SK Home Ad
Home ಸುದ್ದಿ ರಾಜ್ಯ ನೂತನ ಸಿಎಂ DKಗೆ ಕೃಷ್ಣಾ, ಮಹದಾಯಿ ಸವಾಲು!

ನೂತನ ಸಿಎಂ DKಗೆ ಕೃಷ್ಣಾ, ಮಹದಾಯಿ ಸವಾಲು!

0
103

ತೆಲಂಗಾಣ, ಆಂಧ್ರ ರಾಜ್ಯಗಳ ಮನವೊಲಿಕೆ ಅಗತ್ಯ | ಮಹದಾಯಿ ಕೈಬಿಟ್ಟ ಕೇಂದ್ರ ವನ್ಯಜೀವಿ ಮಂಡಳಿ

ಬಿ.ಅರವಿಂದ

ಸಂ.ಕ.ಸಮಾಚಾರ, ಹುಬ್ಬಳ್ಳಿ : ಕೃಷ್ಣಾ ಮೇಲ್ದಂಡೆ ಯೋಜನೆಯು ಅಧಿಸೂಚನೆಯ ನಿರ್ಲಕ್ಷö್ಯ ಮತ್ತು ಮಹದಾಯಿ ಯೋಜನೆಯು ಕೇಂದ್ರಪಟ್ಟಿಯಿAದಲೇ ದೂರವಾಗಿರುವ ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಇವೇ ಈಗ ಹೊಸ ಸಿಎಂ ಡಿ.ಕೆ.ಶಿವಕುಮಾರ್ ಎದುರು ಹೊಸ ಸವಾಲುಗಳೂ ಆಗಿವೆ.

ಕೃಷ್ಣೆ ರಾಜ್ಯದ ಎರಡನೇ ಕಣ್ಣು. ಆದರೆ ಇದಕ್ಕೆ ಸುಣ್ಣವೇ ಗತಿ ಎಂಬಂತಾಗಿದೆ. ಕೃಷ್ಣಾ ಜಲಾನಯನ ವ್ಯಾಪ್ತಿಯ ಸಮಸ್ಯೆಗಳು ಪರಿಹಾರವಾಗಿ, ರಾಜ್ಯದ ಪಾಲಿನ ನೀರಿನ ಪೂರ್ಣ ಬಳಕೆಯಾಗಲು (ಬಚಾವತ್ ಐತೀರ್ಪಿನ ಪ್ರಕಾರ) ಆಲಮಟ್ಟಿ ಜಲಾಶಯದ ಎತ್ತರ 524 ಮೀಟರ್‌ಗೆ ಏರಬೇಕಿದೆ. ಜೊತೆಗೆ, ಐತೀರ್ಪಿನ ಅಧಿಸೂಚನೆ ಕೂಡ ಆಗಲೇಬೇಕು. ಇಲ್ಲದಿದ್ದರೆ ಸರ್ಕಾರ ಕೆಲ ತಿಂಗಳ ಹಿಂದೆ ನಡೆಸಿರುವ ಭೂಸ್ವಾಧೀನ ಪ್ರಕ್ರಿಯೆಗೆ ತಾರ್ಕಿಕ ಅಂತ್ಯ ದೊರೆಯುವುದಿಲ್ಲ.

ಇದನ್ನೂ ಓದಿ: ಡಿಕೆಶಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಆದಾರ?

ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ತಮ್ಮ ಪಾಲಿನ ನೀರಿನ ಮರು ನಿಗದಿಗೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ನ್ಯಾಯಾಲಯದಲ್ಲಿನ ಅರ್ಜಿಗಳ ಇತ್ಯರ್ಥವಾಗಿ ಅಧಿಸೂಚನೆ ಜಾರಿಗೊಳ್ಳದೇ ಜಲಾಶಯದ ಎತ್ತರವನ್ನು ಹೆಚ್ಚಿಸುವಂತಿಲ್ಲ.

ಕೃಷ್ಣೆಯ ಈ ಅಳಲನ್ನು ನೂತನ ಸಿಎಂ ಗಮನಿಸಬೇಕಿದೆ. ನ್ಯಾಯಾಲಯದಿಂದ ತಕರಾರು ಅರ್ಜಿಗಳನ್ನು ಹಿಂಪಡೆಯುವಂತೆ ತೆಲುಗು ಭಾಷಿಕ ರಾಜ್ಯಗಳ ಮನವೊಲಿಸುವಲ್ಲಿ ಅವರು ಯಶಸ್ವಿಯಾದರೆ ಅಧಿಸೂಚನೆಗೆ ಎದುರಾಗಿರುವ ನೆಪವೂ ದೂರವಾಗುತ್ತದೆ.
ಒಂದು ಲಕ್ಷ ಕೋಟಿ ರೂ. ಬೇಕು: ದಶಕಗಳಿಂದ ನಡೆಯುತ್ತಲೇ ಇರುವ ಈ ಮಹತ್ವದ ಯೋಜನೆ ಮುಗಿಯಲು ಕನಿಷ್ಠ ಒಂದು ಲಕ್ಷ ಕೋಟಿ ರೂಪಾಯಿ ಬೇಕು ಎಂಬುದು ತಜ್ಞರ ಅನಿಸಿಕೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ರಾಮಲಿಂಗಾ ರೆಡ್ಡಿ

ಆದರೆ ರಾಜ್ಯದ ಬಜೆಟ್‌ನಲ್ಲಿ ಕೃಷ್ಣಾ ಮೇಲ್ದಂಡೆಗಾಗಿ ಪ್ರತ್ಯೇಕವಾಗಿ 5-10 ಸಾವಿರ ಕೋಟಿ ರೂಪಾಯಿಗಳನ್ನೂ ತೆಗೆದಿಡುತ್ತಿಲ್ಲ. ಹೀಗಾಗಿ ಯೋಜನೆ ಮುಗಿಯುತ್ತಿಲ್ಲ. ಆದ್ದರಿಂದ ಈಗ ಕೃಷ್ಣೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದು ಉಳಿದಿರುವ ಸಮರ್ಪಕ ಮಾರ್ಗ. ನೂತನ ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಒತ್ತಡ ಹೇರಿ, ರಾಷ್ಟಿçÃಯ ಯೋಜನೆಯನ್ನಾಗಿಸುವಲ್ಲಿ ಯಶಸ್ವಿಯಾದರೆ ಅದೊಂದು ಐತಿಹಾಸಿಕ ನಡೆಯಾಗಲಿದೆ.

ಮಹದಾಯಿ ಕಗ್ಗಂಟು : ಮಹದಾಯಿ ಐತೀರ್ಪು ಹೊರಬಿದ್ದು ಎಂಟು ವರ್ಷಗಳಾದರೂ, ಗೋವಾದ ತಕರಾರಿನಿಂದಾಗಿ ಯೋಜನೆ ಜಾರಿಯಾಗುತ್ತಿಲ್ಲ. ತಕರಾರಿನ ಹಿನ್ನೆಲೆ, ವಿಷಯದ ಅಧ್ಯಯನ ಮಾಡುತ್ತಿರುವ ಕೇಂದ್ರ ವನ್ಯಜೀವಿ ಮಂಡಳಿಯು ಈಗ ತನ್ನ ಕಾರ್ಯಕಲಾಪ ಪಟ್ಟಿಯಿಂದ ಮಹದಾಯಿಯನ್ನು ಕೈಬಿಟ್ಟಿದೆ.

ಇದನ್ನೂ ಓದಿ: BJP ನಾಯಕ ಅಣ್ಣಾಮಲೈ ರಾಜೀನಾಮೆ ಅಂಗೀಕಾರ

ಇದು ರಾಜ್ಯಕ್ಕೆ ದೊಡ್ಡ ಹಿನ್ನಡೆ. ಪರಿಸರಕ್ಕೆ ಸಂಬಂಧಿಸಿದ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಸಿಇಸಿ) ಕೇಳಿದ್ದ ಸ್ಪಷ್ಟನೆಗಳಿಗೆ ಸಂಬಂಧಿಸಿದ ಅರಣ್ಯಾಧಿಕಾರಿಗಳು ಉತ್ತರಿಸದ ಕಾರಣ, ಈ ಋಣಾತ್ಮಕ ಬೆಳವಣಿಗೆಯಾಗಿದೆ. ಡಿ.ಕೆ.ಶಿವಕುಮಾರ್, ಈ ಅಂಶವನ್ನು ಆದ್ಯತೆಯ ಮೇಲೆ ಪರಿಗಣಿಸಿ, ಮಹದಾಯಿ ವಿಷಯವನ್ನು ಪುನಃ ಕಾರ್ಯಕಲಾಪ ಪಟ್ಟಿಗೆ ಸೇರ್ಪಡೆಯಾಗುವಂತೆ ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇದರೊಂದಿಗೆ, ಗೋವಾ ಜೊತೆ ದ್ವಿಪಕ್ಷೀಯ ಸಭೆ ನಡೆಸುವುದು ಹೆಚ್ಚು ಪ್ರಯೋಜನಕಾರಿ ಎನ್ನುವುದನ್ನೂ ಅವರು ಪರಿಗಣಿಸಲಿ ಎಂಬುದು ಜನಾಪೇಕ್ಷೆಯಾಗಿದೆ.