Home Advertisement
Home ನಮ್ಮ ಜಿಲ್ಲೆ ಬೆಂಗಳೂರು ‘ಪ್ರೀತಿ ಕೊಂದ ಕೊಲೆಗಾತಿ’: ವೆಸ್ಟರ್ನ್ ಸ್ಟೈಲ್ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ!

‘ಪ್ರೀತಿ ಕೊಂದ ಕೊಲೆಗಾತಿ’: ವೆಸ್ಟರ್ನ್ ಸ್ಟೈಲ್ ಪ್ರಪೋಸ್ ಹೆಸರಲ್ಲಿ ಪ್ರಿಯಕರನ ಸಜೀವ ದಹನ!

0
16

ಪ್ರೀತಿ ಅಂದರೆ ತ್ಯಾಗ, ಪ್ರೀತಿ ಅಂದರೆ ನಂಬಿಕೆ ಎಂದು ವರ್ಣಿಸಿದ್ದಾರೆ. ಆದರೆ, ಇಂದಿನ ದಿನಗಳಲ್ಲಿ ಪ್ರೀತಿ ಎಂದರೆ ‘ಸ್ವಾರ್ಥ’ ಮತ್ತು ‘ಕ್ರೌರ್ಯ’ ಎಂಬಂತಾಗಿದೆ. “ನೀನು ನನ್ನವನಾಗದಿದ್ದರೆ, ಬೇರೆ ಯಾರಿಗೂ ದಕ್ಕಬಾರದು” ಎಂಬ ವಿಕೃತ ಹಾಗೂ ಕ್ರೂರ ಮನಸ್ಥಿತಿಗೆ ಅದೆಷ್ಟೋ ಮುಗ್ಧ ಜೀವಗಳು ಬಲಿಯಾಗುತ್ತಿವೆ. ಇಂತಹದ್ದೇ ಒಂದು ಬೆಚ್ಚಿಬೀಳಿಸುವ, ರಕ್ತ ಹೆಪ್ಪುಗಟ್ಟುವಂತಹ ಕ್ರೈಂ ಸ್ಟೋರಿಯೊಂದು ಬೆಂಗಳೂರಿನ ಬ್ಯಾಡರಹಳ್ಳಿಯ ಅಂಜನಾನಗರದಲ್ಲಿ ನಡೆದಿದೆ.

ಸಂಶಯದ ಸುಳಿಗೆ ಸಿಲುಕಿದ ಪ್ರೇಮ!: ಮೃತ 27 ವರ್ಷದ ಕಿರಣ್ ಹಾಗೂ ಆರೋಪಿ ಪ್ರೇಮಾ ಇಬ್ಬರೂ ಒಂದೇ ಮೊಬೈಲ್ ಸ್ಟೋರ್‌ನಲ್ಲಿ (Vi) ಕೆಲಸ ಮಾಡುತ್ತಿದ್ದರು. ಇವರ ಸ್ನೇಹ ನಿಧಾನವಾಗಿ ಪ್ರೀತಿಗೆ ತಿರುಗಿ, ಕಳೆದ ಎರಡು ವರ್ಷಗಳಿಂದ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಇವರ ಪ್ರೇಮದ ಹಳಿಗೆ ‘ಸಂಶಯ’ ಎಂಬ ಪೆಡಂಭೂತ ಅಡ್ಡಬಂದಿತ್ತು. “ಕಿರಣ್ ನನ್ನನ್ನು ಕಡೆಗಣಿಸುತ್ತಿದ್ದಾನೆ, ತನ್ನ ಮಾಜಿ ಪ್ರಿಯತಮೆಯೊಂದಿಗೆ ಮತ್ತೆ ಮಾತನಾಡುತ್ತಿದ್ದಾನೆ” ಎಂಬ ಅನುಮಾನ ಪ್ರೇಮಾಳ ತಲೆಯನ್ನು ಹೊಕ್ಕಿತ್ತು. ದಿನೇ ದಿನೇ ಬೆಳೆದ ಈ ಅನುಮಾನ ಅವಳನ್ನು ಅಕ್ಷರಶಃ ಒಬ್ಬ ಕ್ರೂರ ರಾಕ್ಷಸಿಯನ್ನಾಗಿ ಬದಲಾಯಿಸಿತ್ತು.

‘ಫಾರಿನ್ ಸ್ಟೈಲ್’ ಪ್ರಪೋಸಲ್‌ನ ಮಾಸ್ಟರ್ ಪ್ಲಾನ್!: ತನ್ನ ಸಂಶಯವನ್ನೇ ಸತ್ಯವೆಂದು ನಂಬಿದ ಆ ಮಾಯಗಾತಿ, ಪ್ರಿಯತಮನನ್ನು ಮುಗಿಸಲೇಬೇಕು ಎಂದು ಭೀಕರ ಸ್ಕೆಚ್ ಹಾಕಿದಳು. “ಮನೆಯಲ್ಲಿ ಯಾರೂ ಇಲ್ಲ, ಬೇಗ ಬಾ.. ನಿನಗೊಂದು ಸರ್ಪ್ರೈಸ್ ಇದೆ. ಫಾರಿನ್ ಸ್ಟೈಲ್‌ನಲ್ಲಿ ನಿನಗೆ ಪ್ರಪೋಸ್ ಮಾಡ್ತೀನಿ” ಎಂದು ಕಿರಣ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ಪ್ರೇಯಸಿಯ ಬಣ್ಣದ ಮಾತುಗಳನ್ನು ನಂಬಿದ ಮುಗ್ಧ ಕಿರಣ್, ಅಲ್ಲಿ ಸಾವಿನ ಬಲೆ ಹೆಣೆಯಲಾಗಿದೆ ಎಂಬುದನ್ನರಿಯದೆ ಒಳಹೋಗಿದ್ದಾನೆ. “ವೆಸ್ಟರ್ನ್ ಸ್ಟೈಲ್ ಪ್ರಪೋಸಲ್ ಅಲ್ವಾ, ಸುಮ್ಮನೆ ನಿಂತ್ಕೋ” ಎಂದು ನಂಬಿಸಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಾಲುಗಳಿಗೆ ಬಿಗಿಯಾಗಿ ಹಗ್ಗ ಕಟ್ಟಿದ್ದಾಳೆ.

ಕರುಣೆಯಿಲ್ಲದ ಕೊಲೆಗಾತಿ!: ಪಾಪ, ಇದೇನೋ ಪ್ರೀತಿಯ ಆಟ, ತನಗೆ ಸರ್ಪ್ರೈಸ್ ಗಿಫ್ಟ್ ಸಿಗಲಿದೆ ಎಂದು ಕಾಯುತ್ತಿದ್ದ ಕಿರಣ್ ಮೇಲೆ, ಮೊದಲೇ ರೆಡಿ ಮಾಡಿಟ್ಟುಕೊಂಡಿದ್ದ 4 ಲೀಟರ್ ಪೆಟ್ರೋಲ್ ಮತ್ತು ಸೀಮೆಎಣ್ಣೆ ಮಿಶ್ರಣವನ್ನು ಸುರಿದು, ಕರುಣೆಯೇ ಇಲ್ಲದೆ ಬೆಂಕಿ ಗೀರಿಯೇ ಬಿಟ್ಟಿದ್ದಾಳೆ! ಕಿರಣ್ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ, ಪ್ರಾಣಭೀತಿಯಿಂದ ಚೀರಾಡುತ್ತಾ ಸಜೀವ ದಹನವಾಗುತ್ತಿದ್ದರೂ, ಆ ಪಾಪಿ ಪ್ರೇಯಸಿ ಮಾತ್ರ ಕಲ್ಲಿನಂತೆ ನೋಡುತ್ತಾ ನಿಂತಿದ್ದಳು.

ಕಿರುಚಾಟ ಕೇಳಿ ಓಡಿಬಂದ ಸ್ಥಳೀಯರು ಬೆಂಕಿ ನಂದಿಸುವಷ್ಟರಲ್ಲಿ ಕಿರಣ್ ಸುಟ್ಟು ಕರಕಲಾಗಿದ್ದ. ಆದರೆ, ಇಡೀ ಕೋಣೆಯಲ್ಲಿ ಬೆಂಕಿ ಹೊತ್ತಿ ಉರಿದಿದ್ದರೂ, ಪ್ರೇಮಾಗೆ ಮಾತ್ರ ಒಂದು ಸಣ್ಣ ಗಾಯವೂ ಆಗಿರಲಿಲ್ಲ! ಇದೇ ವಿಚಾರ ಪೊಲೀಸರ ಅನುಮಾನಕ್ಕೆ ಕಾರಣವಾಯಿತು. “ಬೆಂಕಿ ಆಕಸ್ಮಿಕವಾಗಿ ತಗುಲಿದ್ದು” ಎಂದು ಕತೆ ಕಟ್ಟಲು ಯತ್ನಿಸಿದ ಅವಳ ನಾಟಕ ವಿಚಾರಣೆ ವೇಳೆ ಬಯಲಾಗಿದೆ.