SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಮ್ಯೂಲ್ ಅಕೌಂಟ್‌ಗಳಿಂದ 32.43 ಲಕ್ಷ ವಂಚನೆ: ಆರೋಪಿ ಬಂಧನ

ಮ್ಯೂಲ್ ಅಕೌಂಟ್‌ಗಳಿಂದ 32.43 ಲಕ್ಷ ವಂಚನೆ: ಆರೋಪಿ ಬಂಧನ

0
31

ಶಿವಮೊಗ್ಗ: ಮೋಸದಿಂದ ಬ್ಯಾಂಕ್ ಖಾತೆ ಪಡೆದು ಕೋಟಿ ಕೋಟಿ ವಂಚನೆ ಮಾಡುತ್ತಿರುವ ಪ್ರಕರಣಗಳು ಮಲೆನಾಡಿನ ಹೆಬ್ಬಾಗಿಲಿನಲ್ಲಿ ಹೆಚ್ಚಾಗತೊಡಗಿವೆ. ಇದೀಗ ಗಾರ್ಮೆಂರ್ಟ್‌ನ ಮಹಿಳಾ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆ ಪಡೆದು ಒಟ್ಟು ನಾಲ್ಕು ಖಾತೆಗಳಿಂದ ಬರೋಬ್ಬರಿ 32 ಲಕ್ಷದ 43 ಸಾವಿರಕ್ಕೂ ಹೆಚ್ಚು ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.

ಸಾಯಿ ಗಾರ್ಮೆಂರ್ಟ್ಸ್‌ ಮಹಿಳಾ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯನ್ನು ಮೋಸದಿಂದ ಪಡೆದುಕೊಂಡ ಆಸಾಮಿ, ಮ್ಯೂಲ್ ಅಕೌಂಟ್ ಆಗಿ ಬಳಕೆ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ದೇಶಾದ್ಯಂತ ಬರೋಬ್ಬರಿ 18 ಸೈಬರ್ ವಂಚನೆ ಪ್ರಕರಣಗಳಲ್ಲಿ 4 ಕೋಟಿ ಹೆಚ್ಚು ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.

ವಂಚನೆಗೆ ಒಳಗಾದ ಮಹಿಳೆಯು ಶಿವಮೊಗ್ಗದ ಸೈಬರ್ ಠಾಣೆಗೆ ದೂರು ನೀಡಿದ್ದರು. ಐಟಿ ಕಾಯಿದೆ ಮತ್ತು 318(4), 318(2) ಬಿಎನ್‌ಎಸ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

ಬೆಂಗಳೂರಿನ ಹೆಚ್‌ಎಎಲ್ ಏರ್‌ಪೋರ್ಟ್ ಹತ್ತಿರ ವಾಸವಾಗಿದ್ದ ಅಂಕಿತ್ (34) ಎಂಬಾತನನ್ನು ಬಂಧಿಸಿ, 4 ಎಟಿಎಂ ಕಾರ್ಡ್, 4 ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಕಮಿಷನ್ ಆಸೆಗೆ ಸಾರ್ವಜನಿಕರು ಬ್ಯಾಂಕ್ ಖಾತೆಯ ವಿವರಗಳನ್ನು ಅಪರಿಚಿ ತರಿಗೆ ನೀಡಬಾರದು. ಸೈಬರ್ ವಂಚಕರಿಗೆ ಬ್ಯಾಂಕ್ ಖಾತೆ ನೀಡಿ ಕಮಿಷನ್ ಪಡೆದಿರುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.