SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಅಡಿಕೆ ವ್ಯಾಪಾರಿ ಮನೆ ಮೇಲೆ GST ಅಧಿಕಾರಿಗಳ ದಾಳಿ

ಅಡಿಕೆ ವ್ಯಾಪಾರಿ ಮನೆ ಮೇಲೆ GST ಅಧಿಕಾರಿಗಳ ದಾಳಿ

0
39

ಚಿತ್ರದುರ್ಗ: ತಾಲೂಕಿನ ಜಾನಕೊಂಡ ಗ್ರಾಮದಲ್ಲಿ GST ಇಲಾಖೆ ಅಧಿಕಾರಿಗಳು ಮಂಗಳವಾರ ಅಡಿಕೆ ವ್ಯಾಪಾರಿ ಹರೀಶ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬೆಳಿಗ್ಗೆಯಿಂದಲೇ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಂತೆ ವಿಷಯ ಗ್ರಾಮದಲ್ಲಿ ಹರಡಿದೆ. ತಮ್ಮ ಮನೆ ಮೇಲೆ ಅನಗತ್ಯ ದಾಳಿ ಎಂದು ವ್ಯಾಪಾರಿ ಹರೀಶ್ ಮತ್ತು ಬೆಂಬಲಕ್ಕೆ ಬಂದ ರೈತರು GST ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾಳಿಯ ವಿರುದ್ಧ ಆಕ್ರೋಶಗೊಂಡ ಹರೀಶ್ ಮತ್ತು ರೈತರು ಚಳ್ಳಕೆರೆ ರಸ್ತೆಯಲ್ಲಿರುವ GST ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

GST ಅಧಿಕಾರಿಗಳು ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಇಲಾಖೆಯಿಂದ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.