SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಮಾಧವಿಲತಾಗೆ ನಿರ್ಬಂಧ: ಮುತಾಲಿಕ್ ದಿಢೀರ್ ಪ್ರತ್ಯಕ್ಷ, ಪ್ರಚೋದನಕಾರಿಯಾಗಿ ಮಾತನಾಡದಂತೆ ಪೊಲೀಸರ ಮನವಿ

ಮಾಧವಿಲತಾಗೆ ನಿರ್ಬಂಧ: ಮುತಾಲಿಕ್ ದಿಢೀರ್ ಪ್ರತ್ಯಕ್ಷ, ಪ್ರಚೋದನಕಾರಿಯಾಗಿ ಮಾತನಾಡದಂತೆ ಪೊಲೀಸರ ಮನವಿ

0
5

ಬಾಗಲಕೋಟೆ: ಮೆರವಣಿಗೆಗೆ ಹಿಂದೂ ಫೈರ್ ಬ್ರ್ಯಾಂಡ್ ಕೆ. ಮಾಧವಿಲತಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಪೊಲೀಸರು ನಿರ್ಬಂಧಿಸಿದ ಕಾರಣ ಅವರು ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲ. ಅವರ ಬದಲಾಗಿ ಶ್ರೀರಾಮಸೇನೆಯ ಪ್ರಮೋದ ಮುತಾಲಿಕ ಅವರು ಬಸವೇಶ್ವರ ವೃತ್ತದಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆ ಜನರನ್ನು ಉದ್ದೇಶಿಸಿ ಮಾತನಾಡಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಪಾಲ್ಗೊಂಡಿದ್ದರು.

ಕೆ. ಮಾಧವಿಲತಾ ಅವರು ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿ ಮುನ್ನೆಲೆಗೆ ಬಂದಿದ್ದರು. ಅವರು ಆಗಮಿಸಿ ಭಾಷಣ ಮಾಡಿದರೆ ಶಾಂತಿಗೆ ಭಂಗವಾಗಬಹುದೆಂಬ ಕಾರಣಕ್ಕೆ ಪೊಲೀಸರು ಅವರು ಬಾಗಲಕೋಟೆಗೆ ಬಾರದಂತೆ ನಿರ್ಬಂಧಿಸಿ ಆದೇಶಿಸಿದರು. ಈ ಬಗ್ಗೆ ಟ್ವೀಟ್ ಮಾಡಿದ ಮಾಧವಿಲತಾ ಅವರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಮುತಾಲಿಕ್ ದಿಢೀರ್ ಪ್ರತ್ಯಕ್ಷ: ಕೆ. ಮಾಧವಿಲತಾ ಅವರನ್ನು ಪೊಲೀಸರು ನಿರ್ಬಂಧಿಸಿ ಆದೇಶಿಸುತ್ತಿದ್ದಂತೆ ಅಸಮಾಧಾನ ಹೊರಹಾಕಿದ ಹಿಂದೂ ಕಾರ್ಯಕರ್ತರು ಹುಬ್ಬಳ್ಳಿಯಿಂದ ದಿಢೀರ್ ಪ್ರಮೋದ ಮುತಾಲಿಕ ಅವರನ್ನು ಕರೆತಂದರು.

ಕೊನೆಯ ಕ್ಷಣದವರೆಗೆ ಮುತಾಲಿಕ ಆಗಮನವನ್ನು ಗೌಪ್ಯವಾಗಿ ಇಡಲಾಗಿತ್ತು. ಇನ್ನೇನು ಅವರು ಬಸವೇಶ್ವರ ವೃತ್ತಕ್ಕೆ ಆಗಮಿಸುತ್ತಾರೆಂಬುದು ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಕೆಲ ಅಧಿಕಾರಿಗಳು ಮುತಾಲಿಕ ಅವರನ್ನು ಭೇಟಿ ಮಾಡಿ, ಕೋಮು ಪ್ರಚೋದನಕಾರಿಯಾಗಿ ಮಾತನಾಡದಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.