SK Home Ad
Home ಕೃಷಿ/ವಾಣಿಜ್ಯ ಜಿಯೋದಿಂದ ₹10,000ಕ್ಕೆ 3 ವರ್ಷಗಳ ಆಕರ್ಷಕ ಅನ್ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಬಿಡುಗಡೆ!

ಜಿಯೋದಿಂದ ₹10,000ಕ್ಕೆ 3 ವರ್ಷಗಳ ಆಕರ್ಷಕ ಅನ್ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಬಿಡುಗಡೆ!

0
14

ಮುಂಬಯಿ: ರಿಲಯನ್ಸ್ ಜಿಯೋ ಕೇವಲ 10 ಸಾವಿರ ರೂಪಾಯಿಗೆ 3 ವರ್ಷಗಳ ಕಾಲ ಅನ್ಲಿಮಿಟೆಡ್ ಪ್ಲಾನ್ ಅನ್ನು ಇದೀಗ ಬಿಡುಗಡೆಗೊಳಿಸಿದೆ. ಇದು ಒಂದೇ ಒಂದು ರೀಚಾರ್ಜ್‌ನೊಂದಿಗೆ ಗ್ರಾಹಕರಿಗೆ ಮೂರು ವರ್ಷಗಳ ಕಾಲ ತಡೆರಹಿತ ಇಂಟರ್‌ನೆಟ್‌ ಸಂಪರ್ಕ, ಮನರಂಜನೆ ಮತ್ತು ಹಲವಾರು ಉತ್ಪಾದಕತಾ ಸಾಧನಗಳು ಮತ್ತು ಕ್ಲೌಡ್ ಸ್ಟೋರೇಜ್‌ಗಳ ಪ್ರಯೋಜನಗಳನ್ನು ಒದಗಿಸುತ್ತದೆ.

ಜಿಯೋ ಗ್ರಾಹಕರಿಗೆ ಅಪಾರ ಅನುಕೂಲ ಮತ್ತು ದೀರ್ಘಕಾಲೀನ ಮೌಲ್ಯವನ್ನು ಒದಗಿಸಲು ವಿನ್ಯಾಸಗೊಳಿಸಲಾದ ಈ ಪ್ಲಾನ್, ವಾರ್ಷಿಕ ನವೀಕರಣಗಳ ಅಗತ್ಯವನ್ನು ತಪ್ಪಿಸುತ್ತದೆ ಮತ್ತು ಮುಂದಿನ ಮೂರು ವರ್ಷಗಳವರೆಗೆ ಇಂದಿನ ಬೆಲೆ ಹಾಗೂ ಸೌಲಭ್ಯಗಳನ್ನು ಭದ್ರಪಡಿಸುತ್ತದೆ. ಈ ಕೊಡುಗೆಯು ಅನ್ಲಿಮಿಟೆಡ್ 5G ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್, ಪ್ರತಿದಿನ 2.5 ಜಿಬಿ ಹೈ-ಸ್ಪೀಡ್ ಡೇಟಾ, ಪ್ರತಿದಿನ 100 ಎಸ್‌ ಎಂಎಸ್ ಮತ್ತು ಮೂರು ವರ್ಷಗಳ ವ್ಯಾಲಿಡಿಟಿ ಅಥವಾ ಮಾನ್ಯತೆಯನ್ನು ಒಳಗೊಂಡಿದೆ.

ಇಂಟರ್‌ನೆಟ್‌ ಸಂಪರ್ಕದ ಪ್ರಯೋಜನಗಳ ಜೊತೆಗೆ, ಚಂದಾದಾರರು ಡಿಜಿಟಲ್ ಸೇವೆಗಳ ಸಮಗ್ರ ಪ್ಯಾಕೇಜ್‌ಅನ್ನು ಪಡೆದುಕೊಳ್ಳಲಿದ್ದಾರೆ.

  1. ಜಿಯೋಹಾಟ್‌ಸ್ಟಾರ್ ಮೊಬೈಲ್ + ಹಾಲಿವುಡ್ ಕಾರ್ಯಕ್ರಮಗಳು: ಲೈವ್ ಸ್ಫೋರ್ಟ್ಸ್, ಪ್ರೀಮಿಯಂ ಮನರಂಜನೆ, ಹಾಟ್‌ಸ್ಟಾರ್ ಒರಿಜಿನಲ್ಸ್ ಮತ್ತು ಬ್ಲಾಕ್‌ಬಸ್ಟರ್ ಹಾಲಿವುಡ್ ಕಂಟೆಂಟ್‌ಗಾಗಿ ಬಳಸಬಹುದು.
  2. ಕ್ಯಾನ್ವಾ ಪ್ರೊ ಲೈಟ್ (12 ತಿಂಗಳು): ಪ್ರೀಮಿಯಂ ಟೆಂಪ್ಲೇಟ್‌ಗಳು ಮತ್ತು ಪರಿಕರಗಳನ್ನು ಬಳಸಿ ವೃತ್ತಿಪರ ಗುಣಮಟ್ಟದ ವಿನ್ಯಾಸಗಳನ್ನು ರಚಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
  3. ಜಿಯೋ ಎಐ ಕ್ಲೌಡ್: ಫೈಲ್‌ಗಳು, ಫೋಟೋಗಳು ಮತ್ತು ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಮತ್ತು ಪ್ರವೇಶಿಸಲು 50 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್.
  4. ತಡೆರಹಿತ ಡಿಜಿಟಲ್ ಅನುಭವಗಳು, ಬೆಲೆಯ ಖಚಿತತೆ ಮತ್ತು ಮೂರು ವರ್ಷಗಳವರೆಗೆ ತಮ್ಮ ಸಂಪರ್ಕದ ಅಗತ್ಯಗಳನ್ನು ಪೂರೈಸುವ ಒಂದೇ ರೀಚಾರ್ಜ್‌ನ ಅನುಕೂಲವನ್ನು ಬಯಸುವ ಗ್ರಾಹಕರನ್ನು ಈ ಹೊಸ ಪ್ಲಾನ್ ಗುರಿಯಾಗಿಸಿದೆ.

ಈ 3 ವರ್ಷಗಳ ಅನ್ಲಿಮಿಟೆಡ್ ಪ್ಲಾನ್ ನವೆಂಬರ್ 7 ರಿಂದ ಮೈಜಿಯೋ, (MyJio), Jio.com, ಜಿಯೋ ಸ್ಟೋರ್‌ಗಳು, ರಿಟೇಲ್ ಮಳಿಗೆಗಳು ಮತ್ತು ದೇಶಾದ್ಯಂತದ ಇತರ ಜಿಯೋ ರೀಚಾರ್ಜ್ ತಾಣಗಳಲ್ಲಿ ಲಭ್ಯವಿರುತ್ತದೆ.