SK Home Ad
Home ನಮ್ಮ ಜಿಲ್ಲೆ ಧಾರವಾಡ ಅಂದೇ ಸಿದ್ದರಾಮಯ್ಯ ಭವಿಷ್ಯ ನುಡಿದಿತ್ತು ಮಣ್ಣಿನ ಬೊಂಬೆ

ಅಂದೇ ಸಿದ್ದರಾಮಯ್ಯ ಭವಿಷ್ಯ ನುಡಿದಿತ್ತು ಮಣ್ಣಿನ ಬೊಂಬೆ

0
197

ಧಾರವಾಡ: “ನಿಜವಾಯ್ತು ಮಣ್ಣಿನ ಬೊಂಬೆ ಭವಿಷ್ಯ” ‘ರಾಜ್ಯ ರಾಜಕೀಯದಲ್ಲಿ ಬದಲಾವಣೆ ಶತಸಿದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಥಾನ ಅಭದ್ರ’ ಎಂಬ ಧಾರವಾಡ ತಾಲೂಕು ಉಪ್ಪಿನಬೆಟಗೇರಿಯ ಹನುಮನಕೊಪ್ಪ ಗ್ರಾಮದ ಈ ವರ್ಷದ ಯುಗಾದಿ ಫಲಾಫಲದ ಮಣ್ಣಿನ ಬೊಂಬೆ ಭವಿಷ್ಯ ಈಗ ನಿಜವಾದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುರುವಾರದಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಹನುಮನಕೊಪ್ಪ ಗ್ರಾಮದಲ್ಲಿ ಈ ವರ್ಷ ಯುಗಾದಿ ಪಾಡ್ಯದಂದು ಮಣ್ಣಿನ ಗೊಂಬೆಯು ತಿಳಿಸಿದ ಮುನ್ಸೂಚನೆಯ ಭವಿಷ್ಯವು ನಿಜ ಆಗಿದೆ. ಪ್ರಸಕ್ತ ವರ್ಷದ ಯುಗಾದಿ ಫಲಾಫಲ ಕಟ್ಟಿದ ಮಣ್ಣಿನ ಗದ್ದುಗೆಯ ನಾಲ್ಕು ದಿಕ್ಕಿಗೆ ಇರುವ ರಾಜಕಾರಣದ ದಿಕ್ಸೂಚಿಯ ಬೊಂಬೆಯಲ್ಲಿ ರಾಜ್ಯ ರಾಜಕೀಯ ಸೂಚಿಸುವ ದಿಕ್ಕಿನ ಬೊಂಬೆಗೆ ಧಕ್ಕೆಯಾಗಿತ್ತು, ಹೀಗಾಗಿ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಶತಸಿದ್ಧ ಎಂದು ಹೇಳಲಾಗಿತ್ತು. ಅದರಂತೆ ಈಗ ಘಟಿಸಿದೆ.

ನೂರಾರು ವರ್ಷಗಳಿಂದ ಇಲ್ಲಿನ ತುಪ್ಪರಿ ಹಳ್ಳದ ತಟದಲ್ಲಿ ಸಂಪ್ರದಾಯಬದ್ಧವಾಗಿ ಮಣ್ಣಿನಿಂದ ನಿರ್ಮಿಸಿರುವ ಗದ್ದುಗೆಯ ಮೂಲಕ ಮಣ್ಣಿನ ಬೊಂಬೆಗಳ ಯುಗಾದಿ ಫಲಾಫಲದ ವರ್ಷದ ಭವಿಷ್ಯದ ಮುನ್ಸೂಚನೆಯನ್ನು ಯುಗಾದಿ ಪಾಡ್ಯೆಯ ದಿನದಂದು ತಿಳಿಸುತ್ತಾ ಬರಲಾಗುತ್ತಿದೆ.

ನಿಜವಾದ ಭವಿಷ್ಯ ಈ ಹಿಂದೆ ಇಲ್ಲಿನ ಬೊಂಬೆಗಳ ಭವಿಷ್ಯ ಸಾಕಷ್ಟು ಸಲ ನಿಜವಾಗಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿ ಅವರ ಹತ್ಯೆ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರ ದುರಂತ ಸಾವು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬದಲಾವಣೆ ಹಾಗೂ ಚಿತ್ರನಟ ಪುನೀತ ರಾಜಕುಮಾರ ಅವರ ಅಕಾಲಿಕ ಸಾವು ಹಾಗೂ ರಾಜ್ಯ ರಾಜಕಾರಣದಲ್ಲಿ ಅನೇಕ ಬದಲಾವಣೆ ಮತ್ತು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಹೀಗೆ ಇನ್ನೂ ಅನೇಕ ಸಂಗತಿಗಳು ಈ ಮಣ್ಣಿನ ಬೊಂಬೆಗಳ ಮುನ್ಸೂಚನೆಯ ಭವಿಷ್ಯ ನಿಜವಾಗಿವೆ.