ಬಾಗಲಕೋಟೆ: ನವನಗರದಲ್ಲಿರುವ ಸರ್ಕಾರಿ ಮ್ಯೂಸಿಯಂನಲ್ಲಿ ಕೆಲಸದಿಂದ ತೆಗೆದು ಹಾಕಿದ ಹಿನ್ನೆಲೆಯಲ್ಲಿ ಕಾರ್ಮಿಕ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ನವನಗರದ ಮ್ಯೂಸಿಯಂನಲ್ಲಿ ತುಳಸವ್ವ ಎಂಬಾಕೆ ಕೆಲಸ ಮಾಡುತ್ತಿದ್ದಳು ಆದರೆ ಆಕೆಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವ ಆರೋಪ ಕೇಳಿಬಂದಿದೆ. ಮ್ಯೂಸಿಯಂ ಮುಂದೆಯೇ ತುಳಸವ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಿದ್ದು ನೆರಳಾಡುತ್ತಿದ್ದ ಆಕೆಯನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲಸದಿಂದ ತೆಗೆದು ಹಾಕಿದ ಹಿನ್ನೆಲೆಯಲ್ಲಿ ವಾಪಸ್ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ತುಳಸವ್ವ ಅಲೆದಾಡುತ್ತಲೇ ಇದ್ದಳು. ಆದರೆ ಸ್ಪಂದನೆ ಸಿಗದಿದ್ದಾಗ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದು ಬಂದಿದೆ.






















