SK Home Ad
Home ಸುದ್ದಿ ರಾಜ್ಯ ಕರ್ನಾಟಕ ಬಂದ್-ಹೆದ್ದಾರಿ ತಡೆ ಶತಸಿದ್ಧ: ಚೂನಪ್ಪ ಪೂಜೇರಿ ಎಚ್ಚರಿಕೆ

ಕರ್ನಾಟಕ ಬಂದ್-ಹೆದ್ದಾರಿ ತಡೆ ಶತಸಿದ್ಧ: ಚೂನಪ್ಪ ಪೂಜೇರಿ ಎಚ್ಚರಿಕೆ

0
57

ಬೆಳಗಾವಿ: ಕಬ್ಬಿಗೆ ನ್ಯಾಯುತ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಗುರ್ಲಾಪುರ ಕ್ರಾಸ್‌ನಲ್ಲಿ ರೈತರು ನಡೆಸುತ್ತಿರುವ ಹೋರಾಟ ಉಗ್ರ ಸ್ವರೂಪ ಪಡೆದಿದೆ. ಸರಕಾರಕ್ಕೆ ಬೆಲೆ ನಿಗದಿಗಾಗಿ ರೈತರು ನೀಡಿದ್ದ ಗಡುವು ಅಂತ್ಯಗೊಂಡಿದ್ದು ಅ. 31ರಂದು ರಾಜ್ಯ ಬಂದ್‌ಗೆ ರೈತರು ಕರೆ ನೀಡಿದ್ದಾರೆ.

ಶುಕ್ರವಾರ ಸಂಜೆಯವರೆಗೂ ರೈತರು ಸರ್ಕಾರಕ್ಕೆ ಗಡುವು ನೀಡಿದ್ದರು. ಆದರೆ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸದೆ ಇದ್ದುದರಿಂದ ರೊಚ್ಚಿಗೆದ್ದಿರು ರೈತರು ಮತ್ತೊಂದು ಸುತ್ತಿನ ಉಗ್ರ ಹೋರಾಟಕ್ಕೆ ಅಣಿಯಾಗಿದ್ದಾರೆ.

ಈ ನಡುವೆ ಜಿಲ್ಲಾಡಳಿತ ಹೆದ್ದಾರಿ ತಡೆ ನಿರ್ಬಂಧಿಸಿ ಆದೇಶ ಹೊರಡಿಸಿರುವುದು ರೈತರನ್ನು ಕೆರಳಿಸಿದೆ. ಜಿಲ್ಲಾಧಿಕಾರಿಗಳ ಆದೇಶ ಧಿಕ್ಕರಿಸಿ ಶನಿವಾರ ಹೆದ್ದಾರಿ ತಡೆ ನಡೆಸುವುದು ಶತಸಿದ್ಧ ಎಂದು ರೈತ ನಾಯಕ ಚೂನಪ್ಪ ಪೂಜೇರಿ ಗುರ್ಲಾಪುರದ ರೈತ ಹೋರಾಟದ ವೇದಿಕೆಯಲ್ಲಿ ಗುಡುಗಿದ್ದಾರೆ.

ಮತ್ತೊಂದೆಡೆ ಇದೇ ಹೋರಾಟ ವೇದಿಕೆಯಲ್ಲಿ ಮಾತನಾಡಿದ ಶಶಿಕಾಂತ ಗುರೂಜಿ ಅ. 31ರಂದು ರಾಜ್ಯ ಬಂದ್‌ಗೆ ಕರೆ ನೀಡಿದ್ದಾರೆ. ಒಟ್ಟಾರೆ ಶನಿವಾರ ರೈತರ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ತಾಳುವ ಲಕ್ಷಣ ನಿಚ್ಛಳವಾಗಿದೆ.

ಇತ್ತ ಗುರ್ಲಾಪುರ ಕ್ರಾಸ್ ರೈತ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ತಾಳುತ್ತಿದ್ದು ಶುಕ್ರವಾರ ಅಪಾರ ಸಂಖ್ಯೆಯ ರೈತರು ಹೋರಾಟದಲ್ಲಿ ರೊಟ್ಟಿ ಬುತ್ತಿ ಕಟ್ಟಿಕೊಂಡು ಪಾಲ್ಗೊಳ್ಳುತ್ತಿದ್ದಾರೆ.