SK Home Ad
Home ಸಿನಿ ಮಿಲ್ಸ್ ಜನರ ಕಣ್ಣಿಗೆ ನಾನು ಶ್ರೀಮಂತ, ಆದರೆ ಸ್ವಂತ ಮನೆಯೂ ಇಲ್ಲ: ಬಿಗ್ ಬಾಸ್ ಖ್ಯಾತಿಯ ಅಬ್ದು...

ಜನರ ಕಣ್ಣಿಗೆ ನಾನು ಶ್ರೀಮಂತ, ಆದರೆ ಸ್ವಂತ ಮನೆಯೂ ಇಲ್ಲ: ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ಅಳಲು

0
63

ಮುಂಬೈ: ಭಾರತದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂಲಕ ದೇಶಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಅಬ್ದು ರೋಜಿಕ್, ತಮಗೆ ಕಾರ್ಯಕ್ರಮದಿಂದ ಯಾವುದೇ ಸಂಭಾವನೆ ಸಿಕ್ಕಿಲ್ಲ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ತಮಗೆ ಸಿಗಬೇಕಿದ್ದ ಇಡೀ ಹಣವನ್ನು ತಮ್ಮ ಹಳೆಯ ಮ್ಯಾನೇಜ್‌ಮೆಂಟ್ ತಂಡವೇ ವಂಚಿಸಿ, ಲೂಟಿ ಮಾಡಿದೆ ಎಂದು ಅಬ್ದು ಗಂಭೀರ ಆರೋಪ ಮಾಡಿದ್ದಾರೆ.

ಪಾಡ್‌ಕಾಸ್ಟ್‌ ಒಂದರಲ್ಲಿ ತಮ್ಮ ನೋವು ತೋಡಿಕೊಂಡಿರುವ ಅಬ್ದು, “ನಾನು ನನ್ನ ಹಳೆಯ ತಂಡದೊಂದಿಗೆ ಮೂರ್ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದೆ. ಅವರು ನನ್ನ ಬೆಳವಣಿಗೆಗೆ ಸಹಾಯ ಮಾಡಿದ್ದು ನಿಜವಾದರೂ, ನಾನು ಭಾಗವಹಿಸಿದ ಶೋಗಳಿಂದ ಬಂದ ಹಣವನ್ನೆಲ್ಲಾ ಅವರೇ ಜೇಬಿಗೆ ಇಳಿಸಿಕೊಂಡರು. ಬಿಗ್ ಬಾಸ್ ಶೋನಿಂದ ನನಗೆ ಒಂದೇ ಒಂದು ಡಾಲರ್ ಹಣವೂ ಸಿಕ್ಕಿಲ್ಲ. ಇಡೀ ಪ್ರಪಂಚವೇ ನನ್ನನ್ನು ಶ್ರೀಮಂತ ಎಂದು ಭಾವಿಸಿದೆ, ಆದ್ರೆ ವಾಸ್ತವದಲ್ಲಿ ನನ್ನ ಬಳಿ ಇವತ್ತಿಗೂ ಒಂದು ಸ್ವಂತ ಕಾರಾಗಲಿ ಅಥವಾ ಸ್ವಂತ ಮನೆಯಾಗಲಿ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಮ್ಮ ದೈಹಿಕ ಉನ್ನತಿಯನ್ನು ನೋಡಿ ಜನ ಸುಲಭವಾಗಿ ಮೂರ್ಖನನ್ನಾಗಿ ಮಾಡಬಹುದು ಎಂದುಕೊಳ್ಳುತ್ತಾರೆ ಎಂದು ಅಬ್ದು ಅಸಮಾಧಾನ ಹೊರಹಾಕಿದ್ದಾರೆ. “ಕ್ಯಾಮೆರಾ ಮುಂದೆ ನಾನು ಸದಾ ನಗುತ್ತಾ ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರೂ, ಮನೆಗೆ ಮರಳಿದಾಗ ಮಾನಸಿಕ ಒತ್ತಡ ನನ್ನನ್ನು ಕಾಡುತ್ತದೆ. ನಾನು ಎಲ್ಲೇ ಕೆಲಸಕ್ಕೆ ಹೋದರೂ ಜನ ನನ್ನೊಂದಿಗೆ ನೇರವಾಗಿ ಮಾತನಾಡದೆ ಮ್ಯಾನೇಜ್‌ಮೆಂಟ್ ಜೊತೆ ಮಾತನಾಡುತ್ತಾರೆ. ಆದ್ರೆ ನನಗೆ ಎಲ್ಲವೂ ಅರ್ಥವಾಗುತ್ತದೆ. ದಯವಿಟ್ಟು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿ, ನನಗೆ ಮೋಸ ಮಾಡಬೇಡಿ” ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.