ಮುಂಬಯಿ: ರಿಲಯನ್ಸ್ ರಿಟೇಲ್‌ನ ಯುವ ಫ್ಯಾಷನ್ ಬ್ರ್ಯಾಂಡ್ ಆಗಿರುವ ಯೂಸ್ಟಾ, ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ವೈವಿಧ್ಯಮಯ ಉಡುಪುಗಳ ಮೂಲಕ ಫ್ಯಾಷನ್, ಕ್ರೀಡೆ ಮತ್ತು ಪಾಪ್ ಸಂಸ್ಕೃತಿಯನ್ನು ಒಟ್ಟುಗೂಡಿಸುವ ತನ್ನ ವಿನೂತನ ಫಿಫಾ (FIFA) ಫ್ಯಾಷನ್ ಉಡುಪುಗಳ ಸಂಗ್ರಹವನ್ನು ಬಿಡುಗಡೆಗೊಳಿಸಿದೆ.
ಫಿಫಾ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಸಂಭ್ರಮದ ಹಿನ್ನೆಲೆಯಲ್ಲಿ, ಕ್ರೀಡಾ-ಪ್ರೇರಿತ ಫ್ಯಾಷನ್ ಬೆಳೆಯುತ್ತಿದೆ. ಹೀಗಾಗಿ ಈ ಸಂಗ್ರಹವು ಯುವ ಅಭಿಮಾನಿಗಳನ್ನು ಆಕರ್ಷಿಸಲಿದೆ.
ಯೂಸ್ಟಾ ಮಳಿಗೆಗಳಲ್ಲಿ ಲಭ್ಯವಿರುವ ಈ ಸಂಗ್ರಹವು ಪುರುಷರು, ಮಹಿಳೆಯರು ಮತ್ತು ಮಕ್ಕಳ ಫಿಫಾ ಫ್ಯಾಷನ್ ಉತ್ಪನ್ನಗಳನ್ನು ಒಂದೇ ಜಾಗದಲ್ಲಿ ನೀಡುತ್ತದೆ. ಈ ಶ್ರೇಣಿಯು ಫುಟ್ಬಾಲ್ ಕ್ರೀಡೆಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಿಗ್ಗಜ ರಾಷ್ಟ್ರಗಳಿಂದ ಪ್ರೇರಿತವಾದ ಕಂಟ್ರಿ ಜೆರ್ಸಿಗಳನ್ನು ಒಳಗೊಂಡಿದೆ. ಜೊತೆಗೆ ಟ್ರೆಂಡೀ ಫಾರ್ವರ್ಡ್ ಆದ ಕ್ಯಾಶುಯಲ್‌ವೇರ್, ಕೋ-ಆರ್ಡ್‌ಗಳು, ಗ್ರಾಫಿಕ್ ಟೀಶರ್ಟ್, ಕ್ರೀಡಾ-ಪ್ರೇರಿತ ಡೆನಿಮ್ ಮತ್ತು ಇಂದಿನ ಯುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾದ ಉತ್ಪನ್ನಗಳ ಸಹಯೋಗಗಳನ್ನು ಒಳಗೊಂಡಿದೆ. ಬ್ರ್ಯಾಂಡ್ ತನ್ನ ಗ್ರಾಹಕರ ಉತ್ಸಾಹ ಮತ್ತು ಆಸಕ್ತಿಗಳೊಂದಿಗೆ ಸಂಪರ್ಕ ಸಾಧಿಸುವ ಕಲೆಕ್ಷನ್ ಆಗಿ ಹೊರಹೊಮ್ಮಿದೆ. ಯೂಸ್ಟಾ ತನ್ನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಫುಟ್ಬಾಲ್ ವಿಶ್ವಕಪ್ ಸಂಭ್ರಮವನ್ನು ಹೆಚ್ಚಿಸಿದೆ.
ಈ ಸಂಗ್ರಹವು “ಫನ್ ವಿತ್ ಫಿಫಾ” ಶ್ರೇಣಿಯನ್ನು ಸಹ ಒಳಗೊಂಡಿದೆ. ಇದು ಟೊಮ್ಯಾಟೊ ಕೆಂಪು ಮತ್ತು ಪ್ರಕಾಶಮಾನವಾದ ಹಸಿರು ನಂತಹ ರೋಮಾಂಚಕ ವರ್ಣಗಳಲ್ಲಿ ಕ್ರೀಡಾ-ಪ್ರೇರಿತ ಡೆನಿಮ್ ಅನ್ನು ಒಳಗೊಂಡಿರುವ ಕ್ರೀಡಾ ಉಡುಪುಗಳನ್ನು ಹೊಂದಿದೆ. ಮಿಕ್ಕಿ & ಮಿನ್ನೀ, ಪೀನಟ್ಸ್ ಮತ್ತು ಗಾರ್ಫೀಲ್ಡ್ ಸೇರಿದಂತೆ ವಿಶ್ವದ ಅತ್ಯಂತ ಪ್ರೀತಿ ಪಾತ್ರಗಳಲ್ಲಿ ಕೆಲವನ್ನು ಒಟ್ಟುಗೂಡಿಸುವ ಈ ಶ್ರೇಣಿಯು ಫುಟ್‌ಬಾಲ್-ಪ್ರೇರಿತ ಫ್ಯಾಷನ್‌ಗೆ ಯುವ ಆಯಾಮವನ್ನು ಸೇರಿಸುತ್ತದೆ. ಮಕ್ಕಳ ಉಡುಪುಗಳೂ ಅತ್ಯಂತ ಆಕರ್ಷಕವಾಗಿವೆ.
ಫಿಫಾ ಕಲೆಕ್ಷನ್‌ಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆಯು ಲಭಿಸಿದ್ದು, ಯುವ ಪೀಳಿಗೆಯ ಗ್ರಾಹಕರಲ್ಲಿ ಕ್ರೀಡಾ-ಪ್ರೇರಿತ ಉಡುಪು ಮತ್ತು ಅಥ್ಲೀಷರ್ (ಅಥ್ಲೆಟಿಕ್ ಮತ್ತು ದೈನಂದಿನ ಚಟುವಟಿಕೆಗಳು) – ಪ್ರಭಾವಿತ ಡ್ರೆಸ್ಸಿಂಗ್‌ನ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ.
ಜಾಗತಿಕ ಸಾಂಸ್ಕೃತಿಕ ಕ್ಷಣಗಳನ್ನು ಆಸ್ವಾದಿಸಲು ಪೂರಕವಾಗಿರುವ ಫ್ಯಾಷನ್‌ನೊಂದಿಗೆ ಸಂಯೋಜಿಸುವ ಮೂಲಕ, ಯೂಸ್ಟಾ ಯುವ ಗ್ರಾಹಕರಿಗೆ ಪ್ರಸ್ತುತ ಮತ್ತು ಆಕರ್ಷಕ ಫ್ಯಾಷನ್ ಅನುಭವ ನೀಡುವುದಲ್ಲದೆ, ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ಹೆಚ್ಚು ಅರ್ಥಪೂರ್ಣವಾಗಿಸಿದೆ.






















