ಮುಂಬೈ: ರಿಲಯನ್ಸ್ ರೀಟೇಲ್ ಹೊಸ ಬೆಳವಣಿಗೆಯ ಪರ್ವವನ್ನು ಪ್ರವೇಶಿಸಿದೆ. ಅದರಲ್ಲಿ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಭಾರತೀಯ ಗ್ರಾಹಕರನ್ನು ಕಂಪನಿಯು ಆಳವಾಗಿ ಅರ್ಥ ಮಾಡಿಕೊಂಡಿರುವುದರಿಂದ ದೇಶಾದ್ಯಂತ ಜನರಿಗೆ ಉತ್ತಮವಾಗಿ ಸೇವೆ ಒದಗಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಹೇಳಿದರು.
2006ನೇ ಇಸವಿಯಲ್ಲಿ ಹೈದರಾಬಾದ್‌ನಲ್ಲಿ ‘ರಿಲಯನ್ಸ್ ಫ್ರೆಶ್’ನೊಂದಿಗೆ ಆರಂಭವಾದ ರಿಲಯನ್ಸ್ ರೀಟೇಲ್ ಪ್ರಯಾಣವು ಇದೀಗ ಭಾರತದ ಅತಿದೊಡ್ಡ ರೀಟೇಲರ್ ಆಗಿ ವ್ಯಾಪಿಸುವ ಮಟ್ಟಕ್ಕೆ ರಿಲಯನ್ಸ್ ರೀಟೇಲ್ ಪ್ರಯಾಣ ಸಾಗಿಬಂದಿದೆ ಎಂಬುದನ್ನು ಮುಕೇಶ್ ಅಂಬಾನಿ ಉಲ್ಲೇಖಿಸಿದರು. ಹಣಕಾಸು ವರ್ಷ 2026ರ ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಮಳಿಗೆಗಳ ಸಂಖ್ಯೆ 20 ಸಾವಿರ ದಾಟಿದೆ ಎಂಬುದನ್ನು ಸ್ಮರಿಸಿದರು.
ಅಂಬಾನಿ ಅವರು ಹೇಳಿದಂತೆ, ಈ ಪ್ರಯಾಣ ಮೂರು ಹಂತಗಳಲ್ಲಿ ಸಾಗಿಬಂದಿದೆ. ಮೊದಲನೆಯದಾಗಿ ಸ್ಟೋರ್‌ಗಳ ನಿರ್ಮಾಣ ಮತ್ತು ಗ್ರಾಹಕರ ವಿಶ್ವಾಸ ಗಳಿಸುವುದು. ಎರಡನೆಯದಾಗಿ, ಭೌತಿಕ ಮಳಿಗೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ಜಿಯೋಮಾರ್ಟ್ ಹಾಗೂ ಅಜಿಯೋ ಇಂಥವುಗಳ ಜೊತೆಗೆ ಜೋಡಿಸುವುದು. ಈ ಆಧುನಿಕ ರೀಟೇಲ್ ಅನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಪಿನ್‌ಕೋಡ್‌ಗಳಿಗೆ ತಲುಪಿಸುವುದು ಇದೇ ಎರಡನೇ ಹಂತದ್ದಾಗಿತ್ತು. ಮೂರನೆಯದಾಗಿ, “ಆಳವಾದ- ತಂತ್ರಜ್ಞಾನ ಇಂಟೆಲಿಜೆನ್ಸ್ ಯುಗ” ಎಂದು ಅವರು ವಿವರಿಸಿದರು.
ಸರಳವಾಗಿ ವಿವರಿಸಬೇಕು ಅಂದರೆ, ಇದರರ್ಥ ರಿಲಯನ್ಸ್ ರೀಟೇಲ್‌ನಿಂದ ಎಐ, ತಂತ್ರಜ್ಞಾನ ಹಾಗೂ ಗ್ರಾಹಕರ ದತ್ತಾಂಶವನ್ನು ಬಳಸಿಕೊಂಡು ವ್ಯವಹಾರವನ್ನು ಇನ್ನೂ ಹೆಚ್ಚು ದಕ್ಷವಾಗಿ ಹಾಗೂ ಇನ್ನೂ ಉತ್ತಮ ಉತ್ಪನ್ನಗಳು ಮತ್ತು ಸೇವೆಗಳನ್ನು ಭಾರತೀಯ ಕುಟುಂಬಗಳಿಗೆ ದೊರಕಿಸಲು ಶ್ರಮಿಸಲಾಗುತ್ತದೆ. ಕಂಪನಿಯ ಗಹನವಾದ ತಂತ್ರಜ್ಞಾನ ಸಾಮರ್ಥ್ಯ ಹಾಗೂ ಡಿಜಿಟಲ್ ತಲುಪುವಿಕೆ ಈ ಎರಡೂ ಡಿಜಿಟಲ್ ವ್ಯವಹಾರದ ಮುಖ್ಯವಾದ ವೇಗವರ್ಧಕಗಳು ಎಂಬುದು ಮುಕೇಶ್ ಅಂಬಾನಿ ಅವರ ಅಭಿಪ್ರಾಯ.
ಜನರ ಖರೀದಿ ಹವ್ಯಾಸಗಳು ಬಹಳ ವೇಗವಾಗಿ ಬದಲಾಗುತ್ತಿರುವ ಸಮಯದಲ್ಲಿ ಎಐ ಮೇಲೆ ಗಮನ ಕೇಂದ್ರೀಕರಿಸುವ ಕಡೆಗೆ ಲಕ್ಷ್ಯ ನೀಡಲಾಗಿದೆ. ಗ್ರಾಹಕರು ಸಹ ಸಾಂಪ್ರದಾಯಿಕವಾಗಿ ಮಳಿಗೆಗಳಿಂದ ಖರೀದಿ ಮಾಡುವುದರಿಂದ ಸ್ಮಾರ್ಟ್‌ಫೋನ್‌ಗೆ ಬದಲಾಗಿದೆ. ಆಯಾ ಸಮಯಕ್ಕೆ ಎಂಬಂತೆ ಖರೀದಿ ಮಾಡುತ್ತಿದ್ದವರು ಪದೇಪದೇ ಕೊಳ್ಳುತ್ತಿದ್ದಾರೆ. ಸೀಮಿತ ಆಯ್ಕೆಯಿಂದ ವಿವಿಧ ವಿಭಾಗಗಳ ವಸ್ತುಗಳ ಖರೀದಿಗೆ ವ್ಯಾಪಕವಾಗಿ ವಿಸ್ತರಣೆ ಆಗಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿ ರಿಲಯನ್ಸ್ ರೀಟೇಲ್ ಇದೆ ಎಂದು ಅಂಬಾನಿ ಹೇಳಿದರು.
ಜಾಗತಿಕ ಟಾಪ್ 50 ರೀಟೇಲರ್‌ಗಳ ಪೈಕಿ ಭಾರತೀಯ ಗ್ರಾಹಕರ ವಿಶ್ವಾಸ- ನಂಬಿಕೆ ರಿಲಯನ್ಸ್ ರೀಟೇಲ್ ಮೇಲಿದೆ. ಈ ವೈಶಿಷ್ಟ್ಯ ಹೊಂದಿರುವ ಏಕೈಕ ಭಾರತೀಯ ರೀಟೇಲರ್ ಎಂಬ ಹೆಗ್ಗಳಿಕೆ ಕೂಡ ಈ ಕಂಪನಿಗೆ ಇದೆ ಎಂದು ಅವರು ಹೇಳಿದರು.
ಇನ್ನೂ ಮುಂದುವರಿದು ಅವರು ಮಾತನಾಡಿ, ರಿಲಯನ್ಸ್ ರೀಟೇಲ್ ಹಾಗೂ ಆರ್‌ಸಿಪಿಎಲ್‌ನಿಂದ ಇನ್ನೂ ಎರಡು ಬೆಳವಣಿಗೆಯ – ಮುಂದುವರಿದ ಉತ್ಪಾದನೆ ಮತ್ತು ರಫ್ತು ಪ್ಲಾಟ್‌ಫಾರ್ಮ್ ಸೇರ್ಪಡೆ ಮಾಡಲಾಗುತ್ತದೆ ಎಂದು ತಿಳಿಸಿದರು. ಅದರಲ್ಲಿ ಉತ್ಪಾದನಾ ಪ್ಲಾಟ್‌ಫಾರ್ಮ್ ಪಾನೀಯ, ನಿತ್ಯ ಅಗತ್ಯಗಳು, ತಾಜಾ ಹಣ್ಣು- ತರಕಾರಿಗಳು, ಗಾರ್ಮೆಂಟ್ಸ್ ಹಾಗೂ ಕೈಗೆಟುಕುವ ದರದ ಎಲೆಕ್ಟ್ರಾನಿಕ್ಸ್ ಒಳಗೊಳ್ಳುತ್ತದೆ.
ಮುಖ್ಯ ಗಮನವನ್ನು ತಾಜಾ ಹಣ್ಣುಗಳು ಮತ್ತು ತರಕಾರಿಗಳಿಗೆ ನೀಡಲಾಗುತ್ತದೆ. ಇದರ ಪ್ರಾಮುಖ್ಯವನ್ನು ಒತ್ತಿ ಹೇಳಿದ ಮುಕೇಶ್ ಅಂಬಾನಿ, ತುರ್ತಾಗಿ ತ್ಯಾಜ್ಯವನ್ನು ಕಡಿಮೆ ಮಾಡಬೇಕು, ಶುದ್ಧತೆ ಹೆಚ್ಚು ಮಾಡಬೇಕು ಹಾಗೂ ಸುರಕ್ಷತಾ ಮಟ್ಟವನ್ನು ಹೆಚ್ಚಿಸಬೇಕು. ರಿಲಯನ್ಸ್ ತನ್ನ ಸೋರ್ಸಿಂಗ್, ಕೋಲ್ಡ್ ಚೈನ್ ಮತ್ತು ವಿತರಣಾ ಬಲವನ್ನು ಬಳಸಿಕೊಳ್ಳಲು ಯೋಜನೆ ಮಾಡುತ್ತಿದೆ. ಇದರಿಂದಾಗಿ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆ, ಜೊತೆಗೆ ಮಳಿಗೆಗಳ ಮಾಲೀಕರಿಗೆ ನಂಬಿಕಸ್ಥ ಪೂರೈಕೆ ದೊರೆಯುತ್ತದೆ ಹಾಗೂ ಅದೇ ವೇಳೆಗೆ ಭಾರತೀಯ ಕುಟುಂಬಗಳಿಗೆ ತಾಜಾ ಆಹಾರ ಹಾಗೂ ನ್ಯಾಯಯುತ ಬೆಲೆಗೆ ಸಿಗುತ್ತದೆ ಎಂದು ಅವರು ಹೇಳಿದರು.
ಕಂಪನಿಯು ಭಾರತಾದ್ಯಂತ ಇರುವ 21 ಕ್ಲಸ್ಟರ್‌ಗಳಲ್ಲಿ ಪೂರೈಕೆ ಸಹಯೋಗದೊಂದಿಗೆ ಗಾರ್ಮೆಂಟ್ ಉತ್ಪಾದನಾ ಪರಿಸರ ವ್ಯವಸ್ಥೆ ಸಹ ನಿರ್ಮಿಸುತ್ತಿದೆ. ಇದು ಕೈಗೆಟುಕುವ ಎಲೆಕ್ಟ್ರಾನಿಕ್ಸ್, ಅದರಲ್ಲಿ ಸ್ಮಾರ್ಟ್ ಐ ವೇರ್, ಟೆಲಿವಿಷನ್, ಸ್ಮಾರ್ಟ್‌ಫೋನ್‌ಗಳು ಹಾಗೂ ಸಂಪರ್ಕಿತ ವೇರಬಲ್‌ಗಳು ಇವುಗಳ ಮೇಲೆ ಕೂಡ ಗಮನ ಕೇಂದ್ರೀಕರಿಸಲಾಗುತ್ತದೆ.
ಇನ್ನು ರಫ್ತು ಪ್ಲಾಟ್‌ಫಾರ್ಮ್ ರಿಲಯನ್ಸ್‌ನ ಮಹತ್ವಾಕಾಂಕ್ಷಿ ಬಲವಾದ ಜಾಗತಿಕ ಎಫ್ಎಂಸಿಜಿ ವ್ಯವಹಾರ ನಿರ್ಮಿಸುವ ಗುರಿಗೆ ಬೆಂಬಲ ನೀಡುತ್ತದೆ. ಅದರ ಜೊತೆಗೆ ಭಾರತದಲ್ಲಿ ಗ್ರಾಹಕ ಬ್ರ್ಯಾಂಡ್‌ಗಳ ಬೆಳವಣಿಗೆಗೂ ಬಲ ದೊರೆಯುತ್ತದೆ ಎಂದು ಅಂಬಾನಿ ಹೇಳಿದರು.
ಪ್ರಾದೇಶಿಕ ಮಾರುಕಟ್ಟೆಗಳಿಗೆ ಅಂಬಾನಿ ಅವರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಕೇಶ್ ಅಂಬಾನಿ ಅವರು ನೀಡಿದ ಅತಿ ಮುಖ್ಯ ಸಂದೇಶ ಏನೆಂದರೆ, ರಿಲಯನ್ಸ್ ರೀಟೇಲ್ ಮುಂದಿನ ಹಂತ ಕೇವಲ ಮಳಿಗೆಗಳ ಸಂಖ್ಯೆಯನ್ನು ಹೆಚ್ಚು ಮಾಡುವುದಷ್ಟೇ ಆಗಿರುವುದಿಲ್ಲ. ಆದರೆ ತಂತ್ರಜ್ಞಾನಗಳ ಬಳಕೆ, ಉತ್ಪಾದನೆ, ಮತ್ತು ಪೂರೈಕೆ ಜಾಲವನ್ನು ಬಲಗೊಳಿಸುವುದಾಗಿರುತ್ತದೆ. ಆ ಮೂಲಕ ಉತ್ತಮ ಗುಣಮಟ್ಟ, ಉತ್ತಮ ಮೌಲ್ಯ ಹಾಗೂ ಭಾರತೀಯ ಕುಟುಂಬಗಳಿಗೆ ಉತ್ತಮ ಸಂಪರ್ಕ ಒದಗಿಸುವುದಾಗಿರುತ್ತದೆ.






















