Home Advertisement
Home ಕ್ರೀಡೆ IPL 2026: ಫೆರೀರಾ ಸ್ಫೋಟಕ ಬ್ಯಾಟಿಂಗ್‌, ಡೆಲ್ಲಿಗೆ 226 ರನ್‌ ಗುರಿ

IPL 2026: ಫೆರೀರಾ ಸ್ಫೋಟಕ ಬ್ಯಾಟಿಂಗ್‌, ಡೆಲ್ಲಿಗೆ 226 ರನ್‌ ಗುರಿ

0
18

ಜೈಪುರ್‌: ಡೊನೊವನ್ ಫೆರೀರಾ ಸ್ಫೋಟಕ ಬ್ಯಾಟಿಂಗ್‌, ನಾಯಕ ರಿಯಾನ್ ಪರಾಗ್ ಉತ್ತಮ ರನ್‌ ಕಾಣಿಕೆಯಿಂದಾಗಿ ರಾಜಸ್ಥಾನ ರಾಯಲ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಬೃಹತ್‌ ರನ್‌ ಕಲೆಹಾಕಿದೆ.

ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 225 ರನ್‌ ಗಳಿಸಿತು.

ಇನ್ನಿಂಗ್ಸ್‌ ಆರಂಭದಲ್ಲಿಯೇ ರಾಜಸ್ಥಾನ್‌ ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್‌ನಲ್ಲಿಯೇ ಯಶಸ್ವಿ ಜೈಸ್ವಾಲ್‌ (6) ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಅವರಿಗೆ ಕ್ಯಾಚ್‌ ಕೊಟ್ಟು ಔಟಾದರು.

ಮೊದಲ ಎಸೆತದಲ್ಲಿಯೇ ಬೌಂಡರಿ ಬಾರಿಸಿದ್ದ ಸ್ಫೋಟಕ ಬ್ಯಾಟರ್‌ ವೈಭವ್‌ ಸೂರ್ಯವಂಶಿ (4) ಕೂಡ ಎರಡನೇ ಓವರ್‌ನಲ್ಲಿಯೇ ಕೈಲ್ ಜೇಮಿಸನ್‌ಗೆ ವಿಕಟ್‌ ಒಪ್ಪಿಸಿ ಹೊರನಡೆದರು.

ಮೂರನೇ ವಿಕೆಟ್‌ಗೆ ಜತೆಯಾದ ಧ್ರುವ್ ಜುರೆಲ್ ಮತ್ತು ರಿಯಾನ್ ಪರಾಗ್ ಜೋಡಿ 102 ರನ್‌ಗಳ ಜತೆಯಾಟ ನಡೆಸಿ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಉತ್ತಮ ಸ್ಥಿತಿಯತ್ತ ಕೊಂಡೊಯ್ದರು. ಈ ವೇಳೆ ಧ್ರುವ್ 42 ರನ್‌ ಗಳಿಸಿ ಔಟಾದರು.

ರಿಯಾನ್ ಪರಾಗ್ ಜತೆಯಾದ ರವೀಂದ್ರ ಜಡೇಜಾ 53 ರನ್‌ಗಳ ಜತೆಯಾಟ ನಡೆಸಿದರು. ಇದರಲ್ಲಿ ಕೇವಲ 20 ರನ್‌ ಕಾಣಿಕೆ ನೀಡಿದರು. ಶತಕದ ಹೊಸ್ತಿಲಲ್ಲಿದ್ದ ನಾಯಕ ರಿಯಾನ್ ಪರಾಗ್ ಮತ್ತು ಜಡೇಜಾ ಇಬ್ಬರೂಮಿಚೆಲ್ ಸ್ಟಾರ್ಕ್ ಅವರ ಒಂದೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ಬಳಿಕ ಕ್ರಿಸ್‌ಗೆ ಬಂದ ಡೊನೊವನ್ ಫೆರೀರಾ ಡೆಲ್ಲಿ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದು, ಕೇವಲ 14 ಎಸೆತದಲ್ಲಿ 2 ಬೌಂಡರಿ, 6 ಸಿಕ್ಸರ್‌ನಿಂದ ಅಜೇಯ 47 ರನ್‌ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.