ಬೆಳಗಾವಿಯಲ್ಲಿ ತಡರಾತ್ರಿ ಫೈರಿಂಗ್‌: ಸ್ಥಳೀಯರಲ್ಲಿ ಆತಂಕ

ಬೆಳಗಾವಿ: ನಗರದ ಯೂನಿಯನ್ ಜಿಮ್ಖಾನಾ ಪ್ರದೇಶದಲ್ಲಿ ಸೇಂಟ್ ಜೇವಿಯರ್ಸ್ ಶಾಲೆ ಸಮೀಪ ಮಂಗಳವಾರ ರಾತ್ರಿ ಫೈರಿಂಗ್ ನಡೆದಿದ್ದು ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕ್ಯಾಂಪ್ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಫೈರಿಂಗ್‌ಗೆ ನಿಖರ ಕಾರಣವೇನು, … Continue reading ಬೆಳಗಾವಿಯಲ್ಲಿ ತಡರಾತ್ರಿ ಫೈರಿಂಗ್‌: ಸ್ಥಳೀಯರಲ್ಲಿ ಆತಂಕ