ಪ್ರಧಾನಿ ತೆರಳುವ ರಸ್ತೆ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ: ಓರ್ವ ಅರೆಸ್ಟ್​

ಬೆಂಗಳೂರು: ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಸ್ಫೋಟಕ ವಸ್ತುವಾದ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಬೆಂಗಳೂರು ಹೊರವಲಯದ ಕಗ್ಗಲಿಪುರ ಗ್ರಾಮದ ತಾತಗುಣಿ ಬಳಿ, ಜಿಲೆಟಿನ್ ಕಡ್ಡಿ ಪತ್ತೆಯಾಗಿದೆ. ಈ ಕುರಿತಂತೆ ಬೆಂಗಳೂರು ನಗರ ಹಾಗೂ ರಾಮನಗರದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದಿದ್ದಾರೆ. ಅನುಮಾನಾಸ್ಪದ ಬ್ಯಾಗ್‌ವೊಂದು ಕಂಡುಬಂದ ಹಿನ್ನೆಲೆ ಅದನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಆ ಬ್ಯಾಗ್‌ನಲ್ಲಿ ಜಿಲೆಟಿನ್ ಕಡ್ಡಿಗಳು ಇರುವುದಾಗಿ ಕಂಡುಬಂದಿದೆ. ಉದ್ದೇಶಪೂರ್ವಕವಾಗಿ ಇರಿಸಲಾಗಿದೆಯೇ ಅಥವಾ ಇದರ ಉದ್ದೇಶವೇನು ಎನ್ನುವುದು ತನಿಖೆಯಿಂದ … Continue reading ಪ್ರಧಾನಿ ತೆರಳುವ ರಸ್ತೆ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ: ಓರ್ವ ಅರೆಸ್ಟ್​