ನಟ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ನಟಸಿರುವ ಮೊಟ್ಟ ಮೊದಲ ಸಿನಿಮಾ ಮ್ಯಾಂಗೋ ಪಚ್ಚ. ಈ ಹಿಂದೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿ ಮುಂದಕ್ಕೆ ಹೋಗಿತ್ತು. ಇದು ಗಾಂಜಾ ಕುರಿತಾದ ಕಥಾಹಂದಿರ ಒಳಹೊಂಡಿರುವ ಚಿತ್ರಕ್ಕೆ ವಿವೇಕ ನಿರ್ದೇಶನ ಮಾಡಿದ್ದಾರೆ. ಇದೊಂದು ‘ಮೈಸೂರು ಮೂಲದ ಕ್ರೈಂ ಡ್ರಿಲ್ಲರ್ ಸಿನಿಮಾ ಇದಾಗಿದ್ದು, 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಸಿನಿಮಾದಲ್ಲಿವೆ. ಮೈಸೂರು ಹಾಗೂ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ’ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ.
ಸಿನಿಮಾ ಅಂದಾಗ ಎಲ್ಲರಲ್ಲೂ ಒಂದಲ್ಲಾ ಒಂದು ಅಪೇಕ್ಷೆಯಿಂದಲೇ ನೋಡುತ್ತಾರೆ. ಹೀಗಿರುವಾಗ ಚಿತ್ರ ನೋಡುಗರಿಗೆ ಅವರದ್ದೇ ಆದ ಕಲ್ಪನೆಗಳನ್ನು ಸೇರಿಸುತ್ತಾ, ಸಿನಿಮಾ ಹೇಗಿದೆ ಎಂಬುದನ್ನು ವ್ಯಕ್ತ ಪಡಿಸುತ್ತಾರೆ. ಹಾಗೇ ಈ ಮ್ಯಾಂಗೋ ಪಚ್ಚ ನೋಡಲು 5 ಕಾರಣಗಳು ಇವೇ.. ಇಲ್ಲಿದೇ ಡೀಟೇಲ್ಸ್
ಮೊದಲ ಕಾರಣ: ಸುದೀಪ್ ಅಳಿಯ (ಅಕ್ಕನ ಮಗ) ಸಂಚಿತ್ ಸಂಜೀವ್ ನಟನೆಯ ಚೊಚ್ಚಲ ಸಿನಿಮಾವಿದು. ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದಕ್ಕೂ ಮುನ್ನ ಅದಕ್ಕೆ ಪೂರಕವಾಗಿ ಸಿದ್ಧತೆ ನಡೆಸಿ, ಇದೀಗ ಪರದೆಯ ಮೇಲೆ ರಾರಾಜಿಸಲು ಆಣಿಯಾಗಿದ್ದಾರೆ ಸಂಚಿತ್, ಹೈಟು, ಖಡಕ್ ಲುಕ್ಕು, ಬೇಸ್ ವಾಯ್ಸ್… ಹೀಗೆ ಹೀರೋಗೆ ಬೇಕಾದ ಸಾಕಷ್ಟು ಅಂಶಗಳನ್ನು ಅಡಕವಾಗಿಸಿಕೊಂಡಿರುವ ಮತ್ತೊಂದು ಆರಡಿ ಪ್ರತಿಭೆ.
ಎರಡನೇ ಕಾರಣ: ಯುವ ಪ್ರತಿಭೆಗಳಿಗೆ ವೇದಿಕೆ ಕಲಿಸಲು ಪ್ರಿಯಾ ಸುದೀಪ್ ಮುಂದಾಗಿದ್ದು, ಅದರ ಮೊದಲ ಹೆಜ್ಜೆಯಾಗಿ ‘ಸುಪ್ರಿಯಾನಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ‘ಮ್ಯಾಂಗೋ ಪಚ್ಚ ನಿರ್ಮಿಸಿದ್ದಾರೆ. ಅವರಿಗೆ ‘ಕೆಆರ್‌ಜಿ ಸ್ಟಡಿಯೋಸ್’ ಸಹ ಸಾಥ್ ನೀಡಿದೆ.
ಮೂರನೇ ಕಾರಣ: ನಾಯಕ ಹಾಗೂ ನಿರ್ಮಾಪಕಿಯಂತೆಯೇ ನಿರ್ದೇಶಕ ವಿವೇಕ್ ಪ್ರಕಾಶ್‌ಗೂ ಇದು ಚೊಚ್ಚಲ ಸಿನಿಮಾ. ಮೊದಲ ಯತ್ನದಲ್ಲೇ ಡ್ರಗ್ಸ್ ಹಾಗೂ ಕೌಟುಂಬಿಕ ಕಥನ ಹೊಂದಿರುವ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 2001-2011ರ ಅವಧಿಯಲ್ಲಿ ಮೈಸೂರಿನ ಸುತ್ತಮುತ್ತ ನಡೆದ ಪ್ರಮುಖ ಘಟನೆಗಳನ್ನೇ ಈ ಸಿನಿಮಾದ ಕಥೆಯ ಸಾರ.
ನಾಲ್ಕನೇ ಕಾರಣ: ಕೆಲವರಿಗೆ ಇದು ‘ಮೊದಲುಗಳು’ ಎಂಬ ಕಾರಣದಿಂದ ವಿಶೇಷತೆ ಎನಿಸಿದರೆ, ತಾಂತ್ರಿಕವರ್ಗ ಮಾತ್ರ ಅನುಭವಿಗಳಿಂದಲೇ ತುಂಬಿದೆ. ಚರಣ್ ರಾಜ್ ಸಂಗೀತ, ಶರತ್ ಸಂಕಲನ ಹಾಗೂ ಶೇಖರ್ ಚಂದ್ರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.
ಐದನೇ ಕಾರಣ: ಟೀಸರ್ ಹಾಗೂ ಹಾಡಿನ ಮೂಲಕ ಗಮನ ಸೆಳೆದಿರುವ ಈ ಚಿತ್ರದಲ್ಲಿ ಕಾಜಲ್ ಕುಂದರ್, ಮಯೂರ್ ಪಟೇಲ್, ಭಾವನಾ, ಹರಿಣಿ






















