Home Advertisement
Home ನಮ್ಮ ಜಿಲ್ಲೆ ಧಾರವಾಡ ಮೀಸಲಾತಿ ಪಡೆದುಕೊಳ್ಳುವ ಶಕ್ತಿ ನಾರಿಯರಿಗಿದೆ

ಮೀಸಲಾತಿ ಪಡೆದುಕೊಳ್ಳುವ ಶಕ್ತಿ ನಾರಿಯರಿಗಿದೆ

0
14

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕೊಡಲು ಸಾಧ್ಯ, ಬೇರೆ ಯಾರಿಂದಲೂ ಸಾಧ್ಯವಿಲ್ಲ. ಮಹಿಳೆಯರು ಹತಾಶರಾಗುವ ಅವಶ್ಯಕತೆ ಇಲ್ಲ. ಮೀಸಲಾತಿ ಪಡೆದುಕೊಳ್ಳುವ ಶಕ್ತಿ ನಿಮಗಿದೆ. ಪ್ರಜಾಪಭುತ್ವದಲ್ಲಿ ಜನರ ಆಶೋತ್ತರಗಳೇ ಯಶಸ್ವಿ ಆಗುವುದು. ಮಹಿಳಾ ಮೀಸಲಾತಿಯೂ ಅದೇ ರೀತಿ ಯಶಸ್ವಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಾರಿ ಶಕ್ತಿ ವಂದನಾ ಅಧಿನಿಯಮವನ್ನು (ಮಹಿಳಾ ಮೀಸಲಾತಿ ಮಸೂದೆ) ಜಾರಿಯಾಗದಂತೆ ತಡೆದ ಮಹಿಳಾ ವಿರೋಧಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಏರ್ಪಡಿಸಿದ ಜನಾಕ್ರೋಶ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಇಡಿ ವಿಶ್ವದಲ್ಲಿ ಮನುಷ್ಯನಿಗೆ ಶಕ್ತಿ ತುಂಬುವ ಕೆಲಸ ಮನುಷ್ಯನ ಜನ್ಮದಿಂದ ಹಿಡಿದು ಎಲ್ಲ ವಿಷಯದಲ್ಲಿ ನಾನು ಹಿಂದೆ ಇಲ್ಲ ಸರಿಸಮಾನ ಎಂದು ತೋರಿಸುವ ಕೆಲಸವನ್ನು ಮಹಿಳೆ ಮಾಡಿದ್ದಾಳೆ. ಕರ್ನಾಟಕದ ಇತಿಹಾಸದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ನಾರಿಶಕ್ತಿಯ ಪ್ರತೀಕ. ರಾಣಿ ಅಬ್ಬಕ್ಕ, ಒಣಕೆ ಓಬವ್ವ, ಹಲವಾರು ಹೆಸರುಗಳಿವೆ. ಆಧ್ಯಾತ್ಮದಲ್ಲಿ ಯಾರಿಗೂ ಕಡಿಮೆ ಇಲ್ಲದ ಅಕ್ಕ ಮಹಾದೇವಿ, ಕಾಂಗ್ರೆಸದ ನವರು ಯಾವ ಕಾಲದಲ್ಲಿ ಇದ್ದಾರೆ. ಆಧುನಿಕ ಕಾಲದಲ್ಲಿ ನರೇಂದ್ರ ಮೋದಿಯವರ ಕಾಲದಲ್ಲಿ ಧ್ವನಿ ಎತ್ತದಿದ್ದರೆ ಹೇಗೆ? ಕೇವಲ ನರೇಂದ್ರ ಮೋದಿಯವರಿಂದ ಮಾತ್ರ ಮಹಿಳೆಯರಿಗೆ ಮೀಸಲಾತಿ ಕೊಡಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ. 2023ರಲ್ಲಿ ನಮ್ಮದು ಮೂರನೇ ಎರಡಷ್ಟು ಬಹುಮತ ಇರದಿದ್ದರೂ ಎಲ್ಲ ಪಕ್ಷಗಳ ಬೆಂಬಲದಿಂದ ಈಗಾಗಲೇ ಶೇ 33 ರಷ್ಟು ಮೀಸಲಾತಿ ಕೊಡಲು ತೀರ್ಮಾನ ಮಾಡಿದ್ದಾರೆ. ಅದನ್ನು ಯಾವುದೇ ಸರ್ಕಾರ ಇದ್ದರೂ ಜಾರಿ ಮಾಡಲೇಬೇಕಾಗುತ್ತದೆ. ಅದನ್ನು 2034ಕ್ಕೆ ಮಾಡಲು ತೀರ್ಮಾನ ಮಾಡಿದ್ದರು. ಆದರೆ, ಮೋದಿಯವರು 2029ಕ್ಕೆ ಜಾರಿಗೆ ತರಲು ಪ್ರಯತ್ನ ಮಾಡಿದರು. ಆದರೆ, ಪ್ರತಿಪಕ್ಷಗಳು ಅದನ್ನು ಹತ್ಯೆ ಮಾಡಿದವು. ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಬ್ರೂಣ ಹತ್ಯೆ ಎಂದು ಕರೆದರು. ಕಾಂಗ್ರೆಸ್‌ನವರು ಮಹಿಳೆಯರ ರಾಜಕೀಯ ಶಕ್ತಿಗೆ ಬ್ರೂಣ ಹತ್ಯೆ ಮಾಡಿದ್ದಾರೆ. ನರೇಂದ್ರ ಮೋದಿಯವರು ಯಾವುದೇ ಕೆಲಸ ಕೈಗೆತ್ತಿಕೊಂಡರೆ ಅದನ್ನು ಮಾಡಿಯೇ ಮಾಡುತ್ತಾರೆ. ಮೋದಿಯವರು 2029ಕ್ಕೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದೆ ತರುತ್ತಾರೆ ಎನ್ನುವ ವಿಶ್ವಾಸ ಇದೆ. ಅದಕ್ಕೆ ಶಕ್ತಿ ತುಂಬಲು ನಾವು ಇದನ್ನು ಎಲ್ಲರ ಮನೆ ಮನೆಗೆ ತಲುಪಿಸಬೇಕು. ವಿರೋಧ ಮಾಡಿದವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ದೊಡ್ಡ ದ್ರೋಹ ಮಾಡಿದೆ ಎಂದು ಹೇಳಿದರು.

ಮಹಿಳೆಯರಿಗೆ ರಕ್ಷಣೆ ಇಲ್ಲ: ರಾಜ್ಯದಲ್ಲಿ ಕೊಲೆ ಸುಲಿಗೆ ಪ್ರತಿ ದಿನ ಲವ್ ಜಿಹಾದ್, ಮಹಿಳಾ ಹತ್ಯೆಗಳು ನಡೆಯುತ್ತಿವೆ. ನಮ್ಮ ಮಹಿಳೆಯರು ಮೈಸೂರು, ಮುಂಬೈಗೆ ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ಮಹಿಳೆಯರ ರಕ್ಷಣೆಗೆ ಏನೂ ಮಾಡುತ್ತಿಲ್ಲ. ನಮ್ಮ ಹೆಣ್ಣು ಮಕ್ಕಳು ಶಾಲೆಗೆ ಹೋದರೆ, ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುವ ಭರವಸೆ ಇಲ್ಲ. ರಾಜ್ಯದಲ್ಲಿ ಅನೀತಿ, ಅತ್ಯಾಚಾರ ನಿಲ್ಲಬೇಕಾದರೆ ನಮ್ಮ ರಕ್ಷಣೆ ಮಾಡಿಕೊಳ್ಳಲು ನಾವು ಸಿದ್ದರಿದ್ದೇವೆ. ನಮಗೆ ಅಧಿಕಾರ ಕೊಡಿ, ವಿಧಾನಸಭೆ, ಲೋಕಸಭೆಯಲ್ಲಿ ಸ್ಥಾನ ಕೊಡಿ ಎಂದು ನಾರಿ ಶಕ್ತಿ ಕೂಗಿ ಕೂಗಿ ಹೇಳುತ್ತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಅಡಿಪಾಯ: ಭೇಟಿ ಪಡಾವೊ ಬೇಟಿ ಬಚಾವೊ ಅದಕ್ಕೆ ಭಾರತದಲ್ಲಿ ಅಡಿಪಾಯ ಹಾಕಿದ್ದು ಮಾಜಿ ಮುಖ್ಯಮಂತಿ ಯಡಿಯೂರಪ್ಪ ಅವರು., ಭಾಗ್ಯ ಲಕ್ಷ್ಮಿ ಯೋಜನೆ ಜಾರಿಗೆ ತಂದು ಹೆಣ್ಣು ಮಗು ಹುಟ್ಟಿದಾಗ ಒಂದು ಲಕ್ಷ ರೂ. ಡಿಪಾಜಿಟ್ ಇಡಲಾಗಿತ್ತು. ಈಗ ಸುಮಾರು 40 ಲಕ್ಷ ಹೆಣ್ಣು ಮಕ್ಕಳು ಹದಿನೆಂಟು ವರ್ಷ ಪೂರೈಸಿದ್ದಾರೆ. ಅವರಿಗೆ ಒಂದು ಲಕ್ಷ ಸಿಗುತ್ತಿದೆ. ಅವರು ಶಾಲೆಗೆ ಹೋಗುತ್ತಿದ್ದಾರೆ. ಮಹಿಳೆಯರು ಶಾಲೆ ಬಿಡಬಾರದು ಎಂದು ಸೈಕಲ್ ಕೊಟ್ಟರು. ನನ್ನ ಅವಧಿಯಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೆ ತಂದಿದ್ದೆ. ಹೆಣ್ಣು ಮಕ್ಕಳು ಸ್ವಯಂ ಉದ್ಯೋಗ ಮಾಡಬೇಕೆಂದು ತಂದಿದ್ದೆ. ನರೇಂದ್ರ ಮೋದಿಯವರು ಕೇಂದ್ರದಲ್ಲಿ ಸಂಜೀವಿನಿ ಎನ್ನುವ ಕಾರ್ಯಕ್ರಮ ಕರ್ನಾಟಕದಲ್ಲಿ 10 ಲಕ್ಷ ಮಹಿಳೆಯರಿಗೆ ಅನುಕೂಲವಾಗಿದೆ ಎಂದು ಹೇಳಿದರು.

ಮಹಿಳೆಯ ಬಗ್ಗೆ ಗೌರವ: ಮಹಿಳೆಯರ ಬಗ್ಗೆ ನಮ್ಮ ಧರ್ಮದಲ್ಲಿ ಗೌರವ ಇದೆ. ಮಹಿಳೆಯನ್ನು ದೇವಿಯ ಸ್ಥಾನದಲ್ಲಿ ನೋಡುತ್ತೇವೆ. ಅದೇ ಭಾವನೆ ಇತರ ಧರ್ಮದಲ್ಲಿ ಇರಬೇಕೆಂದು ತ್ರಿಬಲ್ ತಲಾಖ್ ಅನ್ನು ಮೋದಿಯವರು ತೆಗೆದು ಹಾಕಿದರು. ಅಲ್ಪ ಸಂಖ್ಯಾತರ ಮತ ಪಡೆಯುವ ಕಾಂಗ್ರೆಸ್‌ವರಿಗೆ ಈ ವಿಚಾರ ಬರಲಿಲ್ಲ. ಡಿಲಿಮಿಟೇಷನ್ ಆದರೆ ಕಾಗ್ರೆಸ್ ನವರು ದಕ್ಷಿಣದಲ್ಲಿ ಸೀಟು ಕಡಿಮೆಯಾಗುತ್ತವೆ ಎಂದು ಹೇಳುತ್ತಾರೆ. ಮೋದಿಯವರು ತಂದಿರುವ ಕಾಯ್ದೆಯಲ್ಲಿ ಎಲ್ಲ ರಾಜ್ಯದಲ್ಲಿ ಶೇ 50 ರಷ್ಟು ಸೀಟುಗಳು ಹೆಚ್ಚಳವಾಗುತ್ತವೆ. ಈಗ ಕಾಂಗ್ರೆಸ್‌ನವರು ಮಾಡುತ್ತಿರುವ ವಾದದಂತೆ ಮಾಡಿದರೆ ಕರ್ನಾಟಕ ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಸೀಟುಗಳು ಕಡಿಮೆಯಾಗಲಿವೆ. ಅದಕ್ಕೆ ಕಾಂಗ್ರೆಸ್‌ನವರೇ ಕಾರಣರಾಗುತ್ತಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕಾಲದಲ್ಲಿ ಸಂಸತ್ತಿನಲ್ಲಿ ಮೂರನೆ ಎರಡು ಭಾಗ ಬಹುಮತ ಇದ್ದರೂ ಅವರು ಮಹಿಳಾ ಮಿಸಲಾತಿ ಜಾರಿಗೆ ತರಲಿಲ್ಲ. ಪ್ರಿಯಾಂಕಾ ಗಾಂಧಿಯವರೆ ನಿಮ್ಮ ತಂದೆಗೆ ಬಹುಮತ ಇದ್ದರೂ ಯಾಕೆ ಮಾಡಲಿಲ್ಲ ಇದಕ್ಕೆ ಉತ್ತರ ಕೊಡಿ ಎಂದು ಆಗ್ರಹಿಸಿದರು.

ಭರವಸೆ ಇಡಿ: ಎಲ್ಲ ಮಹಿಳೆಯರು ಭರವಸೆಯನ್ನು ಇಡಿ ಮಹಿಳೆಯರು ಹತಾಶರಾಗುವ ಅವಶ್ಯಕತೆ ಇಲ್ಲ. ಭರವಸೆ ಇಡಿ. ಮೀಸಲಾತಿ ಪಡೆದುಕೊಳ್ಳುವ ಶಕ್ತಿ ನಿಮಗೆ ಇದೆ. ಶಕ್ತಿಯ ಪ್ರದರ್ಶನ ಮಾಡಿ. ಇಡೀ ದೇಶದಲ್ಲಿ ನಾರಿ ಶಕ್ತಿಯ ಕೂಗಿಗೆ ಪಜಾಪಭುತ್ವದಲ್ಲಿ ಜನರ ಆಶೋತ್ತರಗಳೇ ಯಶಸ್ವಿ ಆಗುವುದು. ಶೇ 33% ಮಹಿಳಾ ಮೀಸಲಾತಿಯು ಅದೇ ರೀತಿ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.