SK Home Ad
Home ಕ್ರೀಡೆ IPL 2026: ಸಂಜು-ಕಾರ್ತಿಕ್‌ ಶತಕದ ಜತೆಯಾಟ, ಚೆನ್ನೈಗೆ ಜಯ

IPL 2026: ಸಂಜು-ಕಾರ್ತಿಕ್‌ ಶತಕದ ಜತೆಯಾಟ, ಚೆನ್ನೈಗೆ ಜಯ

0
133

ದೆಹಲಿ: ಸಂಜು ಸ್ಯಾಮ್ಸನ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸುಲಭ ಜಯ ದಾಖಲಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 156 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ 15 ಎಸೆತಗಳು ಬಾಕಿ ಇರುವಂತೆ ಗೆಲುವಿನ ಗುರಿ ತಲುಪುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಆರಂಭದಲ್ಲಿ ನಾಯಕ ರುತುರಾಜ್‌ ಗಾಯಕ್ವಾಡ್‌ (6) ವಿಕೆಟ್‌ ಕಳೆದುಕೊಂಡಿತು. ಅವರ ಹಿಂದೆಯೇ ಉರ್ವಿಲ್ ಪಟೇಲ್ (17) ಕೂಡ ಬಹುಬೇಗನೆ ವಿಕೆಟ್‌ ಒಪ್ಪಿಸಿದರು. ಇದರಿಂದಾಗಿ 6.3 ಓವರ್‌ಗಳಲ್ಲಿ ಕೇವಲ 45 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮುರಿಯದ ಮೂರನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್‌ ಮತ್ತು ಕಾರ್ತಿಕ್‌ ಶರ್ಮಾ ಜೋಡಿ 114 ರನ್‌ಗಳ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿತು.

ಕಾರ್ತಿಕ್‌ 31 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ನಿಂದ ಅಜೇಯ 41 ರನ್‌ ಗಳಿಸಿದರೆ, ಸಂಜು ಸ್ಯಾಮ್ಸನ್‌ 52 ಎಸೆತದಲ್ಲಿ 7 ಬೌಂಡರಿ, 6 ಸಿಕ್ಸರ್‌ನಿಂದ 87 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿತು.

ಆರಂಭದಲ್ಲಿಯೇ ಡೆಲ್ಲಿ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಚೆನ್ನೈ ಬೌಲರ್‌ಗಳು ಪಾವರ್‌ ಪ್ಲೇ ಮುಗಿಯುವುದರೊಳಗೆ ಪಾತುಂ ನಿಸ್ಸಾಂಕ (19) ಮತ್ತು ಕೆ.ಎಲ್‌. ರಾಹುಲ್‌ (12) ಅವರನ್ನು ಪೆವಿಲಿಯನ್‌ಗೆ ಸೇರಿಸಿದರು.

ಬಳಿಕ ಬಂದ ನಿತೀಶ್‌ ರಾಣಾ (15) ಕರುಣ ನಾಯರ್‌ (13) ಮತ್ತು ಅಕ್ಷರ ಪಟೇಲ್‌ (2) ಕೂಡ ಬಹುಬೇಗನೆ ವಿಕೆಟ್‌ ಒಪ್ಪಿಸಿ ಹೊರನಡೆದರು. 11 ಓವರ್‌ಗಳಲ್ಲಿಯೇ 69 ರನ್‌ಗಳಿಗೆ ಪ್ರಮುಖ 5 ವಿಕೆಟ್‌ ಕಳೆದುಕೊಂಡು ಡೆಲ್ಲಿ ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಸಮೀರ್ ರಿಜ್ವಿ ಜೋಡಿ 65 ರನ್‌ಗಳ ಜತೆಯಾಟ ನಡೆಸಿ ಅಲ್ಪ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಆಸರೆಯಾದರು. ಸ್ಟಬ್ಸ್ 31 ಎಸೆತದಲ್ಲಿ 1 ಬೌಂಡರಿ, 2 ಸಿಕ್ಸರ್‌ನಿಂದ 38 ರನ್‌ಗಳಿಸಿ ಔಟಾದರು.

ಸಮೀರ್ ರಿಜ್ವಿ 24 ಎಸೆತದಲ್ಲಿ 4 ಸಿಕ್ಸರ್‌ನಿಂದ 40 ರನ್‌ಗಳಿಸಿ ಅಜೇಯರಾಗಿ ಉಳಿದರೆ, ಅಶುತೋಷ್ ಶರ್ಮಾ ಕೊನೆಗೆ ಕ್ರಿಸ್‌ಗೆ ಬಂದು 5 ಎಸೆತದಲ್ಲಿ 2 ಸಿಕ್ಸರ್‌ನಿಂದ 14 ರನ್‌ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.