Home Advertisement
Home ಸುದ್ದಿ ದೇಶ ಆಪ್‌ಗೆ ರಾಘವ್‌ ಚಡ್ಡಾ ವಿದಾಯ; 2/3 ಸಂಸದರೊಂದಿಗೆ ಬಿಜೆಪಿ ಸೇರುವುದಾಗಿ ಘೋಷಣೆ!

ಆಪ್‌ಗೆ ರಾಘವ್‌ ಚಡ್ಡಾ ವಿದಾಯ; 2/3 ಸಂಸದರೊಂದಿಗೆ ಬಿಜೆಪಿ ಸೇರುವುದಾಗಿ ಘೋಷಣೆ!

0
146

ನವದೆಹಲಿ: ಆಮ್ ಆದ್ಮಿ ಪಕ್ಷವನ್ನು ತೊರೆದಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ತಮ್ಮ ಸಂಸದರ ದೊಡ್ಡ ಗುಂಪಿನೊಂದಿಗೆ ಬಿಜೆಪಿಗೆ ಸೇರುವುದಾಗಿ ಘೋಷಿಸಿದ್ದಾರೆ.

ದೆಹಲಿಯಲ್ಲಿಂದು ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

“ನನ್ನ ಜೀವನದ 15 ವರ್ಷಗಳನ್ನು ಆಮ್ ಆದ್ಮಿ ಪಕ್ಷಕ್ಕೆ ನಾನು ನೀಡಿದ್ದೇನೆ. ಆದರೆ, ಈಗ ಪಕ್ಷವು ಪ್ರಾಮಾಣಿಕ ರಾಜಕೀಯದಿಂದ ದೂರ ಸರಿದಿದೆ. ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುವ ಬದಲು, ಪಕ್ಷವು ಅದರ ವೈಯಕ್ತಿಕ ಲಾಭಕ್ಕಾಗಿ ಕೆಲಸ ಮಾಡುತ್ತಿದೆ. ತಪ್ಪು ಪಕ್ಷದಲ್ಲಿ ನಾನು ಸರಿಯಾದ ವ್ಯಕ್ತಿ ಎಂದು ಅನಿಸುತ್ತಿದೆ. ನಾನು ಪಕ್ಷದಿಂದ ದೂರ ಸರಿದು ಜನರಿಗೆ ಹತ್ತಿರವಾಗುತ್ತಿದ್ದೇನೆ” ಎಂದು ಚಡ್ಡಾ ಹೇಳಿದರು.