Home Advertisement
Home ಸುದ್ದಿ ದೇಶ ಮದ್ಯ ಖರೀದಿ-ಮಾರಾಟಕ್ಕೆ ವಯೋಮಿತಿ ನಿಗದಿ: ಮಹತ್ವದ ಆದೇಶ

ಮದ್ಯ ಖರೀದಿ-ಮಾರಾಟಕ್ಕೆ ವಯೋಮಿತಿ ನಿಗದಿ: ಮಹತ್ವದ ಆದೇಶ

0
26

ಚೆನ್ನೈ: ಮದ್ಯ ಖರೀದಿ ಅಥವಾ ಮಾರಾಟ ಮಾಡಲು ಕನಿಷ್ಠ 21 ವರ್ಷ ನಿಗದಿಪಡಿಸಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ದೇವಾಲಯಗಳು, ಶಿಕ್ಷಣ ಸಂಸ್ಥೆ ಮತ್ತು ಬಸ್ ನಿಲ್ದಾಣಗಳ ಸಮೀಪದಲ್ಲಿದ್ದ ಮದ್ಯದಂಗಡಿಗಳನ್ನು ಮುಚ್ಚಲು ಸರ್ಕಾರ ಆದೇಶಿಸಿತ್ತು.

ಇನ್ನು ಮುಂದೆ ಮದ್ಯ ಖರೀದಿ ಅಥವಾ ಮಾರಾಟ ಮಾಡಲು ಕನಿಷ್ಠ 21 ವರ್ಷ ನಿಗದಿಪಡಿಸಿ ಹೊಸ ಕ್ರಮವನ್ನು ಜಾರಿಗೊಳಿಸಿದೆ. ಅಂಗಡಿಗಳ ಸಿಬ್ಬಂದಿಗೆ ಗ್ರಾಹಕರ ವಯಸ್ಸನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಮಾರಾಟ ಮತ್ತು ಖರೀದಿ ವೇಳೆ ಸಂಶಯವಿದ್ದಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ಚೀಟಿ ಪರಿಶೀಲಿಸಿ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.