Home Advertisement
Home ಕ್ರೀಡೆ IPL 2026: ಮುಂಬೈ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ

IPL 2026: ಮುಂಬೈ ವಿರುದ್ಧ ಟಾಸ್‌ ಗೆದ್ದ ಆರ್‌ಸಿಬಿ

0
106

ರಾಯಪುರ: ಐಪಿಎಲ್‌ ಪಂದ್ಯಾವಳಿಯ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟಾಸ್‌ನಲ್ಲಿ ಗೆಲುವು ಕಂಡಿದೆ.

ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್‌ಸಿಬಿ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದೆ.

ರಾಯ್‌ಪುರದ ಕ್ರೀಡಾಂಗಣವು ಬ್ಯಾಟರ್‌ಗಳಿಗೆ ಹೆಚ್ಚಿನ ಬೆಂಬಲ ನೀಡುವ ನಿರೀಕ್ಷೆಯಿದೆ. ಇಲ್ಲಿನ ಬೌಂಡರಿಗಳು ಚಿಕ್ಕದಾಗಿರುವುದರಿಂದ ಹೆಚ್ಚಿನ ಮೊತ್ತದ ಪಂದ್ಯವನ್ನು ನಿರೀಕ್ಷಿಸಬಹುದು.

ಐಪಿಎಲ್ ಇತಿಹಾಸದಲ್ಲಿ ಈ ಎರಡು ತಂಡಗಳು ಇದುವರೆಗೆ 35 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 19 ಬಾರಿ ಮತ್ತು ಬೆಂಗಳೂರು 16 ಬಾರಿ ಜಯ ಸಾಧಿಸಿವೆ.

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಮುಂಬೈ ತಂಡವನ್ನು 18 ರನ್‌ಗಳಿಂದ ಸೋಲಿಸಿತ್ತು. ಹಾಗಾಗಿ ಮುಂಬೈ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದೆ.