Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಶೃಂಗೇರಿ ಚುನಾವಣೆಯಲ್ಲಿ ಹೊಸ ಟ್ವಿಸ್ಟ್: ಅಂಚೆ ಮತಗಳೇ ಗೇಮ್‌ಚೇಂಜರ್

ಶೃಂಗೇರಿ ಚುನಾವಣೆಯಲ್ಲಿ ಹೊಸ ಟ್ವಿಸ್ಟ್: ಅಂಚೆ ಮತಗಳೇ ಗೇಮ್‌ಚೇಂಜರ್

0
143

ಚಿಕ್ಕಮಗಳೂರು: ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದಿದ್ದು, ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಹಿನ್ನಡೆಯಾಗಿದೆ.

ಮೇ 2ರಂದು ನಡೆದ ಮರು ಎಣಿಕೆಯಲ್ಲಿ ರಾಜೇಗೌಡರು ಅಂಚೆ ಮತಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂಬ ಮಾಹಿತಿ ಹೊರಬಂದಿತ್ತು. ಆದರೆ ಬಳಿಕ ನಡೆದ ಪರಿಶೀಲನೆ ಹಾಗೂ ಅಂತಿಮ ಮರು ಎಣಿಕೆಯಲ್ಲಿ ಫಲಿತಾಂಶದಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ.

2023ರ ಮೇ 13ರಂದು ನಡೆದ ಮೂಲ ಮತ ಎಣಿಕೆಯಲ್ಲಿ ಸಿಂಧು ಎಂದು ಪರಿಗಣಿಸಲಾಗಿದ್ದ ಕೆಲವು ಅಂಚೆ ಮತಗಳು ಈಗಿನ ಮರು ಎಣಿಕೆಯಲ್ಲಿ ತಿರಸ್ಕೃತಗೊಂಡಿವೆ. ಅಂಚೆ ಮತಪತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ‘ಡಬಲ್ ಟಿಕ್’ ಗುರುತು ಇರುವ ಕಾರಣ ಒಟ್ಟು 258 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ.

ಈ ಪೈಕಿ ಟಿ.ಡಿ. ರಾಜೇಗೌಡ ಅವರಿಗೆ ಈ ಹಿಂದೆ ಲಭಿಸಿದ್ದ 569 ಅಂಚೆ ಮತಗಳಲ್ಲಿ 255 ಮತಗಳು ಮರು ಎಣಿಕೆಯಲ್ಲಿ ಕಡಿತಗೊಂಡಿವೆ. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ದೊರೆತಿದ್ದ 692 ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ.

ಈ ಬೆಳವಣಿಗೆಯಿಂದ ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣ ಬದಲಾಗುವ ಸಾಧ್ಯತೆ ಹೆಚ್ಚಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಈಗಾಗಲೇ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮರು ಎಣಿಕೆ ಪ್ರಕ್ರಿಯೆಯಲ್ಲಿ ಅಸಮಂಜಸತೆ ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೋಳಿ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಗೂ ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಮತ ತಿದ್ದುಪಡಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಹಾಜರಿದ್ದರು ಎನ್ನಲಾಗಿದೆ.