ಬಹದ್ದೂರಘಟ್ಟ ಗ್ರಾಮದಲ್ಲಿ ಭೀಕರ ಕೊಲೆ: ಹರಿತವಾದ ಆಯುಧದಿಂದ ಇರಿದು ಯುವಕನ ಹತ್ಯೆ
ಚಿತ್ರದುರ್ಗ: ತಾಲೂಕಿನ ಬಹದ್ದೂರಘಟ್ಟ ಗ್ರಾಮದಲ್ಲಿ ಬೈಕ್ ಸೌಂಡ್ ರೈಸ್ ಮಾಡಿದ್ದ ವಿಚಾರವಾಗಿ ಶುಕ್ರವಾರ ನಡೆದ ಗಲಾಟೆ ರಣಭೀಕರ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಆನಂದ್ (30) ಎಂದು ಗುರುತಿಸಲಾಗಿದೆ. ಗ್ರಾಮದಲ್ಲೇ ವಾಸು, ಅಂಜಿನಪ್ಪ, ವಿಜಯ್, ಲಕ್ಷ್ಮಣ್, ವಿಕಾಸ್ ಸೇರಿ ಒಂದು ಗುಂಪು ಹರಿತವಾದ ಹಾರಿಯಿಂದ ಆನಂದ್ ಎದೆಗೆ ಇರಿದು ಭೀಕರವಾಗಿ ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ.
ವಾಸು ಮತ್ತು ಆನಂದ್ ಕುಟುಂಬಗಳ ನಡುವೆ ಹಳೆಯ ದ್ವೇಷವಿತ್ತು ಎಂದು ತಿಳಿದುಬಂದಿದೆ. ಆನಂದ್ ಕುಟುಂಬ ವಾಸು ಕುಟುಂಬಕ್ಕೆ 5 ಲಕ್ಷ ರೂ. ಹಣವನ್ನು ನೀಡಿತ್ತು. ಆ ಹಣದ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಸುಮಾರು ಒಂದು ವರ್ಷದ ಹಿಂದೆ ದೊಡ್ಡ ಗಲಾಟೆಯೇ ನಡೆದಿತ್ತು.
ಅದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ, ನಿನ್ನೆ ಆನಂದ್ ಬೈಕ್ ಸೌಂಡ್ ರೈಸ್ ಮಾಡಿದ್ದಾನೆ ಎಂದು ಭಾವಿಸಿ ವಾಸು ಗುಂಪು ಆತನೊಂದಿಗೆ ಜಗಳ ತೆಗೆದಿದೆ. ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ಕುಪಿತಗೊಂಡ ಆರೋಪಿಗಳು ಆನಂದ್ ಕುಟುಂಬದ ಎದುರೇ ಹಾರಿಯಿಂದ ಎದೆಗೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಭರಮಸಾಗರ ಠಾಣೆ ಪಿಐ ಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
- ಮಾಜಿ ಸಚಿವ ಶ್ರೀರಾಮುಲು ಸೋದರಳಿಯ ಸುರೇಶ್ ಬಾಬುಗೆ ಬಿಹಾರ ನ್ಯಾಯಾಲಯದಿಂದ NBW
- ವರ್ಷವಿಡೀ ಕನ್ನಡ ರಾಜ್ಯೋತ್ಸವ ಆಚರಿಸುವ ಮಠವಿದು!
- ಕಾಂಗ್ರೆಸ್ ವಿರುದ್ಧ ಕಾರಜೋಳ ವಾಗ್ದಾಳಿ : ನ.4ಕ್ಕೆ ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ
- ಬೈಕ್ ಸೌಂಡ್ ವಿಚಾರಕ್ಕೆ ಗಲಾಟೆ: ಯುವಕನ ಬರ್ಬರ ಹತ್ಯೆ
- ಕರ್ನಾಟಕದ SIR ಬಗ್ಗೆ ನನ್ನ ಹೇಳಿಕೆ ತಪ್ಪಾಗಿ ಗ್ರಹಿಸಲಾಗಿದೆ: ರಾಜಕೀಯ ಚರ್ಚೆಗೆ ಜಾರಕಿಹೊಳಿ ತೆರೆ





















