Home Advertisement
Home ನಮ್ಮ ಜಿಲ್ಲೆ ಉಡುಪಿ ಮಣಿಪಾಲ: ರಸ್ತೆಯಲ್ಲೇ ರೊಮಾನ್ಸ್- Video ವೈರಲ್, ಸಾರ್ವಜನಿಕರ ಆಕ್ರೋಶ

ಮಣಿಪಾಲ: ರಸ್ತೆಯಲ್ಲೇ ರೊಮಾನ್ಸ್- Video ವೈರಲ್, ಸಾರ್ವಜನಿಕರ ಆಕ್ರೋಶ

0
171

ಉಡುಪಿ: ಶಿಕ್ಷಣ ನಗರಿಯಾಗಿ ಖ್ಯಾತಿ ಪಡೆದಿರುವ ಮಣಿಪಾಲದಲ್ಲಿ ತಡರಾತ್ರಿ ನಡೆದ ಯುವ ಜೋಡಿಯ ವರ್ತನೆ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ರಸ್ತೆಯಲ್ಲೇ ಪ್ರಣಯ ಸಲ್ಲಾಪದಲ್ಲಿ ತೊಡಗಿದ್ದ ಯುವಕ-ಯುವತಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದೆ.

ರಸ್ತೆಯಲ್ಲೇ ಅಸಭ್ಯ ವರ್ತನೆ – ಜನರ ಆಕ್ರೋಶ : ಮಣಿಪಾಲದ ಬ್ಯುಸಿ ರಸ್ತೆಯಲ್ಲೇ ಯುವ ಜೋಡಿ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯವನ್ನು ಕಂಡ ಕೆಲವರು ತಕ್ಷಣವೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ವರ್ತನೆ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ವೀಡಿಯೊ : ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಯುವಜನರ ವರ್ತನೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು “ವೈಯಕ್ತಿಕ ಸ್ವಾತಂತ್ರ್ಯ” ಎಂದು ಸಮರ್ಥಿಸಿದರೆ, ಮತ್ತಷ್ಟು ಜನ ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡಬೇಕು, ಈ ರೀತಿಯ ಅಸಭ್ಯ ವರ್ತನೆಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಖಂಡಿಸಿದ್ದಾರೆ.

ಮಣಿಪಾಲಕ್ಕೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಪ್ರಮುಖ ವಿದ್ಯಾಕೇಂದ್ರವಾಗಿದೆ. ಹೈಟೆಕ್ ಮತ್ತು ಬಹುಸಾಂಸ್ಕೃತಿಕ ವಾತಾವರಣದ ಪರಿಣಾಮವಾಗಿ ಕೆಲ ಯುವಕರು ವಿದೇಶಿ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ನಿಯಂತ್ರಣಕ್ಕೆ ಆಗ್ರಹ : ಸಾರ್ವಜನಿಕರು ಇಂತಹ ಘಟನೆಗಳು ವಿಶೇಷವಾಗಿ ಹೊಸ ವರ್ಷ ಹಾಗೂ ವ್ಯಾಲೆಂಟೈನ್ ಡೇ ಸಂದರ್ಭಗಳಲ್ಲಿ ಹೆಚ್ಚಾಗುತ್ತಿವೆ ಎಂದು ಹೇಳಿ, ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಇಲಾಖೆಯಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ. ಆದರೆ ವೈರಲ್ ವೀಡಿಯೊ ಆಧರಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.