Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಹೆತ್ತವ್ವನ ಅಂತ್ಯ ಸಂಸ್ಕಾರಕ್ಕೆ ಕರೆದ್ರೆ ನಾವೀಗ ತುಂಬಾ ಬ್ಯುಸಿ ಎಂದ ಇಬ್ಬರು ಮಕ್ಕಳು; ಕರ್ನಾಟಕದಲ್ಲೇ ಘೋರ...

ಹೆತ್ತವ್ವನ ಅಂತ್ಯ ಸಂಸ್ಕಾರಕ್ಕೆ ಕರೆದ್ರೆ ನಾವೀಗ ತುಂಬಾ ಬ್ಯುಸಿ ಎಂದ ಇಬ್ಬರು ಮಕ್ಕಳು; ಕರ್ನಾಟಕದಲ್ಲೇ ಘೋರ ಘಟನೆ

0
64

ಹೆತ್ತ ಕರುಳಿಗಿಂತ ಹಣ ಮತ್ತು ಸ್ವಾರ್ಥ ದೊಡ್ಡದಾದಾಗ ಮನುಷ್ಯತ್ವ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಬೆಳಗಾವಿಯಲ್ಲಿ ನಡೆದ ಈ ಘಟನೆ ಒಂದು ಕನ್ನಡಿಯಂತಿದೆ. ಹಡೆದ ಮಕ್ಕಳಿಬ್ಬರಿದ್ದರೂ, ಹೆತ್ತವ್ವನ ಶವಸಂಸ್ಕಾರಕ್ಕೆ ಬರಲಾಗದಷ್ಟು ಆ ಮಕ್ಕಳು ‘ಬ್ಯುಸಿ’ಯಾಗಿದ್ದರು ಎಂದರೆ ನೀವು ನಂಬಲೇಬೇಕು.

ಬೆಳಗಾವಿಯ ಶಾಹು ನಗರದ ನಿವಾಸಿ ಅಂಜನಾ ಧಮೋನೆ ಎಂಬ ವೃದ್ಧೆ ಕಳೆದ ಏಪ್ರಿಲ್ 15 ರಂದು ಕೊನೆಯುಸಿರೆಳೆದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅಂದಹಾಗೆ, ಈ ತಾಯಿ ತನ್ನ ಮಕ್ಕಳನ್ನು ಹತ್ತಿರದ ಕಷ್ಟಗಳನ್ನು ಸಹಿಸಿ, ಹೊಟ್ಟೆ ಬಟ್ಟೆ ಕಟ್ಟಿ ಸಾಕಿದ್ದರು. ಆದರೆ ವಿಪರ್ಯಾಸವೆಂದರೆ, ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಾಯಿಯನ್ನು ಒಬ್ಬಂಟಿಯಾಗಿಸಿದ್ದರು. ಅಂಜನಾ ಅವರು ತಮ್ಮ ಜೀವನದ ಕೊನೆಯ ದಿನಗಳನ್ನು ಒಂಟಿತನದಲ್ಲೇ ಕಳೆದರು.

ಯಾವಾಗ ಅಂಜನಾ ಅವರು ಮೃತಪಟ್ಟರೋ, ಆಗ ಸ್ಥಳೀಯರು ತಕ್ಷಣವೇ ಅವರ ಮಕ್ಕಳಿಗೆ ವಿಷಯ ಮುಟ್ಟಿಸಿದರು. ಆದರೆ ಆಗ ನಡೆದಿದ್ದೇ ಒಂದು ದೊಡ್ಡ ದುರಂತ. ತಾಯಿ ಸತ್ತ ಸುದ್ದಿ ಕೇಳಿದ ಆ ಮಕ್ಕಳು ಕಣ್ಣೀರು ಹಾಕುವ ಬದಲು, ಕನಿಷ್ಠ ಅಂತಿಮ ದರ್ಶನಕ್ಕೆ ಬರುವ ಆಸಕ್ತಿ ತೋರಲಿಲ್ಲ. “ನಮಗೆ ಬರಲು ಆಗುವುದಿಲ್ಲ, ನೀವೇ ಸಂಸ್ಕಾರ ಮಾಡಿ ಮುಗಿಸಿ” ಎಂದು ಅತ್ಯಂತ ನಿರ್ಲಕ್ಷ್ಯದಿಂದ ಉತ್ತರಿಸಿದರು. ಈ ಮಾತುಗಳನ್ನು ಕೇಳಿ ಅಕ್ಕಪಕ್ಕದ ಮನೆಯವರು ಮತ್ತು ಸ್ಥಳೀಯರು ಬೆಚ್ಚಿಬಿದ್ದರು.

ಒಂಬತ್ತು ತಿಂಗಳು ಹೊತ್ತು ಹಡೆದ ತಾಯಿಗೆ ತರ್ಪಣ ಬಿಡಲು ಬರದ ಈ ‘ಕಲಿಯುಗದ ಶ್ರವಣಕುಮಾರರ’ ನಡೆಗೆ ಇಡೀ ಬೆಳಗಾವಿ ಮರುಗುತ್ತಿದೆ. ಕೊನೆಗೆ ಆ ತಾಯಿಯ ಅನಾಥ ಪ್ರೇತಕ್ಕೆ ಮುಕ್ತಿ ನೀಡಲು ನಗರದ ಕೆಲವು ಸಾಮಾಜಿಕ ಕಾರ್ಯಕರ್ತರು ಮುಂದೆ ಬಂದರು. ಮಕ್ಕಳೇ ಇಲ್ಲದವರಂತೆ ಆ ಕಾರ್ಯಕರ್ತರೇ ಅಂಜನಾ ಅವರ ಅಂತ್ಯಕ್ರಿಯೆಯನ್ನು ವಿಧಿವಿಧಾನಗಳಂತೆ ನೆರವೇರಿಸಿದರು. ಮನೆತುಂಬಾ ಸಂಪತ್ತಿರಬಹುದು, ದೊಡ್ಡ ಪದವಿ ಇರಬಹುದು. ಆದರೆ ಹೆತ್ತ ತಾಯಿ ಸತ್ತಾಗ ಹೆಗಲು ಕೊಡದ ಆ ಬದುಕು ಏತಕ್ಕೆ? ಈ ಘಟನೆ ನಮ್ಮ ಸಮಾಜದ ಕ್ರೂರತೆಗೆ ಸಾಕ್ಷಿಯಾಗಿದೆ. ತಾಯಿಯನ್ನು ಕಡೆಗಣಿಸುವ ಪ್ರತಿಯೊಬ್ಬ ಮಗನಿಗೂ ಈ ಘಟನೆ ಒಂದು ಎಚ್ಚರಿಕೆಯ ಗಂಟೆಯಾಗಲಿ.