SK Home Ad
Home ನಮ್ಮ ಜಿಲ್ಲೆ ಕಲಬುರಗಿ ಪ್ರಧಾನಿ ಮೋದಿ ಮಾತಿನ ಮಲ್ಲ, ಜನರ ಬಗ್ಗೆ ಕಾಳಜಿ ಇಲ್ಲ

ಪ್ರಧಾನಿ ಮೋದಿ ಮಾತಿನ ಮಲ್ಲ, ಜನರ ಬಗ್ಗೆ ಕಾಳಜಿ ಇಲ್ಲ

0
293

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ, ದಿನದಿಂದ ದಿನಕ್ಕೆ ಇಂಧನ ದರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರದ ಮೇಲೆ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಟೀಕಿಸಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ಕಮರ್ಷಿಯಲ್ ಸಿಲಿಂಡರ್ ದರ ಏರಿಕೆ ವಿಚಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದಿನನಿಂದ ದಿನಕ್ಕೆ ದರ ಜಾಸ್ತಿ ಮಾಡುತ್ತಿದ್ದು, ಗ್ಯಾಸ್ ಬೆಲೆ, ಪೆಟ್ರೋಲ್ ಬೆಲೆ ಪ್ರತಿಯೊಂದು ಏರಿಕೆಯಾಗುತ್ತಿವೆ.

ಪ್ರಧಾನಿ ಮೋದಿ ಒಂದು ದಿನ ಬಿಟ್ಟು ಮತ್ತೊಂದು ದಿನಕ್ಕೆ ಇಂಧನ ದರ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತೆ. ಆದರೆ ದೇಶದ ಜನತೆ ಅವರಿಗೆ ಆಶೀರ್ವದಿಸಿದ್ದಾರೆ. ಆದರೆ ಕೇವಲ ಮಾತಿನಿಂದಲೇ ಪ್ರತಿಯೊಬ್ಬರಿಗೂ ಕನ್ವಿನ್ಸ್ ಮಾಡುತ್ತಿರುವುದು ಸರಿಯಲ್ಲ. ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಮಾಡಬೇಕುಎಂದು ದೂರಿದರು.

ಪ್ರತಿಯೊಂದಕ್ಕೂ ಪ್ರಧಾನಿ ಮೋದಿ ಅವರು ವಿರೋಧ ಪಕ್ಷಕ್ಕೆ ಬೈಯುವ ಖಯಾಲಿ ಬೆಳೆಸಿಕೊಂಡಿದ್ದಾರೆ. ಯಾರು ಅವರ ಸಹಾಯ ಮಾಡುತ್ತಿಲ್ಲ, ಅಭಿವೃದ್ಧಿಗೆ ಸಹಕರಿಸುತ್ತಿಲ್ಲವೆಂದು ದೂರುವುದು ಬಿಟ್ಟರೆ ಮತ್ತೇನೂ ಮಾಡುತ್ತಿಲ್ಲ ಎಂದು ಆಪಾದಿಸಿದರು.

ವಿರೋಧ ಪಕ್ಷ ಯಾವಾಗಲೂ ದೇಶದ ಪರವಾಗಿ ಕೆಲಸ ಮಾಡಲಿದೆ. ಜನರ ಬಗ್ಗೆ ಚಿಂತೆ ಮಾಡಿ ಜನರ ಸಲುವಾಗ ನೆರವಿಗೆ ಧಾವಿಸುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಮಾತ್ರ ಈವತ್ತಿಗೂ ಯಾವುದೇ ಕಾರ್ಯಕ್ರಮ ಅನುಷ್ಠಾನಕ್ಕೆ ತಂದರೂ ವಿಫಲವಾಗುತ್ತಿವೆ ಎಂದು ಆರೋಪಿಸಿದರು.

ಡಾಲರ್ ಮುಂದೆ ರೂಪಾಯಿ ಬೆಲೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ದೂರಿದ ಖರ್ಗೆ ಅವರು, ನಾವು ಹಿಂದೆ ತಂದ ಮನರೇಗಾ ಕಾರ್ಯಕ್ರಮ ಕೂಡಾ ಬಂದ್ ಮಾಡಿದರು. ಆದರೆ ಪ್ರಧಾನಿ ಮೋದಿ ಮಾತ್ರ ಮಾತಿನ ಮಲ್ಲ ಹೊರತಾಗಿ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಲೇವಡಿ ಮಾಡಿದರು.