Home Advertisement
Home ಕ್ರೀಡೆ IPL 2026: ಲಖನೌ ವಿರುದ್ಧ ಟಾಸ್‌ ಗೆದ್ದ ಚೆನ್ನೈ

IPL 2026: ಲಖನೌ ವಿರುದ್ಧ ಟಾಸ್‌ ಗೆದ್ದ ಚೆನ್ನೈ

0
22

ಚೆನ್ನೈ: ಐಪಿಎಲ್‌‌ ಪಂದ್ಯಾವಳಿಯ 53ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ ಟಾಸ್‌ನಲ್ಲಿ ಗೆಲುವು ಸಾಧಿಸಿದೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿದೆ.

ಈ ಪಂದ್ಯದಲ್ಲಿ ಎರಡೂ ತಂಡಗಳಿಗೂ ಗೆಲುವಿನ ಅನಿವಾರ್ಯತೆ ಇದ್ದು, ಲಖನೌ ಸೋತಲ್ಲಿ ಟೂರ್ನಿಯಿಂದಲೇ ಹೊರಬೀಳಲಿದೆ.

ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಕೂಡ ಪ್ಲೇ ಆಫ್‌ ಸೇರಲು ಈ ಪಂದ್ಯ ಗೆಲ್ಲಲೇಬೇಕಿದೆ. ಇಲ್ಲವಾದಲ್ಲಿ ಅದರ ಪ್ಲೇ ಆಫ್‌ ದಾರಿ ಇನ್ನಷ್ಟು ಕಷ್ಟಕರವಾಗಲಿದೆ.

ಚೆನ್ನೈ ಹಾಗೂ ಲಖನೌ ಎರಡೂ ತಂಡಗಳು ಕೂಡ 10 ಪಂದ್ಯಗಳನ್ನು ಆಡಿದ್ದು, ಚೆನ್ನೈ 5ರಲ್ಲಿ ಗೆಲುವು 5ರಲ್ಲಿ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದು, ಲಖನೌ 7ರಲ್ಲಿ ಸೋತಿದ್ದು, 3ರಲ್ಲಿ ಮಾತ್ರ ಗೆಲುವು ಸಾಧಿಸಿ ಕೊನೆಯ 10ನೇ ಸ್ಥಾನವನ್ನು ಪಡೆದಿದೆ.