SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಸಕ್ಕರೆ ತುಂಬಿದ್ದ ಲಾರಿ ಕೆರೆಯಲ್ಲಿ ಪಲ್ಟಿ

ಸಕ್ಕರೆ ತುಂಬಿದ್ದ ಲಾರಿ ಕೆರೆಯಲ್ಲಿ ಪಲ್ಟಿ

0
15

ಬಾಗಲಕೋಟೆ: ಸಾಯಿಪ್ರಿಯಾ ಶುಗರ್ ಜಮಖಂಡಿಯಿಂದ ಸಕ್ಕರೆ ತುಂಬಿಕೊಂಡು ಚಾಮರಾಜನಗರಕ್ಕೆ ಹೊರಟಿದ್ದ ಲಾಯಿಯೊಂದು ಚಾಲಕನ ನಿಯಂತ್ರಣ ತಪ್ಪಿ ಚಿಮ್ಮನಕಟ್ಟಿ ಗ್ರಾಮದ ಹತ್ತಿರ ಕೆರೆಗೆ ನುಗ್ಗಿ ಪಲ್ಟಿಯಾಗಿದೆ.

ಪಲ್ಟಿಯಾದ ಲಾರಿ ಮುಖಭಾಗ ನಜ್ಜುಗುಜ್ಜಾಗಿದ್ದು ಲಾರಿಯಲ್ಲಿದ್ದ ಸಕ್ಕರೆ ಚಿಲ ನೆಲಕ್ಕುರುಳಿವೆ. ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.