮಕ್ಕೆ ರವಾನಿಸಲಾಗಿದೆ.

ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ಅಪಘಾತದ ನಿಖರ ಕಾರಣ ತಿಳಿದುಬರಬೇಕಿದೆ. ಈ ಘಟನೆ ಬೆಳ್ತಂಗಡಿ ಭಾಗದಲ್ಲಿ ದುಃಖದ ವಾತಾವರಣ ಮೂಡಿಸಿದೆ.