SK Home Ad
Home ಸುದ್ದಿ ರಾಜ್ಯ ‘ಮಾತು ಜಾಸ್ತಿ, ಕೆಲಸ ನಾಸ್ತಿ’.. ಪ್ರಿಯಾಂಕ್ ಖರ್ಗೆಗೆ ಎಚ್‌ಡಿಕೆ ಫುಲ್ ಟಾಂಗ್!

‘ಮಾತು ಜಾಸ್ತಿ, ಕೆಲಸ ನಾಸ್ತಿ’.. ಪ್ರಿಯಾಂಕ್ ಖರ್ಗೆಗೆ ಎಚ್‌ಡಿಕೆ ಫುಲ್ ಟಾಂಗ್!

0
31

ನವದೆಹಲಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನಿಂದಕ ಮಂತ್ರಿ ಎಂದು ಕರೆದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನಿಮ್ಮದು ಮಾತು ಜಾಸ್ತಿ, ಕೆಲಸ ನಾಸ್ತಿ. ಪರನಿಂದನೆಯಲ್ಲಿ ಪರಮಾರ್ಥ ಕಾಣುತ್ತಿದ್ದೀರಿ. ಐಡೆಂಟಿಟಿ ಸಮಸ್ಯೆ ಇದ್ದಂತೆ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಅಸಂಬದ್ಧವಾಗಿ ತಮ್ಮ ಬಗ್ಗೆ ಪೋಸ್ಟ್ ಮಾಡಿದ್ದ ಗೃಹ ಸಚಿವರಿಗೆ ತಮ್ಮದೇ ಭಾಷೆಯಲ್ಲಿ ಉತ್ತರ ಕೊಟ್ಟಿರುವ ಕುಮಾರಸ್ವಾಮಿ, ನಿಂದಕ ಮಂತ್ರಿ ಪ್ರಿಯಾಂಕ್ ಖರ್ಗೆ, ಗೃಹ ಮಂತ್ರಿಯಾಗಿ ರಾಜ್ಯದ ಆಡಳಿತಕ್ಕೆ ಗ್ರಹಣ ಹಿಡಿಸಿದ್ದೀರಿ. ಮಿದುಳು, ನಾಲಿಗೆ, ವಿವೇಕ ಮತ್ತು ಕೆಲಸ ಎಲ್ಲವೂ ಹಳಿತಪ್ಪಿ ಹಾದಿ ತಪ್ಪಿದ್ದೀರಿ. ಮೊದಲು ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ನನ್ನ ಮಾತಿನ ಅರಿವು ನನಗಿದೆ. ನಿಮ್ಮ ಮಾತಿನ ಹರಿವು ನಿಮಗೆ ಗೊತ್ತಿಲ್ಲ. ದಿನಕ್ಕೊಂದು ಟಾರ್ಗೆಟ್ ಹುಡುಕುತ್ತಲೇ ಇರುತ್ತೀರಿ. ಒಮ್ಮೆ ಆರೆಸ್ಸೆಸ್, ಇನ್ನೊಮ್ಮೆ ಎಸ್ ಐಆರ್, ಆಮೇಲೆ ಕುಮಾರಸ್ವಾಮಿ.. ಯಾರೂ ಸಿಗದಿದ್ದರೆ ಸ್ವಯಂ ಮೈ ಪರಚಿಕೊಳ್ಳುತ್ತೀರಿ.

ಮಿತಿಮೀರಿದ ಬಾಯಿಚಪಲ, ಅಪರಿಮಿತ ಪ್ರಚಾರದ ಹಪಾಹಪಿ.. ಅಪ್ಪ ಎಐಸಿಸಿ ಅಧ್ಯಕ್ಷ ಎನ್ನುವ ಅಪಾರ ಹಮ್ಮು; ಇವು ನಿಮ್ಮನ್ನು ಥಕ ಥೈ ಥಕ ಥೈ ಅಂತ ಕುಣಿಸುತ್ತಿವೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನನ್ನ ಬೆರಳ ಮೇಲೆ ನಿಮ್ಮ ಕಣ್ಣಿದೆ ಎಂಬ ಮಾಹಿತಿ ನನಗಿದೆಯಪ್ಪಾ.. ಆದರೆ ನಿಮ್ಮ ನಿದ್ರೆ ಕೆಡಿಸಿದ್ದು ನಾನೇ ಎಂಬುದು ನಿಮಗೂ ಗೊತ್ತು. ಕೆಪಿಎಸ್ಸಿ ಕೋಲಾಹಲ ಹೇಗಿತ್ತು? ನೆನಪಿದೆಯಾ? ಆ ಕೊಳಕನ್ನು ತೊಳೆಯದೆ ಬಿಡುವುದಿಲ್ಲ ನಾನು. ನಿಮ್ಮದು ಮಾತು ಜಾಸ್ತಿ, ಕೆಲಸ ನಾಸ್ತಿ. ಪರನಿಂದನೆಯಲ್ಲಿ ಪರಮಾರ್ಥ ಕಾಣುತ್ತಿದ್ದೀರಿ. ಐಡೆಂಟಿಟಿ ಸಮಸ್ಯೆ ಅಂತ ಕಾಣುತ್ತೆ ನಿಮಗೆ ಟಾಂಗ್ ಕೊಟ್ಟಿದ್ದಾರೆ.

ಕ್ರಾಸ್ ವೋಟ್ ಕಾಂಗ್ರೆಸ್: ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲಕ್ಕಕ್ಕೆ ನಾಲ್ಕು ಕ್ಷೇತ್ರಗಳಲ್ಲಿ ಸೋಲನುಭವಿಸಿದ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಚಿವ ಕುಮಾರಸ್ವಾಮಿ ಅವರು; ಶೂನ್ಯಕ್ಕಿಳಿದ ಕ್ರಾಸ್ ವೋಟ್ ಕಾಂಗ್ರೆಸ್ (Cross Vote Congre) ಎಂದು ಕಾಲೆಳೆದಿದ್ದಾರೆ.
ಗೆದ್ದ ನಮ್ಮವರು ನಾಲ್ವರು ಅಡ್ಡಮತ ಪಡೆದ ಅಭ್ಯರ್ಥಿಗಳಲ್ಲ. ಅಡ್ಡಕಸಬಿಗಳ ಆತ್ಮಾವಲೋಕನಕ್ಕೆ ಇದು ಸಕಾಲ. ಅಡ್ಡಮತದ ಫಲಾನುಭವಿಯನ್ನು ನಮ್ಮ ವೀರರು ಎದುರುಗೊಳ್ಳಲಿದ್ದಾರೆ ಎಂದಿದ್ದಾರೆ.