Home Advertisement
Home ಕ್ರೀಡೆ IPL 2026: ಚೆನ್ನೈ ವಿರುದ್ಧ ಟಾಸ್‌ ಗೆದ್ದ ಗುಜರಾತ್‌ ಟೈಟನ್ಸ್‌

IPL 2026: ಚೆನ್ನೈ ವಿರುದ್ಧ ಟಾಸ್‌ ಗೆದ್ದ ಗುಜರಾತ್‌ ಟೈಟನ್ಸ್‌

0
2836

ಚೆನ್ನೈ: ಗುಜರಾತ್‌ ಟೈಟನ್ಸ್‌ ತನ್ನ ಎಂಟನೇ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಆಡುತ್ತಿದ್ದು, ಟಾಸ್‌ನಲ್ಲಿ ಗೆಲುವು ಕಂಡಿದೆ.

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಗುಜರಾತ್‌ ಮೊದಲು ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಚೆನ್ನೈ ಮೊದಲ ಬ್ಯಾಟ್‌ ಮಾಡುವ ಅವಕಾಶವನ್ನು ಪಡೆದಿದೆ.

ಟೂರ್ನಿಯಲ್ಲಿ ಸಮಬಲ ಸಾಧಿಸಿರುವ ಚೆನ್ನೈ ಮತ್ತು ಗುಜರಾತ್‌ ಗೆಲುವಿಗಾಗಿ ಕಾದಾಡಲಿದ್ದು, ತವರಿನಲ್ಲಿ ಪಂದ್ಯ ನಡೆಯುತ್ತಿರುವುದಿಂದ ಚೆನ್ನೈ ಫೇವರಿಟ್‌ ತಂಡವಾಗಿದೆ.

ಸಂಜು ಸ್ಯಾಮನ್ಸ್‌ ಕೂಡ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಉತ್ತಮ ಫಾರ್ಮ್‌ನಲ್ಲಿರುವುದು ಸಿಎಸ್‌ಕೆಗೆ ಫ್ಲಸ್‌ ಪಾಯಿಂಟ್‌ ಆಗಿದೆ. ಅಖೀಲ್ ಹುಸೇನ್ ಕೂಡ ಮುಂಬೈ ವಿರುದ್ಧ ಅತ್ಯತ್ತಮ ಬೌಲಿಂಗ್‌ ದಾಳಿ ನಡೆಸಿ ಕೇವಲ 17 ರನ್‌ಗಳಿಗೆ 4 ವಿಕೆಟ್‌ ಉರುಳಿಸಿದ್ದರು.

ಇನ್ನು ಗುಜರಾತ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 200ಕ್ಕೂ ಅಧಿಕ ರನ್‌ ಗಳಿಸಿದರೂ ಕೂಡ ಗೆಲುವು ಸಾಧ್ಯವಾಗಲಿಲ್ಲ. ಸಾಯಿ ಸುದರ್ಶನ ಶತಕವೂ ವ್ಯರ್ಥವಾಗಿತ್ತು. ಇಲ್ಲಿ ಬೌಲರ್‌ಗಳ ಕಳಪೆ ಪ್ರದರ್ಶನ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿತ್ತು.

ಸದ್ಯ ಚೆನ್ನೈ ಮತ್ತು ಗುಜರಾತ್‌ ಟೂರ್ನಿಯಲ್ಲಿ ಏಳು ಪಂದ್ಯಗಳ ಪೈಕಿ ಎರಡೂ ತಂಡಗಳು ಮೂರರಲ್ಲಿ ಜಯ ಸಾಧಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಸೋಲನ್ನು ಕಂಡಿವೆ. ಒಟ್ಟು 6 ಅಂಕಗಳೊಂದಿಗೆ ಕ್ರಮವಾಗಿ 5 ಮತ್ತು 7ನೇ ಸ್ಥಾನವನ್ನು ಅಲಂಕರಿಸಿವೆ. ಇಂದಿನ ಪಂದ್ಯದಲ್ಲಿ ಇತ್ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಯಾರೇ ಗೆದ್ದರೂ 5ನೇ ಸ್ಥಾನದಲ್ಲಿ ಇರಲಿದ್ದಾರೆ.