ಬೆಂಗಳೂರಿನ ಫ್ರೀ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಯರ್ತೆಯರ ಮುಖಂಡರೊಂದಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಂಗಳವಾರ ಜಪಾನ್ ನಿಂದಲೇ ವಿಡಿಯೋ ಕರೆ ಮೂಲಕ ಮಾತುಕತೆ ನಡೆಸಿದರು.
ವಿದೇಶ ಪ್ರವಾಸದಲ್ಲಿದ್ದು ರೈಲಿನಲ್ಲಿ ಪ್ರಯಾಣಿಸುತ್ತಲ್ಲೇ ಮಾತನಾಡಿದ ಅವರು, ಕಾರ್ಯಕರ್ತೆಯರ ಕುರಿತು ಅವರಿಗೆ ವಿಶೇಷ ಕಾಳಜಿ ಇರುವುದು ತಿಳಿಸಿ ಮುಷ್ಕರ ಕೈಬಿಡುವಂತೆ ವಿನಂತಿಸಿದರು.
ಪ್ರತಿಭಟನೆ ಮುಂದುವರೆಸುತ್ತಿರುವ ಮಹಿಳೆಯರಿಗೆ ಹಗಲು-ರಾತ್ರಿ, ಬಿಸಿಲು ಚಳಿಯಲ್ಲಿ ತೀವ್ರ ತೋದರೆಯಾಗುತ್ತಿದೆ, ನನ್ನ ಮೇಲೆ ಭರವಸೆ ಇಟ್ಟು ಪ್ರತಿಭಟನೆ ಹಿಂದೆ ತೆಗೆದುಕೊಳ್ಳಿ ಮುಂಬರುವ ಅಧಿವೇಶನದಲ್ಲಿ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಲಾಗುವುದು. ಅಲ್ಲಿಯವರೆಗೆ ಸಮಯ ಕೊಡಿ.
ಪ್ರತಿಭಟನಾ ಸ್ಥಳಕ್ಕೆ ಬರುವ ರಾಜಕೀಯ ನಾಯಕರು ಕೇವಲ ತಮ್ಮ ಲಾಭಕ್ಕಾಗಿ ತಮ್ಮನ್ನು ಬಳಸಿಕೊಳ್ಳುತ್ತಾರೆ ಹೊರತು ನೆರವಿಗೆ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಬೆಲೆ ಏರಿಕೆಯ ಕಷ್ಟ ಅರಿತೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಜಪಾನ್ ಪ್ರವಾಸ ಮುಗಸಿ ವಾಪಾಸದ ನಂತರ ಖುದ್ದು ಭೇಟಿಯಾಗಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.





















