SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗದಲ್ಲಿ ಫಿಲ್ಮಿ ಸ್ಟೈಲ್ ದರೋಡೆ ಯತ್ನ:10 ಕಿ.ಮೀ ಬೈಕ್‌ನಲ್ಲಿ ಹಿಂಬಾಲಿಸಿ ಅಡಿಕೆ ಲಾರಿ ಅಡ್ಡಗಟ್ಟಿ ಹಲ್ಲೆ

ಚಿತ್ರದುರ್ಗದಲ್ಲಿ ಫಿಲ್ಮಿ ಸ್ಟೈಲ್ ದರೋಡೆ ಯತ್ನ:10 ಕಿ.ಮೀ ಬೈಕ್‌ನಲ್ಲಿ ಹಿಂಬಾಲಿಸಿ ಅಡಿಕೆ ಲಾರಿ ಅಡ್ಡಗಟ್ಟಿ ಹಲ್ಲೆ

0
1

ಚಿತ್ರದುರ್ಗ: ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಸಾಗಿಸುತ್ತಿದ್ದ ಲಾರಿಯನ್ನು ಸುಮಾರು 10 ಕಿ.ಮೀ ಹಿಂಬಾಲಿಸಿ, ತಡೆದು ಹಲ್ಲೆ ನಡೆಸಿ ಹಣ ದೋಚಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಚಾಲಕ ಜಾವೀದ್ ಎಂಬುವರು ಅಡಿಕೆ ತುಂಬಿದ ಲಾರಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು 10 ಕಿ.ಮೀಗಳಿಂದ ಲಾರಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಚಿಕ್ಕಗೊಂಡನಹಳ್ಳಿ ಸಮೀಪ ಲಾರಿಯನ್ನು ಅಡ್ಡಗಟ್ಟಿ, ಏಕಾಏಕಿ ಚಾಲಕ ಜಾವೀದ್ ಮೇಲೆ ಹಲ್ಲೆ ನಡೆಸಿದ್ದಾರೆ.

ಲಕ್ಷಾಂತರ ಮೌಲ್ಯದ ಅಡಿಕೆ ರಾಬರಿ ಮಾಡುವ ಸಂಚು ಇತ್ತು ಎನ್ನಲಾಗಿದ್ದು, ಚಾಲಕ ಪ್ರತಿರೋಧ ಒಡ್ಡಿದಾಗ ಆತನ ಬಳಿ ಇದ್ದ 10 ಸಾವಿರ ರೂಪಾಯಿ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಘಟನೆಯು ನಿನ್ನೆ ರಾತ್ರಿ 8:30ರ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ. ಹಲ್ಲೆಯಿಂದ ಗಾಯಗೊಂಡಿರುವ ಚಾಲಕ ಜಾವೀದ್ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದು ಕೇವಲ ಹಣಕ್ಕಾಗಿ ನಡೆದ ದರೋಡೆಯೋ ಅಥವಾ ದುಬಾರಿ ಬೆಲೆಯ ಅಡಿಕೆ ಲಾರಿಯನ್ನು ಹೈಜಾಕ್ ಮಾಡಿ, ಹಣ ವಸೂಲಿ ಮಾಡುವ ದೊಡ್ಡ ಸಂಚೋ ಎಂಬ ಶಂಕೆ ವ್ಯಕ್ತವಾಗಿದೆ.