Home Advertisement
Home ಸಿನಿ ಮಿಲ್ಸ್ ದೀಪಿಕಾ ಪಡುಕೋಣೆ ಟ್ರೋಲಿಗರಿಗೆ ತಿರುಗೇಟು: ಪತಿಯ ಸಿನಿಮಾ ‘ಧುರಂಧರ್’2 ಬಗ್ಗೆ ಮೌನ ಮುರಿದ ‘ಬಾಲಿವುಡ್ ಕ್ವೀನ್’

ದೀಪಿಕಾ ಪಡುಕೋಣೆ ಟ್ರೋಲಿಗರಿಗೆ ತಿರುಗೇಟು: ಪತಿಯ ಸಿನಿಮಾ ‘ಧುರಂಧರ್’2 ಬಗ್ಗೆ ಮೌನ ಮುರಿದ ‘ಬಾಲಿವುಡ್ ಕ್ವೀನ್’

0
95

ಮುಂಬೈ: ಚಿತ್ರರಂಗದ ಸ್ಟಾರ್ ದಂಪತಿಗಳಾದ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ರಣ್‌ವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ ‘ಧುರಂಧರ್’ (Dhurandhar) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ವಿಶೇಷವೆಂದರೆ ಈ ಚಿತ್ರದ ಬಗ್ಗೆ ದೀಪಿಕಾ ಪಡುಕೋಣೆ ಸಾರ್ವಜನಿಕವಾಗಿ ಯಾವುದೇ ಪೋಸ್ಟ್ ಹಂಚಿಕೊಳ್ಳದ ಕಾರಣ ನೆಟ್ಟಿಗರು ತೀವ್ರವಾಗಿ ಟ್ರೋಲ್ ಮಾಡಿದ್ದರು. ಇದೀಗ ನಟಿ ದೀಪಿಕಾ ಈ ಎಲ್ಲಾ ಟೀಕೆಗಳಿಗೆ ಖಡಕ್ ಉತ್ತರ ನೀಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.

ಅಲ್ಲದೇ ಇಷ್ಟು ದಿನ ದೀಪಿಕಾ ಪತಿಯ ಚಿತ್ರ ‘ಧುರಂಧರ್’2 ಬಗ್ಗೆ ಮಾತನಾಡದೇ ಇರುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಹಾಗೇ ನಟಿ ವೈಯಕ್ತಿಕ ವಿಚಾರವಾಗಿ ಮಾತನಾಡಿದವರಿಗೆ ಸರಿಯಾಗಿ ಉತ್ತರಿಸುತ್ತೆನೆ ಎಂದು ವ್ಯಂಗ್ಯ ರೀತಿಯಲ್ಲಿ ಮಾತನಾಡಿದ್ದಾರೆ. ದೀಪಿಕಾ ಈ ಎಲ್ಲ ವಿಚಾರವನ್ನ ಈಗ ಮುಕ್ತವಾಗಿ ಟ್ರೋಲಿಗರಿಗೆ ತಿರುಗೇಟು ಕೊಟ್ಟು, ಅಭಿಮಾನಿಗಳಿಗೆ ಸಮಾಧಾನವನ್ನು ನೀಡಿದ್​​​ದಾರೆ.

ವಿವಾದದ ಹಿನ್ನೆಲೆ: ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’2 ಚಿತ್ರದ ಘೋಷಣೆಯಾದಾಗಿನಿಂದಲೂ ರಣ್‌ವೀರ್ ಅಭಿಮಾನಿಗಳಲ್ಲಿ ಕುತೂಹಲ ಮನೆಮಾಡಿದೆ. ಆದ್ರೆ ಚಿತ್ರದ ಪ್ರಚಾರದ ಸಂದರ್ಭದಲ್ಲಿ ದೀಪಿಕಾ ಪತಿಯ ಸಿನಿಮಾವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಲ್ಲ ಎಂಬ ಕಾರಣಕ್ಕೆ ಕೆಲವರು ಇದನ್ನು ‘ಕ್ಯಾಲ್ಕ್ಯುಲೇಟೆಡ್ ಸೈಲೆನ್ಸ್’ ಎಂದು ಟೀಕಿಸಿದ್ದರು. ದಂಪತಿಗಳ ನಡುವೆ ಎಲ್ಲವೂ ಸರಿಯಿಲ್ಲವೇ ಎಂಬ ಊಹಾಪೋಹಗಳೂ ಎದ್ದಿದ್ದವು.

ದೀಪಿಕಾ ನೀಡಿದ ತಿರುಗೇಟು: ಇತ್ತೀಚಿನ ಸಂವಾದವೊಂದರಲ್ಲಿ ಈ ಕುರಿತು ಮಾತನಾಡಿದ ದೀಪಿಕಾ ಪಡುಕೋಣೆ, “ಸಿನಿಮಾವನ್ನು ಬೆಂಬಲಿಸಲು ಪ್ರತಿ ಬಾರಿಯೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲೇಬೇಕೆಂಬ ನಿಯಮವಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ “ನಿಮ್ಮೆಲ್ಲರಿಗಿಂತ ಮುಂಚೆಯೇ ನಾನು ಸಿನಿಮಾ ನೋಡಿದ್ದೇನೆ, ಈಗ ಯಾರು ಜೋಕ್?” ಎಂದು ಹಾಸ್ಯಸ್ಪದವಾಗಿ ಟ್ರೋಲಿಗರಿಗೆ ಟಾಂಗ್ ನೀಡಿದ್ದಾರೆ. ಈ ನಟಿ ದೀಪಿಕಾ ಮನೆಯಲ್ಲೇ ಪತಿಗೆ ಸಂಪೂರ್ಣ ಬೆಂಬಲ ನೀಡುತ್ತಿರುವುದನ್ನ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ‘ಧುರಂಧರ್’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾದಾಗಲೂ ದೀಪಿಕಾ ಅಭಿನಂದನೆ ಸಲ್ಲಿಸಿದ್ದರು. ಈಗ ನೇರ ಮಾತುಗಳು ಅನಗತ್ಯ ಟೀಕೆಗಳಿಗೆ ಫುಲ್ ಸ್ಟಾಪ್ ಇಟ್ಟಿವೆ. ಪತಿ ರಣವೀರ್ ವೃತ್ತಿಜೀವನದ ಮೈಲಿಗಲ್ಲುಗಳಿಗೆ ದೀಪಿಕಾ ಸದಾ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.